JEE Advanced 2023 Result : ವವಿಲಾಲ ಚಿದ್ವಿಲಾಸ್ ರೆಡ್ಡಿ ದೇಶಕ್ಕೇ ಟಾಪರ್
Team Udayavani, Jun 19, 2023, 6:50 AM IST
ನವದೆಹಲಿ: ಜೆಇಇ- ಅಡ್ವಾನ್ಸ್ಡ್ 2023ರ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಹೈದರಾಬಾದ್ ವಲಯದ ವವಿಲಾಲ ಚಿದ್ವಿಲಾಸ್ ರೆಡ್ಡಿ ದೇಶಕ್ಕೇ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
ಪರೀಕ್ಷೆ ನಡೆಸಿದ ಐಐಟಿ ಗುವಾಹಟಿ ಫಲಿತಾಂಶ ಪ್ರಕಟಿಸಿದ್ದು, ಒಟ್ಟು 360 ಅಂಕಗಳ ಪೈಕಿ 341ನ್ನು ರೆಡ್ಡಿ ಪಡೆದುಕೊಂಡಿದ್ದಾರೆ. ನಯಾಕಾಂತಿ ನಾಗಭವ್ಯಶ್ರೀ 298 ಅಂಕಗಳನ್ನು ಪಡೆದು ವಿದ್ಯಾರ್ಥಿನಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಹತ್ತು ಸ್ಥಾನಗಳಲ್ಲಿ ಆರು ಮಂದಿ ಹೈದರಾಬಾದ್ ವಲಯದವರೇ ಆಗಿದ್ದಾರೆ.
ಹೈದರಾಬಾದ್ ಐಐಟಿ ವಲಯದವರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದರೆ, ಐಐಟಿ ದೆಹಲಿ, ಐಐಟಿ ಬಾಂಬೆ ವಲಯಕ್ಕೆ ಮೂರನೇ ಸ್ಥಾನವಿದೆ. 500 ಮಂದಿ ಅಗ್ರ ಅಭ್ಯರ್ಥಿಗಳ ಪೈಕಿ 174 ಮಂದಿ ಐಐಟಿ ಹೈದರಾಬಾದ್, ಐಐಟಿ ದೆಹಲಿಯಿಂದ 120, ಐಐಟಿ ಬಾಂಬೆ ವಲಯದಿಂದ 103 ಅಭ್ಯರ್ಥಿಗಳಿದ್ದಾರೆ. ಈ ಬಾರಿ 13 ಮಂದಿ ವಿದೇಶಿ ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ.
ಜೂ.4ರಂದು ನಡೆದಿದ್ದ ಪರೀಕ್ಷೆಯಲ್ಲಿ 1,80,372 ಮಂದಿ ಬರೆದಿದ್ದು, 43,773 ಮಂದಿ ತೇರ್ಗಡೆಯಾಗಿದ್ದಾರೆ. ಸೋಮವಾರದಿಂದ ಕೌನ್ಸೆಲಿಂಗ್ ಶುರುವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.