ಕ್ಷೇತ್ರ ಪುನರ್ ವಿಂಗಡಣೆ: ಕೈ ತಪ್ಪಿದ 3 ಕ್ಷೇತ್ರಗಳು
Team Udayavani, Jun 19, 2023, 2:17 PM IST
ಮೈಸೂರು: ರಾಜ್ಯದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಯಾಗಿದ್ದು, ಅದರಂತೆ ಮೈಸೂರು ಜಿಲ್ಲೆಯಲ್ಲಿದ್ದ 49 ಜಿಪಂ ಕ್ಷೇತ್ರಗಳನ್ನು 46ಕ್ಕೆ ಇಳಿಸಲಾಗಿದೆ. ಈ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಜಿಪಂ ಚುನಾವಣೆ ನಡೆಯಲಿದೆ. ಮರು ವಿಂಗಡಣೆ ಬಳಿಕ ಜಿಲ್ಲೆಯ ಜಿಪಂ ಕ್ಷೇತ್ರಗಳ ಸಂಖ್ಯೆಯನ್ನು ಅಂತಿಮಗೊಳಿಸಿ ರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯಿಸಿದೆ. ಈಗಾಗಲೇ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಜಿಪಂ ಕ್ಷೇತ್ರಗಳ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಎಲ್ಲ ಪ್ರಕ್ರಿಯೆ ಪೂರ್ಣ: ರಾಜ್ಯ ಚುನಾವಣಾ ಆಯೋಗ 2021ರಲ್ಲಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆ ಮಾಡಿ ಕರಡು ಪ್ರತಿ ಪ್ರಕಟಿಸಿದ ಸಂದರ್ಭದಲ್ಲಿ ಜಿಪಂ ಕ್ಷೇತ್ರಗಳು (53)ಹೆಚ್ಚಾಗಿತ್ತು. ಜನಸಂಖ್ಯೆಗೆ ಅನುಗುಣವಾಗಿ ಚುನಾವಣಾ ಆಯೋಗ ಕ್ಷೇತ್ರವಾರು ವಿಂಗಡಿಸಿತ್ತು. ಆ ಬಳಿಕ ರಾಜ್ಯ ಸರ್ಕಾರ ಮತ್ತೂಮ್ಮೆ ಮರು ವಿಂಗಡಣೆ ನಡೆಸಿತ್ತು. ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಒಳಗೊಂಡಿರುವ ಗ್ರಾಮಗಳು, ಗಡಿ ಮುಂತಾದ ವಿವರಗಳನ್ನೊಳಗಂಡ ಕರಡು ಅಧಿಸೂಚನೆ ಹೊರಡಿಸಿದ್ದ ಆಯೋಗ ಜ.16ರ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿತ್ತು. ಇದೀಗ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದೆ.
ನಂಜನಗೂಡಿನಲ್ಲಿ ಅತಿ ಹೆಚ್ಚು: ಸದ್ಯ ನಂಜನಗೂಡಿನಲ್ಲಿ ಅತಿ ಹೆಚ್ಚು ಅಂದರೆ 9 ಜಿಪಂ ಕ್ಷೇತ್ರಗಳು, ಕಡಿಮೆ ಅಂದರೆ ಸರಗೂರಿನಲ್ಲಿ 2, ಕೆ.ಆರ್.ನಗರ ಕೇವಲ 3 ಜಿಪಂ ಕ್ಷೇತ್ರಗಳಿವೆ. ಉಳಿದಂತೆ ಸಾಲಿಗ್ರಾಮ ಮತ್ತು ಎಚ್.ಡಿ.ಕೋಟೆ ತಾಲೂಕಿನಲ್ಲಿ ತಲಾ 4 ಕ್ಷೇತ್ರಗಳಿವೆ. ಮೈಸೂರು, ತಿ.ನರಸೀಪುರ, ಹುಣಸೂರು, ಪಿರಿಯಾಪಟ್ಟಣದಲ್ಲಿ ತಲಾ 6 ಕ್ಷೇತ್ರಗಳಿವೆ. ಮೈಸೂರು ತಾಲೂಕಿನಲ್ಲಿ ರಮ್ಮನಹಳ್ಳಿ, ಕಡಕೊಳ ಹಾಗೂ ಶ್ರೀರಾಂಪುರ ಪಟ್ಟಣ ಪಂಚಾಯಿತಿ ರಚನೆಯಾಗಿರುವುದರಿಂದ ಜಿಪಂ ಸದಸ್ಯ ಸ್ಥಾನಗಳು ಕಡಿಮೆಯಾಗಿವೆ. ಹಿನಕಲ್, ಹೂಟಗಳ್ಳಿ, ಶ್ರೀರಾಂಪುರ ಜಿಪಂ ಸ್ಥಾನಗಳು ರದ್ದಾಗಿವೆ. ಇದಲ್ಲದೆ, ಕಳೆದ ಬಾರಿ ಇದ್ದ ಜಿಪಂ ಕ್ಷೇತ್ರಗಳ ಕೇಂದ್ರಸ್ಥಾನಗಳೂ ಅದಲು ಬದಲಾಗಿವೆ.
ತಾಲೂಕುವಾರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ವಿವರ:
ಮೈಸೂರು ತಾಲೂಕಿನಲ್ಲಿ 6 ಜಿಪಂ ಕ್ಷೇತ್ರಗ ಳಿದ್ದು, ಇಲವಾಲ, ಜಯಪುರ, ಉದೂºರು, ವರುಣ, ಸಿದ್ದಲಿಂಗಪುರ ಹಾಗೂ ಹಾರೋ ಹಳ್ಳಿ(ಮೆಲ್ಲಹಳ್ಳಿ) ಕ್ಷೇತ್ರಗಳನ್ನು ರಚಿಸಲಾಗಿದೆ.
ತಿ.ನರಸೀಪುರ ತಾಲೂಕಿನಲ್ಲಿ 6 ಜಿಪಂ ಕ್ಷೇತ್ರಗಳಿದ್ದು, ತುರುಗನೂರು, ಸೋಮನಾಥ ಪುರ, ಸೋಸಲೆ, ತಲಕಾಡು, ಮೂಗೂರು, ಗಗೇìಶ್ವರಿ ಕ್ಷೇತ್ರಗಳನ್ನು ರಚಿಸಲಾಗಿದೆ.
ನಂಜನಗೂಡು ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ 9 ಜಿಪಂ ಕ್ಷೇತ್ರಗಳಿದ್ದು, ಹುರ, ಹುಲ್ಲಹಳ್ಳಿ, ಹೆಗ್ಗಡಹಳ್ಳಿ, ಕಳಲೆ, ಬದನ ವಾಳು, ದೊಡ್ಡಕವಲಂದೆ, ತಗಡೂರು, ಹದಿ ನಾರು, ತಾಂಡವಪುರ ಕ್ಷೇತ್ರಗಳನ್ನು ರಚಿಸಲಾಗಿದೆ.
ಹುಣಸೂರು ತಾಲೂಕಿನಲ್ಲಿ 6 ಜಿಪಂ ಕ್ಷೇತ್ರಗಳಿದ್ದು, ಗಾವಡಗೆರೆ, ಬನ್ನಿಕುಪ್ಪೆ, ಬಿಳಿಕೆರೆ, ಧರ್ಮಾಪುರ, ಹನಗೋಡು, ಚಿಲ್ಕುಂದ ಕ್ಷೇತ್ರಗಳನ್ನು ರಚಿಸಲಾಗಿದೆ.
ಕೆ.ಆರ್.ನಗರ ತಾಲೂಕಿನಲ್ಲಿ ಕೇವಲ 3 ಜಿಪಂ ಕ್ಷೇತ್ರಗಳನ್ನು ರಚಿಸಲಾಗಿದ್ದು, ಗಂಧನ ಹಳ್ಳಿ, ತಿಪ್ಪೂರು, ಹೆಬ್ಟಾಳು ಜಿಲ್ಲಾ ಪಂಚಾಯಿತಿ ಕ್ಷೇತ್ರ ಗಳಾಗಿವೆ. ಸಾಲಿಗ್ರಾಮ ತಾಲೂಕಿನಲ್ಲಿ 4 ಜಿಪಂ ಕ್ಷೇತ್ರಗಳಿದ್ದು, ತಂದ್ರೆ, ಮಿರ್ಲೆ, ಸಾಲಿ ಗ್ರಾಮ, ಹಳಿಯೂರು ಕ್ಷೇತ್ರಗಳನ್ನು ರಚಿಸಲಾಗಿದೆ.
ಪಿರಿಯಾಪಟ್ಟಣ ತಾಲೂಕಿನಲ್ಲಿ 6 ಜಿಪಂ ಕ್ಷೇತ್ರಗಳಿದ್ದು, ಹಲಗನಹಳ್ಳಿ, ಬೆಟ್ಟದಪುರ, ರಾವಂದೂರು, ಕಂಪಲಾಪುರ, ಆಮಮಹಳ್ಳಿ, ಕೊಪ್ಪ ಕ್ಷೇತ್ರಗಳನ್ನು ರಚಿಸಲಾಗಿದೆ.
ಎಚ್.ಡಿ.ಕೋಟೆ ತಾಲೂಕಿನಲ್ಲಿ 4 ಜಿಪಂ ಕ್ಷೇತ್ರಗಳಿದ್ದು, ಹಂಪಾಪುರ, ಹೈರಿಗೆ, ಅಣ್ಣೂರು, ಅಂತರಸಂತೆ, ಸರಗೂರು ತಾಲೂಕಿನಲ್ಲಿ ಅತೀ ಕಡಿಮೆ ಅಂದರೆ 2 ಜಿಪಂ ಕ್ಷೇತ್ರಗಳಿದ್ದು, ಮುಳ್ಳೂರು, ಹಂಚೀಪುರ ಕ್ಷೇತ್ರಗಳನ್ನು ರಚಿಸಲಾಗಿದೆ.
-ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.