ನಾನು ಆ ರೀತಿ ಮಾಡಬಾರದಿತ್ತು..: ಹೆಲ್ಮೆಟ್ ಸಂಭ್ರಮಾಚರಣೆಯ ಬಗ್ಗೆ ಆವೇಶ್ ಖಾನ್ ಮಾತು
Team Udayavani, Jun 19, 2023, 5:23 PM IST
ಮುಂಬೈ: ಈ ಬಾರಿಯ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ಆವೇಶ್ ಖಾನ್ ಅವರು ಆಟಕ್ಕಿಂತ ಹೆಚ್ಚು ವಿವಾದದಿಂದಲೇ ಸುದ್ದಿಯಾಗಿದ್ದರು. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆವೇಶ್ ಖಾನ್ ಅವರ ಸಂಭ್ರಮಾಚರಣೆ ಹಲವರ ಕಣ್ಣು ಕೆಂಪಗಾಗಿಸಿತ್ತು. ಇದೀಗ ಆವೇಶ್ ಖಾನ್ ಅವರು ಇದರ ಬಗ್ಗೆ ಮಾತನಾಡಿದ್ದಾರೆ.
ಆರ್ ಸಿಬಿ ಮತ್ತು ಎಲ್ಎಸ್ ಜಿ ನಡುವಿನ ಮೊದಲ ಪಂದ್ಯವು ರೋಚಕವಾಗಿ ಅಂತ್ಯಗೊಂಡಿತ್ತು. ಕೆಎಲ್ ರಾಹುಲ್ ತಂಡವು ವಿಜೇತರಾಗಿ ಹೊರಹೊಮ್ಮಿತು. ರನ್-ಚೇಸ್ ಪೂರ್ಣಗೊಂಡಾಗ ಪಿಚ್ ನಲ್ಲಿದ್ದ ಅವೇಶ್ ಖಾನ್ ಅವರು, ಸಂಭ್ರಮಾಚರಣೆಯಲ್ಲಿ ತನ್ನ ಹೆಲ್ಮೆಟ್ ಅನ್ನು ನೆಲಕ್ಕೆ ಎಸೆದಿದ್ದರು. ಇದಕ್ಕಾಗಿ ಅವರಿಗೆ ಭಾರಿ ದಂಡವನ್ನು ವಿಧಿಸಲಾಗಿತ್ತು.
“ಹೆಲ್ಮೆಟ್ ವಿಚಾರ ಸ್ವಲ್ಪ ಹೆಚ್ಚೇ ಆಗಿತ್ತು. ನಾನು ಹಾಗೆ ಮಾಡಬಾರದಿತ್ತು ಎಂದು ಕೆಲವು ದಿನಗಳ ಬಳಿಕ ಅರ್ಥವಾಗಿತ್ತು. ಅದು ಆ ಕ್ಷಣದಲ್ಲಿ ಸಂಭವಿಸಿ ಹೋಯಿತು. ನಾನು ಹಾಗೆ ಮಾಡಬಾರದಿತ್ತು ಎಂದು ಮತ್ತೆ ನನಗನಿಸಿತು” ಎಂದು ಆವೇಶ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ:Bengaluru hit-and-run;100 ಮೀಟರ್ ಎಳೆದೊಯ್ದ ಕಾರು: ಡೆಲಿವರಿ ಬಾಯ್ ಮೃತ್ಯು
ಐಪಿಎಲ್ 2023 ರ ಋತುವಿನಲ್ಲಿ ಅವರ ಪ್ರದರ್ಶನದ ಬಗ್ಗೆ ಮಾತನಾಡಿದ ಅವೇಶ್ ಅವರು, ತಮ್ಮ ಮಟ್ಟವನ್ನು ತಲುಪದಿದ್ದರೂ ಅವರು ಉತ್ತಮವಾಗಿ ಆಡಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್
Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.