Women’s Asia Cup ಕ್ರಿಕೆಟ್‌ಗೆ ಮಳೆ: ಮೀಸಲು ದಿನಕ್ಕೆ ಸೆಮಿಫೈನಲ್ಸ್
ಇಂದು ಸಾಧ್ಯವೇ ಭಾರತ-ಲಂಕಾ, ಪಾಕ್-ಬಾಂಗ್ಲಾ ಪಂದ್ಯ?
Team Udayavani, Jun 20, 2023, 6:11 AM IST
ಮಾಂಗ್ ಕಾಕ್ (ಹಾಂಕಾಂಗ್): ಎಸಿಸಿ ವನಿತಾ ಎಮರ್ಜಿಂಗ್ ಏಷ್ಯಾ ಕಪ್ ಟಿ20 ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್‌ಗೂ ಮಳೆ ಶಾಪವಾಗಿ ಕಾಡಿದೆ. ಸೋಮವಾರ ಇಲ್ಲಿ ನಡೆಯಬೇಕಿದ್ದ ಭಾರತ-ಶ್ರೀಲಂಕಾ, ಪಾಕಿಸ್ಥಾನ-ಬಾಂಗ್ಲಾದೇಶ ನಡುವಿನ ಪಂದ್ಯಗಳೆರಡೂ ಮಳೆಯ ಹೊಡೆತಕ್ಕೆ ಸಿಲುಕಿದ್ದು, ಟಾಸ್ ಕೂಡ ಹಾರಿಸಲು ಸಾಧ್ಯವಾಗಿಲ್ಲ. ಈ ಪಂದ್ಯಗಳೀಗ ಮೀಸಲು ದಿನವಾದ ಮಂಗಳವಾರಕ್ಕೆ ಮುಂದೂಡಲ್ಪಟ್ಟಿವೆ.
ಭಾರತೀಯ ಕಾಲಮಾನದಂತೆ ಭಾರತ-ಶ್ರೀಲಂಕಾ ಪಂದ್ಯ ಬೆಳಗ್ಗೆ 6.30ಕ್ಕೆ, ಪಾಕಿಸ್ಥಾನ-ಬಾಂಗ್ಲಾದೇಶ ಮುಖಾಮುಖೀ ಬೆಳಗ್ಗೆ 11.30ಕ್ಕೆ ಆರಂಭವಾಗಬೇಕಿದೆ. ಅಕಸ್ಮಾತ್ ಈ ಪಂದ್ಯಗಳೂ ನಡೆಯದೆ ಹೋದರೆ ಆಗ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಫೈನಲ್ ಪ್ರವೇಶಿಸಲಿವೆ. “ಎ’ ವಿಭಾಗದಲ್ಲಿದ್ದ ಭಾರತ 4 ಅಂಕ ಹಾಗೂ 5.425ರಷ್ಟು ಉತ್ಕೃಷ್ಟ ರನ್‌ರೇಟ್ ಹೊಂದಿತ್ತು. ಬಾಂಗ್ಲಾದೇಶ “ಬಿ’ ವಿಭಾಗದ ಅಗ್ರಸ್ಥಾನಿಯಾಗಿತ್ತು (4.850).
7 ಪಂದ್ಯ ರದ್ದು
ಜೂ. 12ರಂದು ಆರಂಭಗೊಂಡ ಈ ಪಂದ್ಯಾವಳಿ ಕಿರಿಯ ಕ್ರಿಕೆಟಿಗರ ಅಂತಾರಾಷ್ಟ್ರೀಯ ಅನುಭವವನ್ನು ಹೆಚ್ಚಿಸಲು ನೆರವಾಗಬೇಕಿತ್ತು. ಆದರೆ ಮೊದಲೆರಡು ದಿನದ 4 ಪಂದ್ಯಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಮಳೆಯಿಂದ ರದ್ದಾದವು. ಮಲೇಷ್ಯಾ-ಯುಎಇ ನಡುವಿನ ಪಂದ್ಯ 5 ಓವರ್‌ಗಳಿಗೆ ಸೀಮಿತಗೊಂಡಿತು.
ಲೀಗ್ ಹಂತದಲ್ಲಿ ಒಟ್ಟು 12 ಪಂದ್ಯ ನಡೆಯಬೇಕಿತ್ತು. 7 ಪಂದ್ಯಗಳು ಸಂಪೂರ್ಣ ಕೊಚ್ಚಿ ಹೋದವು. ಇದರಲ್ಲಿ ಭಾರತ- ಪಾಕಿಸ್ಥಾನ ನಡುವಿನ ಪಂದ್ಯವೂ ಸೇರಿತ್ತು. ಭಾರತ- ನೇಪಾಲ ಪಂದ್ಯ ಕೂಡ ವರುಣನ ಅಬ್ಬರಕ್ಕೆ ಸಿಲುಕಿತು.
ಶ್ವೇತಾ ಸೆಹ್ರಾವತ್ ನಾಯಕತ್ವದಲ್ಲಿ ಆಗಮಿಸಿದ್ದ ಭಾರತಕ್ಕೆ ಲೀಗ್ ಹಂತದಲ್ಲಿ ಆಡಲು ಸಾಧ್ಯವಾದದ್ದು ಒಂದು ಪಂದ್ಯ ಮಾತ್ರ. ಅದು ಆತಿಥೇಯ ಹಾಂಕಾಂಗ್ ಎದುರಿನ ಮುಖಾ ಮುಖೀಯಾಗಿತ್ತು. ಹಾಂಕಾಂಗನ್ನು 34 ರನ್ನಿಗೆ ಉಡಾಯಿಸಿದ ಭಾರತ 9 ವಿಕೆಟ್‌ಗಳ ಜಯ ಸಾಧಿಸಿತ್ತು. ಶ್ರೇಯಾಂಕಾ ಪಾಟೀಲ್ 2 ರನ್ನಿಗೆ 5 ವಿಕೆಟ್ ಉರುಳಿಸಿ ಮಿಂಚಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.