ಕಟಪಾಡಿ ಪಡು ಏಣಗುಡ್ಡೆ ಮಾಯಂದಾಲ್ ಕೆರೆಗೆ ಕಾಯಕಲ್ಪ
Team Udayavani, Jun 17, 2023, 3:57 PM IST
ಕಟಪಾಡಿ: ಐಲೇಸಾ “ಊರಿಗೊಂದು ಕೆರೆ’ ಕಾರ್ಯಕ್ರಮದಿಂದ ಸ್ಫೂರ್ತಿಗೊಂಡು ಕಟಪಾಡಿಯ ಪಡು ಏಣಗುಡ್ಡೆ ಮಾಯಂದಾಲ್ ಕೆರೆಗೆ ಕಾಯ ಕಲ್ಪವನ್ನು ನೀಡಲಾಗಿದೆ.
ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಕೆರೆ ಸಂರಕ್ಷಣ ಪ್ರಾಧಿಕಾರದ ಸದಸ್ಯ ಸಂದೀಪ್ ಸಾಲ್ಯಾನ್ ನೇತೃತ್ವದಲ್ಲಿ ಐಲೇಸಾ ಝೂಮ್ ವೇದಿಕೆಯಲ್ಲಿ ನಡೆದ “ಊರಿಗೊಂದು ಕೆರೆ’ ಕಾರ್ಯಕ್ರಮದಿಂದ ಪ್ರೇರಿತರಾದ ಸೌದಿ ಅರೇಬಿಯಾದ ನರೇಂದ್ರ ಶೆಟ್ಟಿ, ಸುಮನಾ ಶೆಟ್ಟಿ ದಂಪತಿ ಕಾರ್ಯೋನ್ಮುಖರಾಗಿದ್ದು, ಕಟಪಾಡಿ ಪಡು ಏಣಗುಡ್ಡೆಯ ಮಾಯಂದಾಲ್ ಕೆರೆಯನ್ನು ಗ್ರಾಮಸ್ಥರ ಸಹಕಾರದಿಂದ ಎರಡೇ ದಿನಗಳಲ್ಲಿ ಸ್ವತ್ಛಗೊಳಿಸಿದ್ದಾರೆ.
ಈ ಅಭಿವೃದ್ಧಿ ಕೆಲಸಕ್ಕೆ ಪಿಡಿಒ ಮಮತಾ ವೈ. ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಎಸ್. ಆಚಾರ್ಯ, ಗ್ರಾಮಸ್ಥರಾದ ಪ್ರಭಾ ಶೆಟ್ಟಿ, ಪ್ರಸೀನ್ ಪೂಜಾರಿ, ಉಮೇಶ್, ರಾಗಿಣಿ, ವಿಟuಲ ಪೂಜಾರಿ, ಲಕ್ಷಿ$¾à ನಾರಾಯಣ, ಚೇತನ್, ಅಜಿತ್, ಭವಾನಿ ರಘು ಮತ್ತು ಹಿರಿಯರ ಸಹಕಾರದೊಂದಿಗೆ ಜೆಸಿಬಿ ಯಂತ್ರ ಬಳಕೆ ಹಾಗೂ ಶ್ರಮದಾನದ ಮೂಲಕ ಈ ಕೆರೆಯ ಕಾಯಕಲ್ಪ ಸಾಧ್ಯವಾಯಿತು. ನ್ಯಾಯಾಧೀಶ ಸಂದೀಪ್ ಸಾಲ್ಯಾನ್, ಖಲೀಫಾ ವಿಶ್ವವಿದ್ಯಾಲಯದ ವಿಜ್ಞಾನಿ ಡಾ| ದಿನೇಶ್ ಶೆಟ್ಟಿ ಇವರಿಂದ ಪ್ರೇರಿತನಾಗಿ ಈ ಕಾರ್ಯದಲ್ಲಿ ತೊಡಗಿಕೊಂಡೆ. ಹಾಗೂ ಮುಂದಿನ ದಿನಗಳಲ್ಲಿ ಈ ಜಲಕ್ಷಾಮದ ಪರಿಣಾಮಗಳ ವಿರುದ್ಧ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ಯೊಬ್ಬರೂ ಜವಾಬ್ದಾರಿ ನಿರ್ವಹಿಸುವುದು ಅಗತ್ಯ ಎಂದು ಮನಗಂಡು ತಾನು ಈ ಕೆರೆ ಕಾಯಕಲ್ಪಕ್ಕೆ ಮನಸ್ಸು ಮಾಡಿದೆ ಎಂದು ನರೇಂದ್ರ ಶೆಟ್ಟಿ ಅವರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.