![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 19, 2023, 7:50 AM IST
ಹೈದರಾಬಾದ್/ಜೈಪುರ/ಭೋಪಾಲ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳು ವರ್ಷಾಂತ್ಯ ಮತ್ತು ಮುಂದಿನ ವರ್ಷ ಚುನಾವಣೆಗಳು ನಡೆಯಲಿರುವ ರಾಜ್ಯಗಳಲ್ಲಿ ಈಗಾಗಲೇ ಸದ್ದು ಮಾಡಲಾರಂಭಿಸಿದೆ.
ಕೆ.ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಅಧಿಕಾರದಲ್ಲಿರುವ ತೆಲಂಗಾಣದಲ್ಲಿ ಕಾಂಗ್ರೆಸ್ 5-6 ತಿಂಗಳು ಮೊದಲೇ ಸಿದ್ಧತೆ ಶುರು ಮಾಡಿದೆ. ಆಡಳಿತಾರೂಢ ಬಿಆರ್‌ಎಸ್‌ನಿಂದಲೂ ಕೆಲವು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಜತೆಗೆ ಬಿಜೆಪಿಯ ಕೆಲವು ಮುಖಂಡರೂ ಕಾಂಗ್ರೆಸ್‌ನತ್ತ ಬರಲು ಮನಸ್ಸು ಮಾಡುವ ಸಾಧ್ಯತೆಗಳಿವೆ.
ಎರಡು ಅವಧಿಯಿಂದ ಆಳ್ವಿಕೆ ನಡೆಸುತ್ತಿರುವ ಬಿಆರ್‌ಎಸ್ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. 2014 ಮತ್ತು 2018ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ತ್ಯಜಿಸಿ ಮತ್ತೂಂದಕ್ಕೆ ಸೇರ್ಪಡೆಯಾಗಿ ಸ್ಪರ್ಧೆ ನಡೆಸಿ ಗೆದ್ದವರ ಪ್ರಮಾಣ ಭಾರೀ ಕಡಿಮೆ. ಆದರೆ, ಬಿಜೆಪಿ ತೆಲಂಗಾಣದ ಕೆಲವೇ ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿದೆ.
ಕೊಡುಗೆ ನೀಡಲು ಪೈಪೋಟಿ:
ಹೇಗಾದರೂ ಮಾಡಿ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಏರಬೇಕು ಎಂಬ ಗುರಿಯಲ್ಲಿರುವ ಕಾಂಗ್ರೆಸ್, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮೂಲಕ ಭರ್ಜರಿ ಪ್ರಚಾರ ಆರಂಭಿಸಿದೆ. ಇನ್ನು ಜೂ.27ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಬಿಜೆಪಿ ಪರ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಇದರ ಜತೆಗೆ ಉಚಿತ ಕೊಡುಗೆಗಳನ್ನು ಪ್ರಕಟಿಸುವ ಉತ್ಸಾಹವೂ ಜೋರಾಗಿಯೇ ಇದೆ. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಲಾಡ್ಲಿ ಬೆಹೆನಾ ಯೋಜನೆ ಜಾರಿಗೊಳಿಸಿದೆ. ಮುಂದಿನ ಚುನಾವಣೆಗಾಗಿ ಲಾಡ್ಲಿ ಲಕ್ಷ್ಮೀ ಯೋಜನೆ 0.2 ಎಂದು ಪರಿಷ್ಕರಿಸಿ ಜಾರಿಗೊಳಿಸುವ ವಾಗ್ಧಾನ ಮಾಡಿದೆ. ರೈತರಿಗಾಗಿ “ಕಿಸಾನ್ ಸಮ್ಮಾನ್ ಯೋಜನೆ’ ವ್ಯಾಪ್ತಿಯಲ್ಲಿ ರೈತರಿಗೆ ವಾರ್ಷಿಕವಾಗಿ 2 ಸಾವಿರ ರೂ. ನೀಡುವ, ಸಾಲ ಮನ್ನಾ ಯೋಜನೆಯನ್ನು ಘೋಷಣೆ ಮಾಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂ., 500 ರೂ.ಗೆ ಅಡುಗೆ ಅನಿಲ ಸಿಲಿಂಡರ್, 100 ಯುನಿಟ್ ವಿದ್ಯುತ್ ಉಚಿತ, 200 ಯುನಿಟ್‌ಗಳವರೆಗೆ ಅರ್ಧ ವಿದ್ಯುತ್ ಬಿಲ್ ಪಾವತಿ ಎಂಬ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.
ರಾಜಸ್ಥಾನದಲ್ಲಿ ಮಹಿಳೆಯರಿಗೆ ಮೊಬೈಲ್:
ಆಂತರಿಕ ಭಿನ್ನಮತದಿಂದ ಕಂಗೆಟ್ಟಿರುವ ರಾಜಸ್ಥಾನದಲ್ಲಿ ಅಶೋಕ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಿನ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗೆ ಉಚಿತ ಮೊಬೈಲ್ ನೀಡುವ ವಾಗ್ಧಾನ ಮಾಡಿದೆ. ಜತೆಗೆ ಮೂರು ವರ್ಷಗಳ ಉಚಿತ ಇಂಟರ್‌ನೆಟ್ ಅನ್ನೂ ನೀಡುವ ಭರವಸೆ ನೀಡಿದೆ.
ಅಧಿಕಾರಿಗಳ ಪ್ರಕಾರ 1.33 ಕೋಟಿ ಮಂದಿ ಮಹಿಳೆಯರಿಗೆ ಮೊಬೈಲ್ ಯೋಜನೆ ನೆರವಾಗಲಿದೆಯಂತೆ. ಈ ಬಗ್ಗೆ ಬಿಜೆಪಿ ಯಾವ ರೀತಿ ತಿರುಗೇಟು ನೀಡಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.