ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಸ್ಮೂತ್‌ ರೈಡಿಂಗ್‌ ಅಸಾಧ್ಯ 


Team Udayavani, Jun 20, 2023, 12:55 PM IST

ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಸ್ಮೂತ್‌ ರೈಡಿಂಗ್‌ ಅಸಾಧ್ಯ 

ರಾಮನಗರ: ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಸ್ಮೂತ್‌ ರೈಡಿಂಗ್‌ ಎಂಬುದು ಕನಸಿನ ಮಾತಾಗಿದೆ.

ಅಪಘಾತ ಹೆಚ್ಚಳಕ್ಕೆ ಕಾಮಗಾರಿ ವೈಫಲ್ಯವೂ ಕಾರಣ ಎಂಬ ಚರ್ಚೆ ಆರಂಭಗೊಂಡಿದ್ದು, ಹೆದ್ದಾರಿಯಲ್ಲಿ 100 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವುದು ಸವಾಲಿನ ಕೆಲಸ ಎಂದು ಅನುಭವಿ ಚಾಲಕರೇ ಹೇಳುತ್ತಿದ್ದಾರೆ.

ಪ್ರಧಾನಿ ಉದ್ಘಾಟನೆ: ಎನ್‌.ಎಚ್‌.275ರ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡಿದೆ. ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಸಂಚಾರ ಪ್ರಾ ರಂಭವಾದಾಗಿ ನಿಂದ ಸರಣಿ ಅಪಘಾತ ಸಂಭ ವಿ ಸುತ್ತಿದ್ದು ಇದುವರೆಗೆ ಎಕ್ಸ್‌ ಪ್ರಸ್‌ ಹೈವೇಯಲ್ಲಿ 849 ರಸ್ತೆ ಅಪಘಾತ ಸಂಭವಿ ಸಿವೆ. ನಿರ್ಮಾಣಗೊಂಡ ಕೆಲ ತಿಂಗ ಳಲ್ಲಿ ಇಷ್ಟೊಂದು ಅಪಘಾತ ಸಂಭವಿಸಿರುವುದಕ್ಕೆ ಹೆದ್ದಾರಿ ಕಾಮಗಾರಿಯಲ್ಲಿನ ವೈಫಲ ಕಾರಣ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸಮತಟ್ಟಿಲ್ಲ: ಎಕ್ಸ್‌ಪ್ರೆಸ್‌ ಹೈವೆ ಸಂಪೂರ್ಣವಾಗಿ ಸಮತ ಟ್ಟಾಗಿರಬೇಕು. ಆದರೆ, ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇ ಕೆಲವೆಡೆ ಸಮತಟ್ಟಾಗಿಲ್ಲದೆ ತಗ್ಗು ಮತ್ತು ಎತ್ತರದಿಂದ ಕೂಡಿದೆ. ಇದು ಸಂಚಾರಕ್ಕೆ ಅಡ್ಡಿಯಾಗಿದ್ದು, ತಗ್ಗಾದ ಪ್ರದೇಶದಲ್ಲಿ ವಾಹನ ಗಳು ಚಲಿಸುತ್ತಿರುವ ಅಂದಾಜು ಪ್ರಯಾಣಿಕರಿಗೆ ಸಿಗುವು ದಿಲ್ಲ. ಕೆಲವೊಮ್ಮೆ ತಗ್ಗಾದ ಪ್ರದೇಶದಲ್ಲಿ ಮಂದಗತಿಯಲ್ಲಿ ಸಂಚರಿಸುವ ವಾಹನಗಳಿಗೆ ಹಿಂಬದಿಯಿಂದ ಬರುವ ವಾಹನ ಡಿಕ್ಕಿ ಹೊಡೆಯುವ ಸಾಧ್ಯತೆ ಸಾಕಷ್ಟಿದೆ. ಇತ್ತೀಚಿಗೆ ರಾಮನಗರ-ಚನ್ನಪಟ್ಟಣ ಬೈಪಾಸ್‌ನಲ್ಲಿ ಸಂಭವಿಸಿದ ಕಾರು-ಲಾರಿ ಅಪಘಾತಕ್ಕೆ ಏರುಪೇರಿನ ರಸ್ತೆಯೇ ಕಾರಣ. ದೇವರಹೊಸಹಳ್ಳಿ ಬಳಿ ಬೋರೆಯಾಗಿದ್ದ ರಸ್ತೆಯನ್ನು ಹತ್ತುವಾಗ ಟಿಂಬರ್‌ ಲಾರಿ ವೇಗ ತಗ್ಗಿದೆ. ಹಿಂದಿನಿಂದ ಬರುತ್ತಿದ್ದ ಕಾರಿಗೆ ಇದರ ಅಂದಾಜು ಸಿಗದೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಇದು ಕೇವಲ ಉದಾಹರಣೆಯಾಗಿದ್ದು, ಸಾಕಷ್ಟು ಅಪಘಾತ ಈ ಕಾರಣದಿಂದಲೇ ಸಂಭವಿಸಿವೆ.

ಅಲುಗಾಡುತ್ತವೆ: ಹೆದ್ದಾರಿಯಲ್ಲಿ ಕೆಲವು ಕಡೆ ಪ್ರಯಾಣಿಸುವ ವಾಹನಗಳು 120 ಕಿ.ಮೀ.ವೇಗ ದಾಟುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಳ್ಳುತ್ತಿವೆ. ವಾಹನಗಳು ಶೇಕ್‌ ಆಗುತ್ತಿದ್ದು, ಇದಕ್ಕೆ ಕಾಮಗಾರಿ ಅವೈಜ್ಞಾನಿಕತೆಯೇ ಕಾರಣ ಎಂದು ಹೇಳ ಲಾಗುತ್ತಿದೆ. ಡಾಂಬರು ಹಾಕುವ ಸಮಯದಲ್ಲಿ ಉಂಟಾಗಿರುವ ವೈಫಲ್ಯದಿಂದ ಈ ರೀತಿ ಸಮಸ್ಯೆ ಎದುರಾಗುತ್ತಿದೆ. ಹೆದ್ದಾರಿಯ ಒಂದು ಬದಿಯಿಂದ ಮತ್ತೂಂದು ಬದಿಗೆ ವಾಹನ ಹಾರಿ ಡಿಕ್ಕಿ ಹೊಡೆಯುವುದಕ್ಕೆ ಈ ಸಮಸ್ಯೆಯೇ ಕಾರಣವಾಗಿದೆ.

ಕಿ.ಮೀ. ರಸ್ತೆ ನಿರ್ಮಾಣಕ್ಕೆ 40 ಕೋಟಿ ರೂ.: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಮೊದಲ ಹಂತದ 56.2 ಕಿ.ಮೀ. ರಸ್ತೆ ನಿರ್ಮಾಣಕ್ಕೆ 3900 ಕೋಟಿ ರೂ. ಖರ್ಚಾಗಿದ್ದು ಇದರಲ್ಲಿ 1600 ಕೋಟಿರೂ. ಭೂಸ್ವಾಧೀನಕ್ಕೆ, 2300 ಕೋಟಿ ರೂ. ಕಾಮಗಾರಿಗೆ ಖರ್ಚುಮಾಡಲಾಗಿದೆ. ಕಾಮಗಾರಿಗೆ ಮಾಡಿರುವ ಮೊತ್ತವನ್ನು ಲೆಕ್ಕ ಹಾಕಿದರೆ ಪ್ರತಿ ಕಿ.ಮೀ. 40.92 ಕೋಟಿ ರೂ. ವೆಚ್ಚವಾಗಿದೆ. ಇನ್ನು 2ನೇ ಹಂತದ 61.1 ಕಿ.ಮೀ. ಉದ್ದದ ಕಾಮಗಾರಿಗೆ 3600 ಕೋಟಿ ರೂ. ಖರ್ಚಾಗಿದ್ದು, ಇದರಲ್ಲಿ 1200 ಕೋಟಿ ರೂ. ಭೂಸ್ವಾಧೀನಕ್ಕೆ, 2400 ಕೋಟಿ ರೂ. ರಸ್ತೆ ಕಾಮಗಾರಿಗೆ ಖರ್ಚಾಗಿದೆ. ಪ್ರತಿ ಕಿ.ಮೀ.ಗೆ ಸರಾಸರಿ 39.27 ಕೋಟಿ ರೂ. ಖರ್ಚಾಗಿದೆ. ಇಷ್ಟೊಂದು ಕೋಟಿ ರೂ. ಖರ್ಚುಮಾಡಿ ನಿರ್ಮಿಸಿರುವ ರಸ್ತೆ ಇನ್ನಷ್ಟು ಗುಣಮಟ್ಟದಲ್ಲಿರಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಸವಾರರಿಗೆ ಎದುರಾಗುವ ಸಮಸ್ಯೆ:

 ವಿಶೇಷವಾಗಿ ನಿರ್ಮಾಣ ಮಾಡಿರುವುದಾಗಿ ಎನ್‌ಎಚ್‌ಎಐ ಹೇಳಿದ್ದ ಬಿಡದಿ ಬೈಪಾಸ್‌ ಬಳಿಯ ರೈಲ್ವೆ ಓವರ್‌ ಬ್ರಿಡ್ಜ್ನಲ್ಲಿ ಟೆಂಪೋ ಸ್ಕಿಡ್‌ ಆಗಿ ಬಿದ್ದಿತ್ತು. ಇನ್ನು ಐರಾವತ ಬಸ್‌ ಸಹ ಮಳೆಯಲ್ಲಿ ಜಾರುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದಾದ ಬಳಿಕ ಎನ್‌ಎಚ್‌ಎಐ ಅಧಿಕಾರಿಗಳು ವೈಟ್‌ಪಟ್ಟೆ ಬಳಿದು ಈ ಸೇತುವೆ ಮೇಲೆ ವಾಹನ ಮಂದಗತಿಯಲ್ಲಿ ಸಾಗುವಂತೆ ಮಾಡಿದ್ದಾರೆ. ಆದರೆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ.

 ಪಂಚಮುಖೀ ಗಣಪತಿ ದೇವಾಲಯ ಮುಂಭಾಗದಿಂದ ಜೈನ್‌ ಕಾಲೇಜಿನವರೆಗೆ ಇರುವ ಎಲಿವೇ ಟೆಡ್‌ ರಸ್ತೆ(ಫ್ಲೈ ಓವರ್‌) ಜಾಯಿಂಟ್‌ ಬಳಿ ವಾಹನ ಚಲಿಸಿದಾಗ ಜಂಪ್‌ ಆಗುತ್ತಿದ್ದು ಶಬ್ಧ ಬರುತ್ತದೆ.

 ಮಳೆ ನೀರು ಹರಿದೋಗಲು ವ್ಯವಸ್ಥೆ ಮಾಡಿಲ್ಲ. ಕೆಲವೆಡೆ ಚರಂಡಿಗೆ ನೀರು ಹೋಗಲು ನೆಲಮಟ್ಟ ದಿಂದ ಒಂದು ಅಡಿ ಎತ್ತರದಲ್ಲಿ ರಂಧ್ರ ಮಾಡಿದ್ದು, ಇದರಿಂದ ರಸ್ತೆಗೆ ನೀರು ಹರಿಯುವಂತಾಗಿದೆ.

 ಮಾಯಗಾನಹಳ್ಳಿ ಬಳಿ ಸಣ್ಣ ಮಳೆಗೂ ರಸ್ತೆಯಲ್ಲಿ ನೀರು ಹರಿದು ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದ್ದು, ಈ ಬಗ್ಗೆ ಇನ್ನೂ ಹೆದ್ದಾರಿ ಪ್ರಾಧಿಕಾರ ಪರಿಹಾರ ಹುಡುಕುತ್ತಲೇ ಇದೆ.

 ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳ ಬಳಿ ಸರಿಯಾಗಿ ಫಿನಿಷಿಂಗ್‌ ಆಗದಿದ್ದು ವಾಹನಗಳು ಚಲಿಸುವಾಗ ಹಳಕ್ಕೆ ಬಿದ್ದಂತೆ ಅನುಭವವಾಗುತ್ತದೆ.

ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಚಾಲನೆ ಮಾಡುವಾಗ 100 ಕಿ.ಮೀ. ವೇಗ ದಾಟುತ್ತಿದ್ದಂತೆ ವಾಹನ ಅಲುಗಾಡುತ್ತದೆ. ಇದರಿಂದಾಗಿ ಸವಾರರ ನಿಯಂತ್ರಣಕ್ಕೆ ವಾಹನ ಸಿಗಲ್ಲ. ಈ ಹಿಂದೆ ಇದ್ದ ಬೆಂ-ಮೈ ಚತುಷ್ಪಥ ರಸ್ತೆಯಲ್ಲಿ ಈ ಸಮಸ್ಯೆ ಇರಲಿಲ್ಲ. ವಾಹನ ಏಕೆ ಅಲುಗಾಡುತ್ತದೆ ಎಂಬುದು ಗೊತ್ತಿಲ್ಲ. – ಯೋಗೀಶ್‌, ಚಾಲಕ

– ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.