Moodabidri; ತಾತ್ಕಾಲಿಕ ಮಾರುಕಟ್ಟೆಗೆ ಮುಕ್ತಿ ಎಂದು?
Team Udayavani, Jun 16, 2023, 3:44 PM IST
ಮೂಡುಬಿದಿರೆ: ಪೇಟೆಯಲ್ಲಿದ್ದ ಪುರಸಭಾ ದಿನವಹಿ ಮಾರುಕಟ್ಟೆ ಮೂಡುಬಿದಿರೆಯ ಹೃದಯ ಭಾಗದಂತಿರುವ, ಕ್ರೀಡಾ ಇಲಾಖೆಯ ಸುಪರ್ದಿಯಲ್ಲಿರುವ ಸ್ವರಾಜ್ಯ ಮೈದಾನದಲ್ಲಿ ತಾತ್ಕಾಲಿಕವೆಂದು ಠಿಕಾಣಿ ಹೂಡಿ ವರ್ಷ 5 ಕಳೆದಿದೆ. ನ್ಯಾಯಾಲಯದ ಕಟ್ಟೆ ಏರಿದ ಪೇಟೆಯ ಮಾರುಕಟ್ಟೆ ನಿರ್ಮಾಣದ ಪ್ರಕರಣ ಇನ್ನೂ ಅಲ್ಲೇ ಬಾಕಿಯಾಗಿದೆ. ಇತ್ತ ಸ್ವರಾಜ್ಯಮೈದಾನದಲ್ಲಿ ಯಾರದೇ ಅಂಕೆ ಇಲ್ಲದೆ, ಅಸಹ್ಯ , ಅನಾರೋಗ್ಯಕರ ನಿರ್ಮಾಣ ಮತ್ತು ಇತರ ಬೆಳವಣಿಗೆಗಳು ಮೂಡುಬಿದಿರೆಯ ಸ್ವಾಸ್ಥ್ಯವನ್ನು ಕೆಡಿಸುವ ಎಲ್ಲ ಲಕ್ಷಣಗಳು ತೋರುತ್ತಿವೆ.
ಪೇಟೆಯಲ್ಲಿ ಮಾರುಕಟ್ಟೆ ಇದ್ದಾಗ ಮೀನು ಮಾರುಕಟ್ಟೆ ಸ್ವಲ್ಪ ಅಸಹ್ಯ ವಾತಾವರಣದಲ್ಲಿದ್ದರೆ, ಮೈದಾನಕ್ಕೆ ಬಂದ ಬಳಿಕ ಅದಕ್ಕೆ ಪೂರ್ವ ಭಾಗದಲ್ಲಿ ವ್ಯವಸ್ಥಿತ ಸ್ವರೂಪವನ್ನು ಒದಗಿಸಲಾಗಿದೆ. ಪೇಟೆಯಲ್ಲಿ ಒಂದೋ ಎರಡೋ ಕ್ಯಾಂಟೀನ್‌ಗಳಿದ್ದರೆ ಇಲ್ಲಿ ಸಾಲು ಸಾಲಾಗಿ ಕ್ಯಾಂಟೀನ್‌ಗಳು ಕಾರ್ಯಾಚರಿಸುತ್ತಿವೆ. ನಿಜಕ್ಕಾದರೆ, ಪೇಟೆಯಲ್ಲಿ ಇದ್ದ ಅಂಗಡಿಗಳಿಗಷ್ಟೇ ಸ್ವರಾಜ್ಯ ಮೈದಾನದಲ್ಲಿ ಅವಕಾಶ ನೀಡಬೇಕಾಗಿತ್ತು. ಆದರೆ, ಈ ಕಳೆದ 5 ವರ್ಷಗಳಲ್ಲಿ ಇಲ್ಲಿ ಅದರ ಒಂದೂವರೆ ಪಟ್ಟು ಅಂಗಡಿಗಳಿಗೆ, ಪುಟ್ಟ ಪುಟ್ಟ ಗಾಡಿ, ಕ್ಯಾಂಟೀನುಗಳಿಗೆ ಅವಕಾಶ ನೀಡಲಾಗಿದೆ. ಹಾಗೆಲ್ಲ ಸಾಲು ಸಾಲಾಗಿ ಅಂಗಡಿಗಳಿಗೆ ಅವಕಾಶ ನೀಡಿದ್ದು ಯಾರು ? ನೀರಿನ ಪೂರೈಕೆ ಮಾಡಿ ದವ ರಾರು?ಎಂಬ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ.
ಯಾರೇ ಇರಲಿ, ಕಾರಣಾಂತರಗಳಿಂದ ಇಂಥ ಸೊÌàದ್ಯೋಗಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನೋಣ. ಆದರೆ ಇರುವ ಜಾಗವನ್ನು ಸಮರ್ಪಕವಾಗಿ ಬಳಸಲಾಗುತ್ತಿದೆಯೋ? ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿ ದೆಯೋ? ವಿಶೇಷವಾಗಿ ಕಮಟು ವಾಸನೆ ಯೊಂದಿಗೆ ಮಾರುಕಟ್ಟೆಯ ನೈಋತ್ಯ ಭಾಗದಲ್ಲಿ ಹೊರಸೂಸುತ್ತ ಹೊಲಸು ನೀರು ರಿಂಗ್ ರೋಡಿನಲ್ಲಿ ಹರಿಯುತ್ತ ಪರಿಸರ ದಿನಾಚರಣೆಯನ್ನು ನಿತ್ಯವೂ ಅಣಕಿಸುವಂತಾಗಿರುವುದಕ್ಕೆ ಪರಿಹಾರ ಮಾರ್ಗ ಏನು?
ತಾತ್ಕಾಲಿಕ ಮಾರುಕಟ್ಟೆಯಲ್ಲಿ ಯಾವುದೇ ರೀತಿ, ನೀತಿ, ನಿಯಮಗಳನ್ನು ಪಾಲಿಸದೆ ಖುಷಿ ಬಂದ ಹಾಗೆ ನಿರ್ಮಾಣ ಮತ್ತಿತರ ಬೆಳವಣಿಗೆಗಳಿಗೆ ಅವಕಾಶ ನೀಡಿದವರು ಈಗ ಸಮರ್ಪಕ ಪರಿಹಾರ ಕ್ರಮವನ್ನು ಹೇಗೆ ಜರಗಿಸುತ್ತಾರೆ ಎಂಬುದು ಕುತೂಹಲಕಾ ರಿಯಾಗಿದೆ. ಕ್ರೀಡಾಂಗಣ, ಈಜುಕೊಳ, ಕನ್ನಡ ಭವನ, ಮಾರಿ ಗುಡಿಗಳು, ಅಯ್ಯಪ್ಪ ದೇವಸ್ಥಾನ, ಕಾಮ ಧೇನು ಸಭಾಂಗಣ ಇವೆಲ್ಲ ಇರುವ ಸ್ವರಾಜ್ಯ ಮೈದಾನದ “ಪರಿಸರ’ವನ್ನು ಸ್ವತ್ಛ, ಸುಂದರ ವಾಗಿ ಉಳಿಸಬೇಡವೇ? ಉಳಿಸ ಬೇಕಾದರೆ ಮಾರುಕಟ್ಟೆಯನ್ನು ಬೇಕಾಬಿಟ್ಟಿಯಾಗಿ ಅಭಿವೃದ್ಧಿ ಮಾಡುವುದಕ್ಕೆ ಕಡಿವಾಣ ಹಾಕಬೇಡವೇ?
ಪತ್ರಿಕಾ ವರದಿ: ಎಚ್ಚೆತ್ತ ಪುರಸಭೆ -ಕಾಮಗಾರಿಯ ಗೊಂದಲ
ಹೊಲಸು ನೀರು ರಿಂಗ್‌ರೋಡಿನಲ್ಲಿ ಹರಿಯುತ್ತಿರುವ ಬಗ್ಗೆ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟವಾದ ಬೆನ್ನಲ್ಲಿಯೇ ಪರಿಸರ ಅಧಿಕಾರಿ ಅಂಗಡಿಗಳಿಗೆ ನೀರು ಬಿಡದಂತೆ ಎಚ್ಚರಿಕೆ ನೀಡಿ ಆಗಿದೆ. ತೋಡು ಮುಂದುವರಿಸಿ ಮಳೆ ನೀರು ಹರಿವಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ಉತ್ತರಿಸಿದ್ದೂ ಆಗಿದೆ! ಮರುದಿನ ದಿಢೀರ್ ಆಗಿ ಜೆಸಿಬಿ ಬಂದು ಚರಂಡಿಯನ್ನು ಕೊರೆಯುತ್ತ ಮುಂದೆ ಸಾಗಿದಾಗ ಕ್ರೀಡಾಂಗಣದ ಬದಿಯಲ್ಲಿ ಹಾಕಿದ ಕಾಂಕ್ರೀಟ ಹೊದಿಕೆಯನ್ನು ಯಾವುದೇ ಮಾತುಕತೆ, ಸೂಚನೆ ಇಲ್ಲದೆ ಅಗೆಯ ತೊಡಗಿದಾಗ ಕ್ರೀಡಾಂಗಣಕ್ಕೆ ಸಂಬಂಧಿಸಿದವರು ಈ ಕಾರ್ಯಾಚರಣೆಯ ಸಿಂಧುತ್ವ ಪ್ರಶ್ನಿಸಿದಾಗ ಕಾಮಗಾರಿ ನಿಂತಿದೆ.
ಕ್ರಮ ಜರಗಿಸಲಾಗುವುದು
ಸದ್ರಿ ಸಮಸ್ಯೆಯ ಬಗ್ಗೆ ಚರಂಡಿ ಕಾಮಗಾರಿಗಾಗಿ ಎಂಜಿನಿಯರ್ ಅವರ ಮೂಲಕ ಸುಮಾರು 5.50 ಲಕ್ಷ ವೆಚ್ಚದ ಯೋಜನೆ ಹಾಕಿಕೊಂಡಿದ್ದು ಸ. ಆಯುಕ್ತರ ಮುಂದಿಟ್ಟು ಮುಂದಿನ ಕ್ರಮ ಜರಗಿಸಲಾಗುವುದು.
-ಶಿವ ನಾಯ್ಕ…,
ಪುರಸಭೆ ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.