ಮನೆಗಳಲ್ಲಿ ಅಕ್ರಮ ಸಿಲಿಂಡರ್ ಭರ್ತಿ; ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಹೊಟೇಲ್ ಗಳಲ್ಲಿ ಗೃಹಬಳಕೆ ಸಿಲಿಂಡರ್ ಬಳಕೆ;  ಸಿಲಿಂಡರ್ ಸೀಜ್

Team Udayavani, Jun 17, 2023, 2:00 PM IST

ಮನೆಗಳಲ್ಲಿ ಅಕ್ರಮ ಸಿಲಿಂಡರ್ ಭರ್ತಿ; ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಗಂಗಾವತಿ:ಮನೆಗಳಲ್ಲಿ ಅಕ್ರಮವಾಗಿ ಸಿಲಿಂಡರ್ ಗಳನ್ನು ಸಂಗ್ರಹಿಸಿ ಬೇರೆ ಸಿಲಿಂಡರ್ ಗಳಿಗೆ ಭರ್ತಿ ಮಾಡುವ ದಂಧೆಕೋರರ ಮನೆಗಳು ಮತ್ತು ಗೃಹಬಳಕೆ ಸಿಲಿಂಡರ್ ಗಳನ್ನು ಬಳಕೆ ಮಾಡುತ್ತಿದ್ದ ಹೊಟೇಲುಗಳು ಮತ್ತು ಬಾರ್ ರೆಸ್ಟೋರೆಂಟ್ ಗಳ ಮೇಲೆ ಆಹಾರ ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಸುಮಾರು ಒಂದು ಸಾವಿರ ಸಿಲಿಂಡರ್ ಗಳನ್ನು ವಶ ಪಡೆದಿದ್ದಾರೆ.

ಪ್ರಶಾಂತ ನಗರದ ಮನೆಯೊಂದರಲ್ಲಿ 40 ಸಿಲಿಂಡರ್, ಚಂದ್ರಹಾಸ ಟಾಕೀಸ್ ಹತ್ತಿರ ಸೇರಿ ನಗರದ ವಿವಿಧ ವಾರ್ಡ್ ಗಳ ಮನೆಗಳೆ ಅಕ್ರಮವಾಗಿ ಸಿಲಿಂಡರ್ ಗಳನ್ನು ಸಂಗ್ರಹ ಮಾಡಿ ಆಟೋ,ಕಾರುಗಳಿಗೆ ಇತರೆ ಉಪಯೋಗಗಳಿಗೆ ಸಿಲಿಂಡರ್ ಭರ್ತಿ ಮಾಡುವ ದಂಧೆ ಹೆಚ್ಚಾಗಿತ್ತು. ರಾಜ್ಯದ ವಿವಿಧೆಡೆ ಸಿಲಿಂಡರ್ ಸ್ಪೋಟದಂತಹ ಘಟನೆ ಹಿನ್ನೆಲೆಯಲ್ಲಿ ಅನಾವುತಗಳಾಗಿದ್ದವು. ಕೂಡಲೇ ಎಚ್ಚೆತ್ತ ಆಹಾರ ಇಲಾಖೆಯ ಅಧಿಕಾರಿಗಳು ಶನಿವಾರ ಬೆಳಗಿನಿಂದ ದಾಳಿ ನಡೆಸಿದ್ದಾರೆ. ಕೆಲವೆಡೆ ಸಿಲಿಂಡರ್ ಗ್ಯಾಸ ವಿತರಣೆಯ ಕೆಲ ಡೀಲರ್ ಗಳು ಸೀಜ್ ಕಾರ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಜರುಗಿದೆ.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಾರಟಗಿ, ಹೊಸಪೇಟೆ ಕಮಲಾಪೂರ,ಕಂಪ್ಲಿಯಿಂದ ಸಿಲಿಂಡರ್ ಗಳನ್ನು ಅಕ್ರಮವಾಗಿ ಹೊಟೇಲ್ ಸೇರಿ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡಲು ಅಕ್ರಮ ಸಿಲಿಂಡರ್ ದಂಗೆಕೋರರು ಹೆಚ್ಚಿನ ಹಣಕ್ಕೆ ಪೂರೈಕೆ ಮಾಡುತ್ತಿದ್ದು ಹಲವು ಭಾರಿ ಅಕ್ರಮ ತಡೆಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಇದೀಗ ಮೇಲಾಧಿಕಾರಿಗಳ‌ ಸೂಚನೆ ಮೇರೆಗೆ ಅಕ್ರಮ ಸಿಲಿಂಡರ್ ಬಳಕೆ ಮಾಡುವವರ ವಿರುದ್ದ ಆಹಾರ ಇಲಾಖೆ ಸೀಜ್ ಮಾಡುತ್ತಿದ್ದು ಅಕ್ರಮವೆಸಗುವವರ ವಿರುದ್ದ ಪೊಲೀಸ್ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವರೋ ಇಲ್ಲವೋ .ಅಥವಾ ರಾಜಕೀಯ ಒತ್ತಡಗಳಿಗೆ ಮಣಿದು ಸಿಲಿಂಡರ್ ಗಳನ್ನು ವಾಪಸ್ ಮರಳಿಸುವರೋ ಎಂದು ಕಾಯ್ದು‌ ನೋಡಬೇಕಿದೆ.

ಕಠಿಣ ಕ್ರಮ: ಅಕ್ರಮ ಸಿಲಿಂಡರ್ ದಂಧೆ ನಡೆಸುವ ಕುರಿತು ಹಲವು ದೂರಿನ ಹಿನ್ನೆಲೆಯಲ್ಲಿ ‌ನಗರ ಮತ್ತು ಗ್ರಾಮೀಣರು ಭಾಗದಲ್ಲಿ ಸೀಜ್ ಕಾರ್ಯ ಕೈಗೊಂಡಿದ್ದು ಅಕ್ರಮ ನಡೆಸುವವರ ವಿರುದ್ಧ ಮೇಲಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಶಿರಾಸ್ಥೆದಾರ ರವಿ‌ ಉದಯವಾಣಿ ಗೆ ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಶೇಖರಪ್ಪ,ಪವನಕುಮಾರ ಸೇರಿ ಹಲವರಿದ್ದರು.

ಟಾಪ್ ನ್ಯೂಸ್

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು

Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು

ಜೆಪಿಸಿ ಅಧ್ಯಕ್ಷ ಪಾಲ್‌ ಕರ್ನಾಟಕ ಪ್ರವಾಸ ಏಕಪಕ್ಷೀಯ:ಅಸಾಸುದ್ದೀನ್‌ ಒವೈಸಿ

JPC ಅಧ್ಯಕ್ಷ ಪಾಲ್‌ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್‌ ಒವೈಸಿ

Tejasvi-surya

Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್‌ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Maharashtra: ಉದ್ಧವ್‌ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!

Maharashtra: ಉದ್ಧವ್‌ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು

ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

ಕೊಪ್ಪಳ: 3 ದಿನದಲ್ಲಿ 300 ಜನರ ಮೇಲೆ ಕೇಸ್‌53 ಪ್ರಕರಣ -4.75 ಲಕ್ಷ ರೂ. ವಶ

ಕೊಪ್ಪಳ: 3 ದಿನದಲ್ಲಿ 300 ಜನರ ಮೇಲೆ ಕೇಸ್‌53 ಪ್ರಕರಣ -4.75 ಲಕ್ಷ ರೂ. ವಶ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು

Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು

ಜೆಪಿಸಿ ಅಧ್ಯಕ್ಷ ಪಾಲ್‌ ಕರ್ನಾಟಕ ಪ್ರವಾಸ ಏಕಪಕ್ಷೀಯ:ಅಸಾಸುದ್ದೀನ್‌ ಒವೈಸಿ

JPC ಅಧ್ಯಕ್ಷ ಪಾಲ್‌ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್‌ ಒವೈಸಿ

Tejasvi-surya

Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್‌ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.