
Ashes Test ಮಳೆ ತೊಂದರೆ; ಇಂಗ್ಲೆಂಡಿಗೆ 7 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ
Team Udayavani, Jun 19, 2023, 5:45 AM IST

ಬರ್ಮಿಂಗಂ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ನಡುವೆ ಇಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ತೊಂದರೆ ನೀಡಿದೆ. ಮೂರನೇ ದಿನದಾಟ ಸಾಗುತ್ತಿದ್ದು ಮಳೆಯಿಂದ ಆಟ ನಿಂತಾಗ ಇಂಗ್ಲೆಂಡ್ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದು 28 ರನ್ ಗಳಿಸಿದೆ.
ಇಂಗ್ಲೆಂಡ್ ಈಗಾಗಲೇ 19 ರನ್ ಗಳಿಸಿದ ಬೆನ್ ಡಕೆಟ್ ಮತ್ತು 7 ರನ್ ಗಳಿಸಿದ ಜಾಕ್ ಕ್ರಾಲಿ ಅವರ ವಿಕೆಟನ್ನು ಕಳೆದುಕೊಂಡಿದೆ. ಓಲೀ ಪೋಪ್ ಮತ್ತು ಜೋ ರೂಟ್ ಯಾವುದೇ ರನ್ ಗಳಿಸದೇ ಆಡುತ್ತಿದ್ದಾರೆ. ಇಂಗ್ಲೆಂಡ್ ಒಟ್ಟಾರೆ 35 ರನ್ ಮುನ್ನಡೆಯಲ್ಲಿದೆ.
ಆಸ್ಟ್ರೇಲಿಯ ಆಲೌಟ್
ಈ ಮೊದಲು 5 ವಿಕೆಟಿಗೆ 311 ರನ್ನುಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ತಂಡವು ಸ್ಟುವರ್ಟ್ ಬ್ರಾಡ್ ಮತ್ತು ಓಲೀ ರಾಬಿನ್ಸನ್ ಅವರ ದಾಳಿಗೆ ಕುಸಿದು 386 ರನ್ನಿಗೆ ಆಲೌಟಾಯಿತು. ಇದರಿಂದಾಗಿ ಇಂಗ್ಲೆಂಡ್ ತಂಡ 7 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ದ್ವಿತೀಯ ದಿನ ಅಜೇಯರಾಗಿ ಉಳಿದಿದ್ದ ಉಸ್ಮಾನ್ ಖ್ವಾಜಾ ಮತ್ತು ಅಲೆಕ್ಸ್ ಕ್ಯಾರಿ ಮೂರನೇ ದಿನ ಆಟ ಮುಂದುವರಿಸಿ ಉತ್ತಮ ಆಟದ ಪ್ರದರ್ಶನ ನೀಡಿದರು. ಅವರಿಬ್ಬರ ಆಟವನ್ನು ಗಮನಿಸಿದಾಗ ಆಸ್ಟ್ರೇಲಿಯ ತಂಡ ಇನ್ನಿಂಗ್ಸ್ ಮುನ್ನಡೆ ಗಳಿಸಬಹುದೆಂದು ಭಾವಿಸಲಾಗಿತ್ತು.
ಉತ್ತಮವಾಗಿ ಆಡುತ್ತಿದ್ದ ಕ್ಯಾರಿ ವೇಗಿ ಆ್ಯಂಡರ್ಸನ್ ದಾಳಿಗೆ ಕ್ಲೀನ್‌ಬೌಲ್ಡ್ ಆದ ಬಳಿಕ ಆಸ್ಟ್ರೇಲಿಯ ಕುಸಿಯಿತು. ಕ್ಯಾರಿ ಅವರ ವಿಕೆಟನ್ನು ಪಡೆಯುವ ಮೂಲಕ ಆ್ಯಂಡರ್ಸನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1100 ವಿಕೆಟ್ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ 685ನೇ ವಿಕೆಟ್ ಆಗಿದೆ. 700 ವಿಕೆಟ್ ಸಾಧಕರಾಗಲು ಅವರಿಗೆ ಇನ್ನು 15 ವಿಕೆಟ್ ಬೇಕಾಗಿದೆ.
ಕ್ಯಾರಿ ಮತ್ತು ಖ್ವಾಜಾ ಆರನೇ ವಿಕೆಟಿಗೆ 118 ರನ್ನುಗಳ ಜತೆಯಾಟ ನಡೆಸಿದರು. ಕ್ಯಾರಿ 66 ರನ್ನಿಗೆ ಔಟಾದರೆ ಖ್ವಾಜಾ 141 ರನ್ ಗಳಿಸಿ ರಾಬಿನ್ಸನ್‌ಗೆ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯದ ಕೊನೆಯ ಐದು ವಿಕೆಟ್‌ಗಳು 48 ರನ್ ಅಂತರದಲ್ಲಿ ಉರುಳಿದವು.
ಸ್ಕೋರ್ ಪಟ್ಟಿ
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್
8 ವಿಕೆಟಿಗೆ 393 ಡಿಕ್ಲೇರ್x
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್
ಡೇವಿಡ್ ವಾರ್ನರ್ ಬಿ ಬ್ರಾಡ್ 9
ಉಸ್ಮಾನ್ ಖ್ವಾಜಾ ಬಿ ರಾಬಿನ್ಸನ್ 141
ಮಾರ್ನಸ್ ಲಬುಶೇನ್ ಸಿ ಬೇರ್‌ಸ್ಟೋ ಬಿ ಬ್ರಾಡ್ 0
ಸ್ಟೀವನ್ ಸ್ಮಿತ್ ಎಲ್‌ಬಿಡಬ್ಲ್ಯು ಬಿ ಸ್ಟೋಕ್ಸ್ 16
ಟ್ರ್ಯಾವಿಸ್ ಹೆಡ್ ಸಿ ಕ್ರಾಲಿ ಬಿ ಅಲಿ 50
ಕ್ಯಾಮರಾನ್ ಗ್ರೀನ್ ಬಿ ಅಲಿ 38
ಅಲೆಕ್ಸ್ ಕ್ಯಾರಿ ಬಿ ಆ್ಯಂಡರ್ಸನ್ 66
ಪ್ಯಾಟ್ ಕಮಿನ್ಸ್ ಸಿ ಸ್ಟೋಕ್ಸ್ ಬಿ ರಾಬಿನ್ಸನ್ 38
ನಥನ್ ಲಿಯಾನ್ ಸಿ ಡಕಟ್ ಬಿ ರಾಬಿನ್ಸನ್ 1
ಸ್ಕಾಟ್ ಬೋಲ್ಯಾಂಡ್ ಸಿ ಪೋಪ್ ಬಿ ಬ್ರಾಡ್ 0
ಜೋಶ್ ಹೇಝಲ್‌ವುಡ್ ಔಟಾಗದೆ 1
ಇತರ: 26
ಒಟ್ಟು (ಆಲೌಟ್)386
ವಿಕೆಟ್ ಪತನ: 1-29, 2-29, 3-67, 4-148, 5-220, 6-338, 7-372, 8-377, 9-378
ಬೌಲಿಂಗ್: ಸ್ಟುವರ್ಟ್ ಬ್ರಾಡ್ 23-4-68-3
ಓಲೀ ರಾಬಿನ್ಸನ್ 22.1-5-55-3
ಜೇಮ್ಸ್ ಆ್ಯಂಡರ್ಸನ್ 21-5-53-1
ಹ್ಯಾರಿ ಬ್ರೂಕ್ 3-1-5-0
ಮೊಯಿನ್ ಅಲಿ 33-4-147-2
ಬೆನ್ ಸ್ಟೋಕ್ಸ್ 7-0-33-0
ಜೋ ರೂಟ್ 7-3-15-0
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್
ಜಾಕ್ ಕ್ರಾಲಿ ಸಿ ಕ್ಯಾರಿ ಬಿ ಬೋಲ್ಯಾಂಡ್ 7
ಬೆನ್ ಡಕೆಟ್ ಸಿ ಗ್ರೀನ್ ಬಿ ಕಮಿನ್ಸ್ 19
ಓಲೀ ಪೋಪ್ ಬ್ಯಾಟಿಂಗ್ 0
ಜೋ ರೂಟ್ ಬ್ಯಾಟಿಂಗ್ 0
ಇತರ: 2
ಒಟ್ಟು (ಎರಡು ವಿಕೆಟಿಗೆ) 28
ವಿಕೆಟ್ ಪತನ: 1-27, 2-27
ಬೌಲಿಂಗ್: ಪ್ಯಾಟ್ ಕಮಿನ್ಸ್ 5.3-1-9-1
ಜೋಶ್ ಹೇಝಲ್‌ವುಡ್ 2-0-10-0
ನಥನ್ ಲಿಯಾನ್ 1-0-6-0
ಸ್ಕಾಟ್ ಬೋಲ್ಯಾಂಡ್ 2-1-1-1
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!

WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.