ಚಾರ್ಮಾಡಿ ಬಸ್ ತಡೆದ ಘಟನೆ; ಕರ್ತವ್ಯಕ್ಕೆ ಅಡ್ಡಿ ದೂರು: ಮೂವರು ವಶಕ್ಕೆ
Team Udayavani, Jun 20, 2023, 5:55 AM IST
ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಬಸ್ ತಡೆ ಹಿಡಿದು ಗಲಾಟೆ ನಡೆಸಿ ನಿರ್ವಾಹಕ ಹಾಗೂ ಚಾಲಕನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಬಸ್ ನಿರ್ವಾಹಕ ದೂರು ನೀಡಿದಂತೆ ಮೂವರನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿ ಚಾರ್ಮಾಡಿ ಗ್ರಾಮದ ಮಹಮ್ಮದ್ ಶಬೀರ್ (21), ಮಹಮ್ಮದ್ ಮಹಾರೂಫ್ (22) ಹಾಗೂ ಮಹಮ್ಮದ್ ಮುಬಶೀರ್ (23) ಎಂಬವರನ್ನು ರವಿವಾರ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಶನಿವಾರ ಸಂಜೆ ಮಂಗಳೂರಿನಿಂದ ಮೂಡಿಗೆರೆಗೆ ತೆರಳುತ್ತಿದ್ದ ಮೂಡಿಗೆರೆ ಡಿಪೋದ ಕೆ.ಎಸ್. ಆರ್.ಟಿ.ಸಿ.ಬಸ್‌ಗೆ ಉಜಿರೆಯಲ್ಲಿ ಬಸ್ ಹತ್ತಿದ ಚಾರ್ಮಾಡಿ ಕಡೆಯ ವಿದ್ಯಾರ್ಥಿಗಳು ಹತ್ತಾರು ಮಂದಿ ಬಾಗಿಲಲ್ಲಿ ನೇತಾಡುತ್ತಿದ್ದ ಸಂದರ್ಭ ನಿರ್ವಾಹಕ ಶಿವಕುಮಾರ್ ಅವರನ್ನು ಬಸ್ ಒಳಗೆ ತೆರಳುವಂತೆ ಅಥವಾ ಹಿಂದಿನಿಂದ ಬರುವ ಬಸ್‌ನಲ್ಲಿ ಬರಲು ತಿಳಿಸಿದ್ದಾರೆ. ಇದಕ್ಕೆ ನಿರ್ವಾಹಕನಿಗೆ ಬಸ್ ನಿನ್ನ ಅಪ್ಪನದ್ದ ನಾನು ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತೇನೆ ಎಂದು ಅವಾಚ್ಯ ಪದದಿಂದ ಬೈದು ಮಾತಿನ ಚಕಮಕಿ ಉಂಟಾಗಿದೆ.
ಈ ವೇಳೆ ಉಳಿದ 20ಕ್ಕೂ ಅಧಿಕ ವಿದ್ಯಾರ್ಥಿಗಳು ನಿರ್ವಾಹಕನ ಬಳಿಗೆ ಬಂದು ಬೆದರಿಕೆಯೊಡ್ಡಿದ್ದಾರೆ. ಬಳಿಕ ಬಸ್ ಮುಂದೆ ತೆರಳಿ ಸಂಜೆ 6ಗಂಟೆಗೆ ಚಾರ್ಮಾಡಿ ಬಳಿ ಬಸ್ ತಲುಪಿದಾಗ, ಗುಂಪೊಂದು ತಡೆ ಹಿಡಿದು ಅಲ್ಲಿ ಮತ್ತೆ ಗಲಾಟೆ ಉಂಟುಮಾಡಿದ ಕುರಿತು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.