ಸಾಲ ವಸೂಲಿ ಸಿಬ್ಬಂದಿಗೆ ಮಹಿಳೆಯರಿಂದ ತರಾಟೆ


Team Udayavani, Jun 17, 2023, 3:33 PM IST

ಸಾಲ ವಸೂಲಿ ಸಿಬ್ಬಂದಿಗೆ ಮಹಿಳೆಯರಿಂದ ತರಾಟೆ

ಮುಳಬಾಗಿಲು : ಸಿದ್ಧರಾಮಯ್ಯನವರು ಚುನಾವಣೆ ಸಮಾವೇಶದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘದ ಸಾಲ ಮನ್ನಾ ಮಾಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ ಎಂದು ಮಹಿಳೆ‌ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಬೈರಕೂರು ಹೋಬಳಿ ಹಿರಣ್ಯಗೌಡನಹಳ್ಳಿಯಲ್ಲಿ ಶುಕ್ರವಾರ ಸಾಲ ವಸೂಲಿಗೆ ಹೋದ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿಹಾಕಲು ಮುಂದಾಗಿದ್ದು, ಸಾಲ ವಸೂಲಿಗೆ ಬಂದರೆ ಹುಷಾರ್‌, ಸಾಲ ಮನ್ನಾ ಮಾಡುತ್ತೇವೆಂದು ಮೋಸ ಮಾಡಿದ ಸಿಎಂ ಬಳಿ ಸಾಲ ವಸೂಲಿ ಮಾಡಿಕೊಳ್ಳಿ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಬೈರಕೂರು ವಿಎಸ್‌ಎಸ್‌ಎನ್‌ನಿಂದ 2021ರ ಸೆಪ್ಟಂಬರ್‌ರಲ್ಲಿ ಹಿರಣ್ಯಗೌಡನಹಳ್ಳಿ ಗ್ರಾಮದ ಎಂಟು ಸಂಘಗಳಿಗೆ ತಲಾ 5 ಲಕ್ಷ ರೂ. ಗಳಂತೆ 40 ಲಕ್ಷ ರೂ.ಬಡ್ಡಿ ರಹಿತ ಸಾಲ ನೀಡಲಾಗಿದೆ. ಅದರಂತೆ ಸಾಲ ಪಡೆದ ಮಹಿಳೆಯರೂ ಸಹ ಪ್ರತಿ ತಿಂಗಳೂ ಸಾಲದ ಹಣ ಪಾವತಿ ಮಾಡುತ್ತಿದ್ದರು. ಆದರೆ, ಸಿದ್ದರಾಮಯ್ಯನವರು ಚುನಾವಣೆ ಸಮಯದಲ್ಲಿ ಸಾಲ ಮನ್ನಾ ಮಾಡುತ್ತೇನೆ‌ಂದು ಹೇಳಿಕೆ ಕೊಟ್ಟಿದ್ದಾರೆಂದು ಮಹಿಳೆಯರು ಸಾಲ ಮರು ಪಾವತಿ ಮಾಡುವುದನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯನವರನ್ನು ಕೇಳಿ ಎಂದ ಸ್ತ್ರೀಯರು : ಶುಕ್ರವಾರ ಸಾಲ ವಸೂಲಿಗೆ ಕಾರ್ಯದರ್ಶಿ ನಾಗರಾಜ್‌ ಹಿರಣ್ಯಗೌಡನಹಳ್ಳಿಗೆ ತೆರಳಿ ಮಹಿಳೆಯರಿಗೆ ಸಾಲ ಕಟ್ಟುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಸಂಘದ ಸದಸ್ಯರು ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡುತ್ತಾರೆ ಅವರಿಂದ ಸಾಲ ವಸೂಲಿ ಮಾಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಕಾರ್ಯದರ್ಶಿ ಸಾಲ ವಸೂಲಿ ಮಾಡಿಕೊಂಡೇ ಹೋಗುತ್ತೇನೆಂದು ಪಟ್ಟು ಹಿಡಿದ್ದರಿಂದ ಕುಪಿತಗೊಂಡ ಮಹಿಳೆಯರು ವಸೂಲಾತಿಯ ದಾಖಲಾತಿ ಹರಿದು ಹಾಕಿ ನಾಗರಾಜ್‌ ವಿರುದ್ಧ ಕೂಗಾಡಿ, ಅವರನ್ನು ಎಳೆದಾಡಿದರಲ್ಲದೇ ಹಗ್ಗದಿಂದ ಕಟ್ಟಿ ಹಾಕಲು ಯತ್ನಿಸಿದ್ದಾರೆ. ಅಷ್ಟಕ್ಕೂ ಸುಮ್ಮನಾಗದೇ ಸಿಬ್ಬಂದಿಯನ್ನು ಗ್ರಾಮದಿಂದ ವಾಪಸ್‌ ಕಳುಹಿಸುವವರೆಗೂ ಬಿಟ್ಟಿಲ್ಲ .

ಈ ಬೈರಕೂರು ವಿಎಸ್‌ಎಸ್‌ಎನ್‌ ನಿಂದ 2019ರ ಸೆಪ್ಟಂಬರ್‌ 17 ರಂದು ಕೋಣಂಗುಂಟೆ ಗ್ರಾಮದಲ್ಲಿರುವ ಕೆಲವು ಸ್ತ್ರೀಶಕ್ತಿ ಸಂಘಗಳಿಗೂ ಸಾಲ ನೀಡಿದ್ದು, ಅವರೂ ಸಹ ಚುನಾವಣೆಯ ನಂತರ ಪಡೆದ ಸಾಲ ಮರು ಪಾವತಿ ಮಾಡುತ್ತಿಲ್ಲ. ನಾಗನಹಳ್ಳಿ ಗ್ರಾಮದಲ್ಲಿಯೂ ಬೈರಕೂರು ವಿಎಸ್‌ ಎಸ್‌ಎನ್‌ ನಿಂದ ವಿವಿಧ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡಿದಲಾಗಿದೆ.

ಒಟ್ಟಾರೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಸಾಲ ಮನ್ನಾ ಘೋಷಣೆಯ ನಂತರ ಯಾವುದೇ ಸಂಘದವರು ಸಾಲ ಕಟ್ಟಲು ಮುಂದಾಗುತ್ತಿಲ್ಲ. ಇದರಿಂದ ಸಹಕಾರ ಬ್ಯಾಂಕ್‌ಗಳಿಗೆ ಸುಮಾರು 50-60 ಲಕ್ಷ ರೂ. ಬಾಕಿ ಹಣ ಬರಬೇಕಾಗಿದೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

15-bng

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

pejavar

Pejawar Swamiji; ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತವಾಗಲಿ

IPL: Foreign players can no longer get crores; This is the new rule

IPL: ವಿದೇಶಿ ಆಟಗಾರರಿಗೆ ಇನ್ನು ಕೋಟಿ ಕೋಟಿ ಹಣ ಪಡೆಯಲು ಸಾಧ್ಯವಿಲ್ಲ; ಹೀಗಿದೆ ಹೊಸ ನಿಯಮ

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

12-udupi

Yaduveer Wadiyar: ಉಡುಪಿ ಶ್ರೀಕೃಷ್ಣಮಠಕ್ಕೆ‌ ಸಂಸದ ಯದುವೀರ್‌‌ ಭೇಟಿ

11-joshi

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

10

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

15-bng

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

pejavar

Pejawar Swamiji; ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತವಾಗಲಿ

IPL: Foreign players can no longer get crores; This is the new rule

IPL: ವಿದೇಶಿ ಆಟಗಾರರಿಗೆ ಇನ್ನು ಕೋಟಿ ಕೋಟಿ ಹಣ ಪಡೆಯಲು ಸಾಧ್ಯವಿಲ್ಲ; ಹೀಗಿದೆ ಹೊಸ ನಿಯಮ

14-sirsi

Sirsi: ಯಕ್ಷಗಾನದ ಪ್ರಸಿದ್ಧ ಭಾಗವತ ವಿದ್ವಾನ್ ಗಣಪತಿ ಭಟ್ಟ ಗೆ ಚಂದುಬಾಬು ಪ್ರಶಸ್ತಿ

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.