ಮೊಬೈಲ್ ಕಳ್ಳನೆಂದು ಮುಸ್ಲಿಂ ಯುವಕನನ್ನು ಮರಕ್ಕೆ ಕಟ್ಟಿ ʼಜೈ ಶ್ರೀರಾಮ್ʼ ಜಪಿಸುವಂತೆ ಒತ್ತಾಯ
Team Udayavani, Jun 18, 2023, 10:01 AM IST
ಲಕ್ನೋ: ಮುಸ್ಲಿಂ ಯುವಕನೊಬ್ಬನನ್ನು ಮೊಬೈಲ್ ಕಳ್ಳನೆಂದು ಶಂಕಿಸಿ ಆತನನ್ನು ಮರಕ್ಕೆ ಕಟ್ಟಿ, ಹಲ್ಲೆಗೈದು “ಜೈ ಶ್ರೀರಾಮ್” ಮಂತ್ರ ಜಪಿಸುವಂತೆ ಒತ್ತಾಯಿಸಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ನಡೆದಿರುವುದು ವರದಿಯಾಗಿದೆ.
ಜೂ.13 ರಂದು ಈ ಘಟನೆ ನಡೆದಿದ್ದು, ಶನಿವಾರ ( ಜೂ.17 ರಂದು) ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ಹಿನ್ನೆಲೆ: ಜೂ.13 ರಂದು ಸಾಹಿಲ್ ಎಂಬಾತ ತನ್ನ ಗ್ರಾಮದ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದರು. ಈ ವೇಳೆ ಮೂವರು ಯುವಕರು ಬಂದು ಆತನನ್ನು ಬಲವಂತವಾಗಿ ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಯಾರೂ ಇಲ್ಲದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೊಬೈಲ್ ಕಳ್ಳತನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ತಾನೂ ಮೊಬೈಲ್ ಕದ್ದಿಲ್ಲ ಎಂದು ಹೇಳಿದಾಗ ಸಾಹಿಲ್ ನನ್ನು ಮರಕ್ಕೆ ಕಟ್ಟಿದ್ದಾರೆ. ಹಲ್ಲೆಗೈದು ತಲೆಯನ್ನು ಬೋಳಿಸಿದ್ದಾರೆ. ಬಲವಂತವಾಗಿ “ಜೈ ಶ್ರೀರಾಮ್” ಮಂತ್ರ ಪಠಿಸುವಂತೆ ಹೇಳಿದ್ದಾರೆ. ಇಡೀ ಘಟನೆಯ ವಿಡಿಯೋವನ್ನು ಆರೋಪಿಗಳು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಘಟನಾ ಸ್ಥಳದಿಂದ ಪರಾರಿಯಾಗಿ ಪೊಲೀಸ್ ಠಾಣೆಗೆ ಸಾಹಿಲ್ ಬಂದಿದ್ದಾರೆ. ಘಟನೆ ಬಗ್ಗೆ ಮಾಹಿತಿಯನ್ನು ನೀಡಿದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸುವ ಬದಲು, ಮೊಬೈಲ್ ಕಳ್ಳನೆಂದು ಸಾಹಿಲ್ ನನ್ನೇ ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಜೂನ್ 17 ರಂದು, ಸಾಹಿಲ್ ನ ಪೋಷಕರು ದೂರು ನೀಡಲು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅವರನ್ನು ಸಂಪರ್ಕಿಸಿದ್ದಾರೆ. ಹಲ್ಲೆಗೈದ ವಿಡಿಯೋವನ್ನು ಆರೋಪಿಗಳು ವೈರಲ್ ಮಾಡಿದ್ದು, ಅದನ್ನು ಎಎಸ್ಪಿ ಅವರಿಗೆ ಸಾಹಿಲ್ ನ ಪೋಷಕರು ತೋರಿಸಿದ್ದಾರೆ. ಇದಾದ ಬಳಿಕ ತನಿಖೆಯನ್ನು ನಡೆಸಿ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು, ಕಳ್ಳತನದ ಶಂಕೆಯಲ್ಲಿ ಅದೇ ಗ್ರಾಮದ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂತ್ರಸ್ತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಸಿಟಿ ಎಎಸ್ಪಿ ಎಸ್ ಎನ್ ತಿವಾರಿ ಹೇಳಿದ್ದಾರೆ.
ಈ ಮೊದಲು ಪೊಲೀಸರು ತಮ್ಮನ್ನು ಬೆದರಿಸಿದ್ದು ಮಾತ್ರವಲ್ಲದೆ ತಮ್ಮ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ಸಾಹಿಲ್ ಮತ್ತು ಆತನ ಕುಟುಂಬದವರು ಆರೋಪಿಸಿದ್ದಾರೆ.
ಆರೋಪಿಗಳು ಬೆದರಿಕೆ ಹಾಕುತ್ತಲೇ ಇದ್ದಾರೆ. “ಅವರು ಪ್ರಾಬಲ್ಯದ ಜನರು. ನಾವು ಬಡವರು, ನನ್ನ ಮಗ ಒಬ್ಬ ಪೇಂಟರ್” ಎಂದು ಸಾಹಿಲ್ ನ ತಾಯಿ ನೂರ್ ಬಾನೋ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.