Sirsi ಬಂಗಾರದ ಅಂಗಡಿಯಲ್ಲಿ ಕಳ್ಳತನ; ಮೂವರು ಮಹಿಳೆಯರ ಬಂಧನ
Team Udayavani, Jun 16, 2023, 8:13 PM IST
ಶಿರಸಿ: ಇಲ್ಲಿನ ಬಂಗಾರದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಆಭರಣ ದೋಚಿದ ಘಟನೆ ನಡೆದ 24 ಗಂಟೆಯೊಳಗೆ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ ಘಟನೆ ನಡೆದಿದೆ.
ನಗರದ ಉರ್ದು ಶಾಲಾ ಹಿಂದಿನ ಮಾರುಕಟ್ಟೆ ರಸ್ತೆಯ ಓಂಕಾರ್ ಜ್ಯುವೆಲ್ಲರಿ ಅಂಗಡಿಯಲ್ಲಿ ಸುಮಾರು 93ಸಾವಿರ ರೂ ಮೌಲ್ಯದ ಚಿನ್ನಾಭರಣ ಗಳನ್ನು ಕದ್ದು ಪರಾರಿಯಾಗಿದ್ದ ಮೂವರು ಚೋರಿಯರು ಕಳ್ಳತನವಾದ ಚಿನ್ನಾಭರಣಗಳ ಸಹಿತ ಕಂಬಿ ಎಣಿಸುತ್ತಿದ್ದಾರೆ. ಶಿರಸಿ ನಗರ ಠಾಣೆ ಪೊಲೀಸರು ಆರೋಪಿತರಿಗೆ ಕಾನೂನು ಕೋಳ ತೊಡಿಸಿದ್ದಾರೆ.
ಅಡುಗೆ ವೃತ್ತಿಯ ಗದಗದ ಸಂಗೀತಾ ಯಲ್ಲೋಸಾ ಬಾಕಳೆ(42), ಹುಬ್ಬಳ್ಳಿಯ ಸೀರೆ ವ್ಯಾಪಾರಿ ರಾಜೇಶ್ವರಿ ಬಾಂಡಗೇ (48) ಹಾಗೂ ಗದಗದ ಟೇಲರ್ ಶೋಭಾಬಾಯಿ ಲಕ್ಷಮಣಸಾ ಜಿತೂರಿ (68)ಬಂಧಿತ ಆರೋಪಿಗಳಾಗಿದ್ದಾರೆ.
ಜೂನ್ 15ರಂದು ವಾಮನ ನಾಗೇಶ್ ರಾಯ್ಕರ್ ಎಂಬುವವರಿಗೆ ಸೇರಿದ ಓಂಕಾರ್ ಜ್ಯುವೆಲ್ಲರಿ ಅಂಗಡಿಗೆ ಬಂದು ಚಿನ್ನಾಭರಣ ಗಳನ್ನು ಕದ್ದು ಪರಾರಿಯಾಗಿದ್ದರು.ಕಳ್ಳತನದ ದೃಶ್ಯಾವಳಿಗಳು ಸಿ ಸಿ ಕ್ಯಾಮೆರಾ ದಲ್ಲಿ ಸೆರೆ ಯಾಗಿತ್ತು. ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಶಿರಸಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
China Badminton: ಚಿರಾಗ್- ಸಾತ್ವಿಕ್ ಸೆಮಿಫೈನಲ್‌ಗೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.