ಪಾಕ್ಗೆ ಸದ್ಯಕ್ಕಿಲ್ಲ IMF ನೆರವು!: ಬಜೆಟ್ ಅಂಶಗಳ ಬಗ್ಗೆ ಹಲವು ತಕರಾರು
Team Udayavani, Jun 16, 2023, 7:02 AM IST
ಇಸ್ಲಾಮಾಬಾದ್: ಆರ್ಥಿಕ ದಿವಾಳಿಯಂಚಿನಲ್ಲಿರುವ ಪಾಕಿಸ್ತಾನದ ಸ್ಥಿತಿ ಸದ್ಯಕ್ಕೆ ದುರಸ್ತಿಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ವಾರವಷ್ಟೇ ಮಂಡಿಸಲಾಗಿದ್ದ 14.4 ಟ್ರಿಲಿಯನ್ ಪಾಕಿಸ್ತಾನಿ ರೂ.ಗಳ ಬಜೆಟ್ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಕರಾರು ತೆಗೆದಿದೆ. ಆದರೆ, ಪಾಕಿಸ್ತಾನಕ್ಕೆ ಬೇಕಾಗಿರುವ ನೆರವು ನೀಡುವುದಾಗಿಯೂ ಹೇಳಿದೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಇಸ್ಲಾಮಾಬಾದ್ನಲ್ಲಿರುವ ಐಎಂಎಫ್ ಪ್ರತಿನಿಧಿ ಏಸ್ತರ್ ಪರೇಜ್ ರೂಯಿಜ್ ಹೊಸತಾಗಿ ಪಾಕ್ ಸರ್ಕಾರ ಪರಿಚಯಿಸಿರುವ ತೆರಿಗೆ ಕ್ಷಮಾದಾನ ಯೋಜನೆ ಕೆಟ್ಟ ಉದಾಹರಣೆಯಾಗಿದೆ ಎಂದಿದ್ದಾರೆ. ತೆರಿಗೆ ನೆಲೆಯನ್ನು ಇನ್ನಷ್ಟು ವಿಸ್ತೃತಗೊಳಿಸುವ ಅವಕಾಶವನ್ನು ಈ ಬಜೆಟ್ ಕಳೆದುಕೊಂಡಿದೆ. ಹಾಗೆಯೇ ಹೊಸ ತೆರಿಗೆ ವೆಚ್ಚಗಳ ದೀರ್ಘಪಟ್ಟಿಯು, ತೆರಿಗೆ ಪದ್ಧತಿಯಲ್ಲಿ ಕ್ರಮಬದ್ಧತೆ ತರುವ ಅವಕಾಶವನ್ನು ಇಲ್ಲ ಮಾಡಿದೆ ಎಂದು ಹೇಳಿದ್ದಾರೆ. ಇಷ್ಟರ ನಡುವೆಯೂ ಪಾಕ್ ಸರ್ಕಾರಕ್ಕೆ ಬಜೆಟ್ ಪರಿಷ್ಕರಣೆ ಮಾಡಲು ನೆರವು ನೀಡುವುದಾಗಿ ಐಎಂಎಫ್ ಹೇಳಿದೆ. ಅಲ್ಲಿಗೆ ಪಾಕ್ಗೆ ಹಣ ಸದ್ಯಕ್ಕಂತೂ ಸಿಗುವುದಿಲ್ಲ ಎಂದು ಖಾತ್ರಿಯಾಗಿದೆ.
ಐಎಂಎಫ್ ಪಾಕಿಸ್ತಾನ ಪ್ರತಿನಿಧಿ ಎಸ್ತರ್ ಪೆರೆಜ್ ರೂಯಿಜ್ ಬಜೆಟ್ ಮಂಡನೆಗೆ ಹಿಂದಿನ ದಿನವೇ, ಪಾಕ್ ಸರ್ಕಾರ ಮೂರು ವಿಷಯಗಳಲ್ಲಿ ಐಎಂಎಫ್ ಅನ್ನು ಸಮಾಧಾನಪಡಿಸಬೇಕಾಗಿದೆ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.