Temperature: ಜಾಗತಿಕ ಸರಾಸರಿ ತಾಪಮಾನ 1.5 ಡಿ.ಸೆ. ಹೆಚ್ಚಳ!


Team Udayavani, Jun 20, 2023, 6:37 AM IST

EARTH HEAT

ಇದೇ ಮೊದಲ ಬಾರಿಗೆ ಜೂನ್‌ ತಿಂಗಳ ಮೊದಲಾರ್ಧದಲ್ಲಿ ಜಾಗತಿಕ ಸರಾಸರಿ ತಾಪಮಾನವು 1.5 ಡಿ.ಸೆ. ನ ಗಡುವನ್ನು ಮೀರಿದೆ. ತಿಂಗಳ ಆರಂಭದಲ್ಲಿಯೇ ಜಾಗತಿಕ ಸರಾಸರಿ ತಾಪಮಾನವನ್ನು ಮೀರಿ ದಾಖಲೆ ಪ್ರಮಾಣದ ಉಷ್ಣತೆಯನ್ನು ದಾಖಲಿಸಿದೆ ಎಂದು ಯುರೋಪಿಯನ್‌ ಯೂನಿಯನ್‌ನ ಹವಾಮಾನ ಮೇಲ್ವಿಚಾರಣ ಘಟಕ ತಿಳಿಸಿದೆ.

 ವಿಶ್ವಸಂಸ್ಥೆ ವಿಧಿಸಿದ ಮಿತಿ

ಹವಾಮಾನ ವೈಪರೀತ್ಯವು ಭೂಮಿಯ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಜಾಗತಿಕ ತಾಪಮಾನಕ್ಕೆ 1.5 ಡಿ.ಸೆ.ನ ಮಿತಿಯನ್ನು ನಿಗದಿಪಡಿಸಿತ್ತು. ಆದರೆ ಪ್ರಸಕ್ತ ತಿಂಗಳ ಆರಂಭದಲ್ಲಿ ಜಾಗತಿಕ ತಾಪಮಾನವು 1.5 ಡಿ.ಸೆ.ನ ಮಿತಿಯನ್ನು ಮೀರಿದೆ.

ಹೊಸದೇನಲ್ಲ

ವಿಶ್ವಸಂಸ್ಥೆಯು ನಿಗದಿಪಡಿಸಿದ 1.5 ಡಿ.ಸೆ.ನ ಮಿತಿಯನ್ನು  ಈ ಹಿಂದೆ ಮೀರಿದ್ದು 2015ರ ಡಿಸೆಂಬರ್‌ನಲ್ಲಿ. ಬಳಿಕ 2016 ಮತ್ತು 2020ರಲ್ಲಿ ಉತ್ತರ ಗೋಳಾರ್ಧದ ಚಳಿಗಾಲ ಮತ್ತು ವಸಂತ ಮಾಸದಲ್ಲಿ ತಾಪಮಾನ ಈ ಮಿತಿಯನ್ನು ದಾಟಿತ್ತು. ಆದರೆ ಈ ಬಾರಿ ಜಾಗತಿಕ ಸರಾಸರಿ ತಾಪಮಾನ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.

 ಪ್ಯಾರಿಸ್‌ ಒಪ್ಪಂದ

2015ರ ಅಂತ್ಯದಲ್ಲಿ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಸಮ್ಮೇಳನದಲ್ಲಿ ರಾಷ್ಟ್ರಗಳು ಪ್ಯಾರಿಸ್‌ ಒಪ್ಪಂದಕ್ಕೆ ಅಂಕಿತ ಹಾಕಿದವು. ಅನಿಲ ಹೊರಸೂಸುವಿಕೆ ತಗ್ಗಿಸುವ ಮತ್ತು ಈ ಶತಮಾನದಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು 2 ಡಿ.ಸೆ.ಗೆ ಮಿತಿಗೊಳಿಸುವ ನಿಟ್ಟಿನಲ್ಲಿ ದೀರ್ಘಾವಧಿ ಧ್ಯೇಯವನ್ನು ಹಾಕಿಕೊಳ್ಳಲಾಗಿತ್ತು. ಆದರೆ ದೀರ್ಘಾವಧಿ ಎಚ್ಚರಿಕೆಯ ರೂಪದಲ್ಲಿ ಈ ಮಿತಿಯನ್ನು ವಿಧಿಸಲಾಗಿತ್ತು. 2016ರಲ್ಲಿ ಪ್ಯಾರಿಸ್‌ ಒಪ್ಪಂದ ಜಾರಿಗೆ ಬಂದಿತು. ಆದರೆ ಒಪ್ಪಂದ ಕೇವಲ ಘೋಷಣೆಗಷ್ಟೇ ಸೀಮಿತವಾಯಿತೇ ವಿನಾ ಅದು ಇಂದಿಗೂ ಪರಿಪೂರ್ಣವಾಗಿ ಕಾರ್ಯಗತಗೊಂಡಿಲ್ಲ. ವಿಶ್ವದ ಬಲಾಡ್ಯ ರಾಷ್ಟ್ರಗಳೇ ನಿಗದಿತ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಇಂಗಾಲಾಮ್ಲ ಹೊರಸೂಸುವಿಕೆ ಮತ್ತು ತಾಪವರ್ಧಕ ಅನಿಲಗಳ ಉತ್ಸರ್ಜನೆಯನ್ನು ಕಡಿಮೆ ಮಾಡಲು ವಿಶ್ವ ರಾಷ್ಟ್ರಗಳು ವಿಫ‌ಲವಾಗಿದ್ದರೆ ಇನ್ನು ಬಡ ರಾಷ್ಟ್ರಗಳ ಪಾಲಿಗೆ ಪ್ಯಾರಿಸ್‌ ಒಪ್ಪಂದ ಕೈಗೆಟುಕದ ದ್ರಾಕ್ಷಿಯಂತಾಗಿದೆ.

 ತಜ್ಞರ ಆತಂಕ

ಕೈಗಾರಿಕ ಕ್ರಾಂತಿಗೆ ಮೊದಲು ಭೂಮಿಯ ಸರಾಸರಿ ತಾಪಮಾನ ಎಷ್ಟಿತ್ತೋ ಅದಕ್ಕಿಂತ 2 ಡಿ.ಸೆ.ನಷ್ಟು (+2ಡಿ.ಸೆ.) ಏರಿಕೆಯಾದರೆ ಮನುಷ್ಯನ ಸಹಿತ ಬಹುತೇಕ ಜೀವ ಸಂಕುಲಗಳು ನಾಶವಾಗುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. +1.5 ಡಿಗ್ರಿ ಏರುವ ಹೊತ್ತಿಗೆ ಸಾಗರಗಳು ಉಕ್ಕೇರಿ ಬಹುಪಾಲು ಸಣ್ಣ ದ್ವೀಪ ರಾಷ್ಟ್ರಗಳು ಮುಳುಗಿ ಹೋಗುವ ಭೀತಿ ಯನ್ನೂ ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ ಇದೇ ಪ್ರಮಾಣದಲ್ಲಿ ವಾತಾವರಣಕ್ಕೆ ಇಂಗಾಲಾಮ್ಲವನ್ನು ತುಂಬುತ್ತಾ ಹೋದರೆ 2100ರ ಹೊತ್ತಿಗೆ ಭೂ ತಾಪಮಾನ +2ಡಿಗ್ರಿ ಸೆಲ್ಸಿಯಸ್‌ ದಾಟಿ ಹೋಗಲಿದೆ ಎಂಬ ಆತಂಕ ಹವಾಮಾನ ತಜ್ಞರದ್ದಾಗಿದೆ.

ವಿಶ್ವಸಂಸ್ಥೆ  ಎಚ್ಚರಿಕೆ

ಜಗತ್ತು ಹವಾಮಾನ ವೈಪರೀತ್ಯದತ್ತ ದಾಪುಗಾಲಿಡುತ್ತಿದೆ. ಜಾಗತಿಕ ತಾಪಮಾನ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಕೈಗೊಂಡಿರುವ ಕ್ರಮಗಳು ಅಸಮರ್ಪಕ ಮತ್ತು ಪರ್ಯಾಪ್ತವಾಗಿಲ್ಲ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟನಿಯೋ ಗುಟೆರಸ್‌ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಸಮುದಾಯದ ಸದ್ಯದ ಹವಾಮಾನ ನೀತಿಗಳು ಈ ಶತಮಾನದ ಅಂತ್ಯಕ್ಕೆ ಜಾಗತಿಕ ಸರಾಸರಿ ತಾಪಮಾನವನ್ನು 2.8 ಡಿ.ಸೆ.ಗಳಿಗೆ ಕೊಂಡೊಯ್ಯಲಿದೆ. ಇದು ಕೈಗಾರಿಕಾ ಕ್ರಾಂತಿಗೆ ಮೊದಲು ಇದ್ದ ಜಾಗತಿಕ ಸರಾಸರಿ ತಾಪಮಾನಕ್ಕಿಂತ ಅಧಿಕವಾಗಿದೆ. ಅಷ್ಟು ಮಾತ್ರವಲ್ಲದೆ ವಿಶ್ವಸಂಸ್ಥೆ ನಿಗದಿಪಡಿಸಿದ 1.5 ಡಿ.ಸೆ. ಮಿತಿಗಿಂತ ದುಪ್ಪಟ್ಟಿನಷ್ಟಾಗಿದೆ. ಇದು ನಿಜಕ್ಕೂ ಕಳವಳಕಾರಿಯಾಗಿದ್ದು ವಿನಾಶದತ್ತ ನಮ್ಮನ್ನು ಕೊಂಡೊಯ್ಯುತ್ತಿದೆ. ತಾಪಮಾನ ನಿಯಂತ್ರಣದ ದಿಸೆಯಲ್ಲಿ ಜಾಗತಿಕ ಸಮುದಾಯದ ಪ್ರಯತ್ನ ತೀರಾ ನಿರಾಶಾದಾಯಕವಾಗಿದೆ. ಹವಾಮಾನ ಬದಲಾವಣೆ ಸಮಸ್ಯೆಯನ್ನು ರಾಷ್ಟ್ರಗಳು ಕೀಳಂದಾಜಿಸಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯದಲ್ಲಿ ಮಹತ್ವಾಕಾಂಕ್ಷೆ, ನಂಬಿಕೆ, ಬೆಂಬಲ, ಸಹಕಾರ, ಸ್ಪಷ್ಟತೆ ಮತ್ತು ವಿಶ್ವಾಸಾರ್ಹತೆಗಳ ಕೊರತೆ ಎದ್ದು ಕಾಣುತ್ತಿದೆ. ಇನ್ನಾದರೂ ವಿಶ್ವ ಸಮುದಾಯ ಎಚ್ಚೆತ್ತುಕೊಂಡು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸಲು ಪ್ರಬಲ ಇಚ್ಛಾಶಕ್ತಿ ಮತ್ತು ಬದ್ಧತೆ ತೋರಬೇಕಿದೆ ಎಂದವರು ಕಿವಿಮಾತು ಹೇಳಿದ್ದಾರೆ.

ಜೂ.9ರಂದು ಗರಿಷ್ಠ ತಾಪಮಾನ ದಾಖಲು

ಜೂ.7-11ರ ವರೆಗಿನ ಅವಧಿಯಲ್ಲಿ ಜಾಗತಿಕ ಸರಾಸರಿ ತಾಪಮಾನವು ನಿಗದಿತ ಮಿತಿಯಾದ 1.5 ಡಿ.ಸೆ. ಅಥವಾ ಅದಕ್ಕಿಂತ ಕೊಂಚ ಅಧಿಕವಾಗಿತ್ತು ಆದರೆ ಜೂನ್‌ 9ರಂದು ಗರಿಷ್ಠ 1.69 ಡಿ.ಸೆ. ಗಳಷ್ಟು ದಾಖಲಾಗುವ ಮೂಲಕ ಅಪಾಯದ ಕರೆಗಂಟೆಯನ್ನು ಬಾರಿಸಿದೆ. ಇದೇ ವೇಳೆ ಜೂ.8 ಮತ್ತು ಜೂ. 9ರಂದು ಜಾಗತಿಕ ಸರಾಸರಿ ದೈನಂದಿನ ಈ ದಿನಗಳಲ್ಲಿ  ಈ ಹಿಂದೆ ದಾಖಲಾಗಿದ್ದ ಗರಿಷ್ಠ ತಾಪಮಾನಕ್ಕಿಂತ 0.4ಡಿ.ಸೆ.ನಷ್ಟು ಹೆಚ್ಚಿನದಾಗಿದೆ.

 

ಟಾಪ್ ನ್ಯೂಸ್

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.