![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 17, 2023, 3:40 PM IST
ಸುರತ್ಕಲ್: ಸುರತ್ಕಲ್‌ನ ಲೈಟ್‌ಹೌಸ್ ಬೀಚ್ ರಸ್ತೆ ಕಳೆದ ತೌಕ್ತೆ ಚಂಡ ಮಾರುತದಿಂದ ಸಮುದ್ರಕೊರೆತಕ್ಕೀಡಾಗಿ ಕೊಚ್ಚಿಕೊಂಡು ಹೋದ ಬಳಿಕ ಬಹುತೇಕ ಸಂಪರ್ಕ ಕಳೆದುಕೊಂಡತ್ತು. ಇದೀಗ ಡಾಮರು ಹಾಕಿ, ವಾಹನ ಓಡಾಟ, ವಾಕಿಂಗ್‌ಗೆ ಅನುಕೂಲ ಕಲ್ಪಿಸಲಾಗಿದೆ.
ಕಳೆದ ಒಂದು ವರ್ಷದಿಂದ ಮಣ್ಣು ಹಾಕಿ ಮಾಡಲಾದ ತಾತ್ಕಾಲಿಕ ಮಣ್ಣಿನ ರಸ್ತೆಯ ಮೇಲೆ ಮರಳು ಜರಿದು ಬಿದ್ದಿತ್ತು. ಶಾಸಕ ಡಾ| ಭರತ್ ಶೆಟ್ಟಿ ಅವರ ಸಹಕಾರದಲ್ಲಿ ವಾಹನ ಓಡಾಟಕ್ಕೆ ತಾತ್ಕಾಲಿಕ ದುರಸ್ತಿ ಕ್ರಮ ಕೈಗೊಳ್ಳಲಾಗಿತು. ಈಗಿರುವ ತಾತ್ಕಾಲಿಕ ರಸ್ತೆ ಸಮುದ್ರ ಮಟ್ಟದಲ್ಲಿದ್ದು, ಈಗಿರುವ ಸ್ಥಿತಿಯಲ್ಲೇ ಡಾಮರು ಕಾಮಗಾರಿ ನಡೆಸಲಾಗಿದೆ.
ಇಲ್ಲಿ ಸ್ಥಳೀಯವಾಗಿ ಬಡಾವವಣೆ ಯಿದ್ದು, ಅವರ ವಾಹನ ಓಡಾಕ್ಕೂ ಅನುಕೂಲವಾಗಿದೆ. ಈ ಹಿಂದೆ ಟೋಲ್ ಗೇಟ್ ಇದ್ದಂತಹ ಸಂದರ್ಭ ಈ ರಸ್ತೆಯನ್ನು ಪರ್ಯಾಯವಾಗಿ ವಾಹನ ಸವಾರರು ಬಳಸುತ್ತಿದ್ದರು. ಇದೀಗ ಉಡುಪಿ ಕಡೆಹೋಗುವ ಪ್ರವಾಸಿಗರು ಈ ರಸ್ತೆಯ ಮೂಲಕ ಬೀಚ್ ಸೌಂದರ್ಯವನ್ನು ಆಸ್ವಾಧಿಸಿಕೊಂಡು ಮತ್ತೆ ಹೆದ್ದಾರಿ ಮೂಲಕ ತೆರಳಬಹುದಾಗಿದೆ.
50 ಲ. ರೂ. ವೆಚ್ಚದ ಕಾಮಗಾರಿ
ಈ ಭಾಗದಲ್ಲಿ ವಿಸ್ತಾರವಾದ ಕಾಂಕ್ರೀಟ್ ರಸ್ತೆ ನಿರ್ಮಿಸಿ ಪಾದಾಚಾರಿ, ಸೈಕ್ಲಿಂಗ್ ಮತ್ತಿತರ ಬೀಚ್ ಚಟುವಟಿಕೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿತ್ತು. ಕಾರಣಾಂತರದಿಂದ ಅನುದಾನ ಬಿಡುಗಡೆಯಾಗದ ಕಾರಣ ಇದೀಗ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂ.ವೆಚ್ಚದಲ್ಲಿ ಡಾಮರು ಕಾಮಗಾರಿ ಮಾಡಲಾಗಿದೆ ಎಂದು ಸ್ಥಳೀಯ ಮನಪಾ ಸದಸ್ಯೆ ಶ್ವೇತಾ ಪೂಜಾರಿ ತಿಳಿಸಿದರು.
ಕಾರಿಡಾರ್ ನಿರ್ಮಾಣದ ಚಿಂತನೆ
ಬೀಚ್ ಟೂರಿಸಂ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸುರತ್ಕಲ್ ತಣ್ಣೀರುಬಾವಿ, ಎನ್‌ಐಟಿಕೆ ಬೀಚ್ ವ್ಯಾಪ್ತಿಯಲ್ಲಿ ಕಾರಿಡಾರ್ ನಿರ್ಮಾಣದ ಯೋಜನೆಯಿದೆ. ಇದಕ್ಕೆ ಹೆಚ್ಚಿನ ಅನುದಾನದ ಅಗತ್ಯವಿರುವುದರಿಂದ ಡಿಪಿಆರ್ ರಚಿಸಿ ಸರಕಾರಕ್ಕೆ ಸಲ್ಲಿಸಲಾಗುವುದು. ನನ್ನ ಕ್ಷೇತ್ರದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆ ಅನುದಾನ ಒದಗಿಸಲು ಮನವಿ ಸಲ್ಲಿಸಲಾಗುವುದು.
-ಡಾ| ಭರತ್ ಶೆಟ್ಟಿ ವೈ.,
ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.