![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 19, 2023, 7:57 AM IST
ಬೆಳಗಾವಿ: ಗೃಹ ಲಕ್ಷ್ಮೀ ಯೋಜನೆಯಲ್ಲಿ ಯಾವುದೇ ಗೊಂದಲ ಆಗಬಾರದು. ಎಲ್ಲ ಅರ್ಹ ಮಹಿಳೆಯರಿಗೂ ಯೋಜನೆಯ ಲಾಭ ಸಿಗಲಿ ಎಂಬ ಕಾರಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ ತುಸು ವಿಳಂಬವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಯೋಜನೆ ಜಾರಿಯಲ್ಲಿ ಸಮಸ್ಯೆ ಆಗುತ್ತಿಲ್ಲ. ಈ ಯೋಜನೆ ಎಲ್ಲ ಅರ್ಹರಿಗೂ ಸಿಗಬೇಕು ಎಂಬುದು ನಮ್ಮ ಉದ್ದೇಶ. ಯೋಜನೆಯ ಅರ್ಜಿಗಳು ಆನ್‌ಲೈನ್‌ನಲ್ಲಿ ಶೀಘ್ರದಲ್ಲಿ ಸಿಗಲಿವೆ. ಅರ್ಜಿ ಭರ್ತಿಗಾಗಿ ಪ್ರತ್ಯೇಕ ಸಾಫ್ಟ್ ವೇರ್ ಮತ್ತು ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಫಲಾ ನುಭವಿಗಳಿಗೆ ನೆರವಾಗಲು ಪ್ರತಿ ಬೂತ್‌ನಲ್ಲಿ 3-4 ಜನರನ್ನು ನೇಮಿಸುತ್ತಿದ್ದೇವೆ. 1.13 ಕೋಟಿ ಕುಟುಂ ಬಗಳು ಇದರ ಲಾಭ ಪಡೆಯಲಿವೆ ಎಂದರು.
ಹೊಸ ಸಾಫ್ಟ್‌ವೇರ್ ಅನಾವರಣ ಮಾಡಿದಾಗ ಗೊಂದಲ ಆಗಬಾರದು ಎಂಬ ಒಂದೇ ಕಾರಣಕ್ಕೆ ಸಾಫ್ಟ್‌ವೇರ್ ಸಿದ್ಧಪಡಿಸುವ ಕಾರ್ಯವನ್ನು ಬಹಳ ಸೂಕ್ಷ್ಮವಾಗಿ ನಿರ್ವಹಿಸಲಾಗುತ್ತಿದೆ. ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ನುರಿತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. “ಗೃಹಜ್ಯೋತಿ’ಗೆ ರವಿವಾರದಿಂದಲೇ ಅರ್ಜಿ ಆಹ್ವಾನಿಸಿದ್ದೇವೆ ಎಂದರು.
ಅಕ್ಕಿಯಲ್ಲಿ ಕೇಂದ್ರ ರಾಜಕೀಯ
ಅಕ್ಕಿ ಹಂಚಿಕೆ ವಿಚಾರದಲ್ಲಿ ಕೇಂದ್ರ ರಾಜಕಾರಣ ಮಾಡುತ್ತಿದೆ. ಎಫ್‌ಸಿಐನವರು ಮೊದಲು ಅಕ್ಕಿ ಕೊಡುವುದಾಗಿ ಹೇಳಿ ಈಗ ಮಾತು ತಪ್ಪಿದ್ದಾರೆ. ಆದರೆ ಜನರು ಚಿಂತಿಸಬೇಕಾಗಿಲ್ಲ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.
ಮಹಿಳೆಯರು ನೆಮ್ಮದಿಯಿಂದ ಬದುಕಲಿ
ಮಹಿಳೆಯರು ಕೇವಲ ಮನೆ ಕೆಲಸ, ಮಕ್ಕಳನ್ನು ಹೆರಲು ಮಾತ್ರ ಸೀಮಿತ ವಾಗಬಾರದು. ಮಹಿಳೆಯರು ನೆಮ್ಮದಿಯಿಂದ ಜೀವನ ಮಾಡಬೇಕೆಂಬ ಉದ್ದೇಶ ಸಿದ್ದರಾಮಯ್ಯ ಸರಕಾರದ್ದಾಗಿದೆ ಎಂದು ಲಕ್ಷ್ಮೀ ಹೇಳಿದರು.
ಗೃಹ ಜ್ಯೋತಿ: 55000 ನೋಂದಣಿ
ಬೆಂಗಳೂರು: ರಾಜ್ಯದ ಗೃಹ ಬಳಕೆ ಗ್ರಾಹಕರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲು ರಾಜ್ಯ ಸರಕಾರ ಜಾರಿಗೆ ತಂದಿರುವ “ಗೃಹ ಜ್ಯೋತಿ’ ಯೋಜನೆಯ ನೋಂದಣಿಯು ಸೇವಾ ಸಿಂಧು ಪೋರ್ಟಲ್‌ನಲ್ಲಿ ಆರಂಭವಾಗಿದ್ದು, ರವಿವಾರ ಸಂಜೆ 6 ಗಂಟೆವರೆಗೆ ರಾಜ್ಯದಲ್ಲಿ ಸುಮಾರು 55,000 ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭಗೊಂಡಿತು. ನೋಂದಣಿಯನ್ನು ಸೇವಾ ಸಿಂಧು ಪೋರ್ಟಲ್
https://sevasindhugs.karnataka.gov.in ಮೂಲಕ ಮಾಡಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರಾಹಕರು ಯೋಜನೆ ನೋಂದಣಿಗೆ ಯಾವುದೇ ದಾಖಲೆ ಸಲ್ಲಿಸ ಬೇಕಾಗಿಲ್ಲ ಎಂದು ಇಂಧನ ಇಲಾಖೆ ಮತ್ತೂಮ್ಮೆ ಸ್ಪಷ್ಟಪಡಿಸಿದೆ. ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಚೇರಿಯನ್ನು ಅಥವಾ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಬಹುದು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.