Hindus ಸಂಘಟಿತರಾಗದಿರುವುದು ಸೋಲಿನ ಮುಖ್ಯ ಕಾರಣ: ರಣಜಿತ್ ಸಾವರ್ಕರ್
Team Udayavani, Jun 16, 2023, 11:33 PM IST
ಪಣಜಿ: ಹಿಂದೂಗಳು ಸಂಘಟಿತರಾಗದಿರುವುದು ನಮ್ಮ ಸೋಲಿನ ಮುಖ್ಯ ಕಾರಣವಾಗಿದೆ ಎಂದು ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಹಾಗೂ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಮೊಮ್ಮಗ ರಣಜಿತ್ ಸಾವರ್ಕರ್ ಹೇಳಿದರು.
ಅವರು ಗೋವಾದ ಫೋಂಡಾದಲ್ಲಿರುವ ಶ್ರೀ ರಾಮನಾಥ ದೇವಸ್ಥಾನದಲ್ಲಿ ಶುಕ್ರವಾರದಿಂದ ಆರಂಭಗೊಂಡ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಅಂದರೆ 11ನೇ ಹಿಂದೂ ರಾಷ್ಟ್ರ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದ್ಯದ ಸ್ಥಿತಿಯಲ್ಲಿ ಶೇ. 80 ರಷ್ಟು ಹಿಂದೂಗಳಿದ್ದೇವೆ, ಆದರೆ ನಾವು ಜಾತಿ, ಪಂಗಡ, ಪ್ರಾಂತಗಳಲ್ಲಿ ವಿಭಜಿಸಲ್ಪಟ್ಟಿದ್ದೇವೆ. 1790 ರಲ್ಲಿ ಭಾರತದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚು ಕಡಿಮೆ ಶೇ. 100 ರಷ್ಟು ಇತ್ತು. ಮೊಹಮ್ಮದ್ ಬಿನ್ ಕಾಸಿಂನು ಭಾರತದ ಮೇಲೆ ದಾಳಿ ಮಾಡಿದಾಗ ಹಿಂದೂಗಳಲ್ಲಿ ಒಡಕನ್ನುಂಟು ಮಾಡಿ ಹಿಂದೂ ರಾಜರನ್ನು ಸೋಲಿಸಿದನು. ನೌಖಾಲಿಯಲ್ಲಿ ಹಿಂದೂಗಳ ನರಮೇಧವಾದಂತೆ ಇಂದಿಗೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಶಿರಚ್ಛೇದವಾಗುತ್ತಿದೆ. ಹಿಂದೆಲ್ಲ ಖಡ್ಗದ ಬಲದಲ್ಲಿ ಯುದ್ಧವು ನಡೆಯುತ್ತಿತ್ತು. ಆದರೆ ಈಗ ಯುದ್ಧವು ಆರ್ಥಿಕ ಮಟ್ಟದಲ್ಲಿದೆ. ಹಲಾಲ್ ಜಿಹಾದ್ ಮೂಲಕ ಮುಸ್ಲಿಮರು ಪ್ರತಿಯೊಂದು ಕ್ಷೇತ್ರ ಮತ್ತು ವ್ಯವಹಾರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಪ್ರತ್ಯುತ್ತರ ನೀಡುವ ನಿಟ್ಟಿನಲ್ಲಿ ಪ್ರತಿಯೊಂದು ವ್ಯವಹಾರದಲ್ಲಿ ಹಿಂದೂಗಳನ್ನು ಸೇರಿಸಿಕೊಂಡು ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಅವರಿಗೆ ಉತ್ತರಿಸಬೇಕು ಎಂದರು
ಅಧಿವೇಶನಕ್ಕೆ ದೇಶವಿದೇಶಗಳಿಂದ ಹಾಗೂ ಭಾರತದ ವಿವಿಧ ರಾಜ್ಯಗಳಿಂದ 312 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಮಾತನಾಡಿ- ಖಾಲಿಸ್ತಾನದಲ್ಲಿ ಭಯೋತ್ಪಾದನೆ, ಶ್ರೀರಾಮನವಮಿ-ಹನುಮಾನಜಯಂತಿಯಂತಹ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿದ ಗಲಭೆಗಳು, ಸಲಿಂಗ ವಿವಾಹಕ್ಕೆ ಬೆಂಬಲ, ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿ ವ್ಯಭಿಚಾರ ಒಪ್ಪಿಗೆ, ಹೆಚ್ಚುತ್ತಿರುವ ಅಶ್ಲೀಲತೆ, ಅನೈತಿಕತೆಯನ್ನು ಸಾಂವಿಧಾನಿಕಗೊಳಿಸುವ ಪ್ರಯತ್ನಗಳು ಇಂತಹ ಅನೇಕ ಸವಾಲುಗಳನ್ನು ಹಿಂದೂಗಳು ಪ್ರಸ್ತುತ ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಸೆಕ್ಯುಲರ್ ರಾಜ್ಯವ್ಯವಸ್ಥೆಯಲ್ಲಿ ಯಾವುದೇ ಉತ್ತರವಿರದೇ ಶಾಶ್ವತ ಹಿಂದೂ ರಾಷ್ಟ್ರವೇ ಅದಕ್ಕೆ ಉತ್ತರವಾಗಿದೆ. ಸನಾತನ ಧರ್ಮದರ್ಶನದಲ್ಲಿ ಹಿಂದೂ ವಿಶ್ವದ, ಅಂದರೆ ವೈಶ್ವಿಕ ಹಿಂದೂ ರಾಷ್ಟ್ರದ ವಿಚಾರವಿದೆ. ಆದ್ದರಿಂದ ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಅಂದರೆ ಒಂದು ರೀತಿಯ ಜನಮಂಥನವಾಗಿದೆ. ಈ ಜನಮಂಥನದಿಂದ ಒಟ್ಟಾಗಿರುವ ಈ ಹಿಂದು ಶಕ್ತಿಯು ಹಿಂದು ರಾಷ್ಟ್ರ ನಿರ್ಮಾಣದ ವಿಶ್ವಕಲ್ಯಾಣಕಾರಿ ಕಾರ್ಯಕ್ಕಾಗಿ ಜೋಡಿಸಲ್ಪಡುವುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರು ಪ್ರತಿಪಾದಿಸಿದರು.
ಗ್ರಂಥಗಳ ಪ್ರಕಾಶನ
ಈ ವೇಳೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಅಮೂಲ್ಯ ಬೋಧನೆಗಳು (ಖಂಡ 1) : ಸಾಧನೆಯನ್ನು ಪ್ರತ್ಯಕ್ಷವಾಗಿ ಕಲಿಸುವ ಪದ್ಧತಿ, ಈ ಹಿಂದಿ ಮತ್ತು ಮರಾಠಿ ಗ್ರಂಥವನ್ನು ಭಗವತಾಚಾರ್ಯ ಶ್ರೀ ರಾಜೀವಕೃಷ್ಣಜಿ ಮಹಾರಾಜ ಝಾ, ಪೂ. ಭಾಗೀರಥಿ ಮಹಾರಾಜ, ಪೂ. ರಾಮಜ್ಞಾನಿದಾಸ ಮಹಾತ್ಯಾಗಿ ಮಹಾರಾಜ, ನ್ಯಾಯವಾದಿ ಪೂ. ಹರಿಶಂಕರ್ ಜೈನ್, ಮಹಂತ ದೀಪಕ ಗೋಸ್ವಾಮಿ ಅವರಿಂದ ಹಾಗೂ ಠಾಣೆ (ಮಹಾರಾಷ್ಟ್ರ) ದುರ್ಗೇಶ ಪರುಳಕರ್ ಅವರ ಮಹಾಭಾರತದ ಅಲೌಲಿಕ ಚರಿತ್ರೆಗಳು : ಖಂಡ 1, ನಿಷ್ಕಾಮ ಕರ್ಮಯೋಗಿ ಭೀಷ್ಮ ಈ ಗ್ರಂಥವನ್ನು ದುರ್ಗೇಶ ಪಾರುಳಕರ, ಸದ್ಗುರು ಡಾ. ಚಾರುದತ್ತ ಪಿಂಗಳೆ, ಕೇರಳ ಪ್ರದೇಶ ನಿರ್ವಹಣಾ ಸಮಿತಿಯ ಆಚಾರ್ಯ ಪಿ.ಪಿ. ಎಂ. ನಾಯರ್, ಪ.ಪೂ. ಯತಿಮಾಂ ಚೇತನಾನಂದ ಸರಸ್ವತಿ ಅವರ ಶುಭಹಸ್ತದಿಂದ ಪ್ರಕಾಶನ ಮಾಡಲಾಯಿತು.
ಅಧಿವೇಶನವನ್ನು ಶಂಖನಾದ ಮತ್ತು ಗಣ್ಯರಿಂದ ದೀಪ ಪ್ರಜ್ವಲನೆಯೊಂದಿಗೆ ಆರಂಭಿಸಲಾಯಿತು. ದೀಪ ಬೆಳಗಿಸಿದ ನಂತರ ವೇದಮಂತ್ರಗಳ ಪಠಣ ಮಾಡಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ನೀಡಿದ ಸಂದೇಶವನ್ನು ಸದ್ಗುರು ಸತ್ಯವಾನ ಕದಮ್ ಇವರು ಓದಿ ಹೇಳಿದರು.
ಈ ಸಂದರ್ಭದಲ್ಲಿ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾರಾಜರ ಉತ್ತರಾಧಿಕಾರಿ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಮಹಾರಾಜರು ನೀಡಿದ ಆಶಿರ್ವಾದರೂಪಿ ಸಂದೇಶದ ವಿಡಿಯೋ ಪ್ರದರ್ಶಿಸಲಾಯಿತು. ಧರ್ಮದ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಮತ್ತು ಧರ್ಮಾಚರಣೆ ಮಾಡುವ ಮೂಲಕ ಧರ್ಮವನ್ನು ರಕ್ಷಿಸಲು ಇಂತಹ ಅಧಿವೇಶನಗಳು ಅತ್ಯಂತ ಅವಶ್ಯಕವಾಗಿದೆ, ಎಂದು ಅವರು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಇದರೊಂದಿಗೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೀಡಿದ ಸಂದೇಶವನ್ನೂ ಓದಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.