Nilekani: ತಾವು ಶಿಕ್ಷಣ ಪಡೆದ ಬಾಂಬೆ IITಗೆ 315 ಕೋಟಿ ರೂಪಾಯಿ ದೇಣಿಗೆ ಕೊಟ್ಟ ನಿಲೇಕಣಿ
ಐಐಟಿಯೊಂದಿಗೆ 50 ವರ್ಷಗಳ ಒಡನಾಟವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ
Team Udayavani, Jun 20, 2023, 3:32 PM IST
ಬೆಂಗಳೂರು: ಉದ್ಯಮಿ, ರಾಜಕಾರಣಿ, ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನಿಲೇಕಣಿ ಅವರು ತಾವು ಶಿಕ್ಷಣ ಪಡೆದ ಬಾಂಬೆ ಐಐಟಿ (IIT) ಜತೆಗಿನ ನಿರಂತರ 50 ವರ್ಷಗಳ ಒಡನಾಟದ ನೆನಪಿಗಾಗಿ ಬರೋಬ್ಬರಿ 315 ಕೋಟಿ ರೂಪಾಯಿ ದೇಣಿಗೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಜೇವರ್ಗಿ ಮರಳು ಮಾಫಿಯಾಗೆ ಬಲಿಯಾದ ಪೇದೆ ಮನೆಗೆ ಪ್ರಿಯಾಂಕ್ ಖರ್ಗೆ ಭೇಟಿ; ಪರಿಹಾರ ವಿತರಣೆ
ನಂದನ್ ನಿಲೇಕಣಿ ಅವರು 1973ರಲ್ಲಿ ಬಾಂಬೆ ಐಐಟಿಯಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡಿದ್ದರು. “ಬಾಂಬೆ ಐಐಟಿ ನನ್ನ ಜೀವನದ ತಳಹದಿಯಾಗಿದೆ. ನಾನು ಜೀವನದಲ್ಲಿ ಈ ಮಟ್ಟದಲ್ಲಿ ಬೆಳೆಯಲು ಈ ಶಿಕ್ಷಣ ಸಂಸ್ಥೆ ಕಾರಣವಾಗಿದೆ. ಆ ನಿಟ್ಟಿನಲ್ಲಿ ಪ್ರತಿಷ್ಠಿತ ಬಾಂಬೆ ಐಐಟಿಯೊಂದಿಗೆ 50 ವರ್ಷಗಳ ಒಡನಾಟವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ನಾನು ಈ ಸಂಸ್ಥೆಗೆ ಆಭಾರಿಯಾಗಿದ್ದು, ಭವಿಷ್ಯದ ದೃಷ್ಟಿಕೋನದ ಹಿನ್ನೆಲೆಯಲ್ಲಿ ದೇಣಿಗೆ ನೀಡಿದ್ದೇನೆ” ಎಂದು ನಿಲೇಕಣಿ ತಿಳಿರುವುದಾಗಿ ವರದಿ ವಿವರಿಸಿದೆ.
ನಾನು ನೀಡಿರುವ ದೇಣಿಗೆ ಹಣಕಾಸಿನ ಕೊಡುಗಿಗಿಂತ ಹೆಚ್ಚು. ನನಗೆ ಶಿಕ್ಷಣ ನೀಡಿದ ಸಂಸ್ಥೆಗೆ ಗೌರವ ನೀಡುವ ಮತ್ತು ನಾಳೆಯ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳವ ವಿದ್ಯಾ ಸಂಸ್ಥೆಗೆ ನೀಡಿದ ಕಾಣಿಕೆಯಾಗಿದೆ ಎಂದು ನಿಲೇಕಣಿ ಹೇಳಿದ್ದಾರೆ.
To mark 50 years of my association with @iitbombay, I am donating ₹315 crores to my alma mater. I am grateful to be able to do this🙏
Full release: https://t.co/q6rvuMf2jn pic.twitter.com/f8OEfZ1UTq
— Nandan Nilekani (@NandanNilekani) June 20, 2023
ಮಂಗಳವಾರ (ಜೂನ್ 20) ಬೆಂಗಳೂರಿನಲ್ಲಿ ನಂದನ್ ನಿಲೇಕಣಿ ಮತ್ತು ಬಾಂಬೆ ಐಐಟಿಯ ಪ್ರೊಫೆಸರ್ ಸುಭಾಶಿಸ್ ಚೌಧುರಿ ಜಂಟಿಯಾಗಿ MoUಗೆ ಸಹಿ ಹಾಕಿದ್ದರು.
ನಮ್ಮ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ ನಂದನ್ ನಿಲೇಕಣಿ ಅವರು ಉದಾರ ಕೊಡುಗೆ ನೀಡುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ. ನಂದನ್ ನಿಲೇಕಣಿ ಈ ಮೊದಲು ಐಐಟಿಗೆ 85 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಇದರೊಂದಿಗೆ ನಿಲೇಕಣಿ ಒಟ್ಟು 400 ಕೋಟಿ ರೂಪಾಯಿ ದೇಣಿಗೆ ಕೊಟ್ಟಂತಾಗಿದೆ ಎಂದು ವರದಿ ಹೇಳಿದೆ.
ಈ ಐತಿಹಾಸಿಕ ಸಂಸ್ಥೆಗೆ ದೊಡ್ಡ ಮೊತ್ತದ ದೇಣಿಗೆ ನೀಡಿರುವುದರಿಂದ ಬಾಂಬೆ ಐಐಟಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಸಹಾಯಕವಾಗಲಿದೆ. ಅಷ್ಟೇ ಅಲ್ಲ ಜಾಗತಿಕವಾಗಿಯೂ ಉನ್ನತ ಶಿಕ್ಷಣ ಸಂಸ್ಥೆಯನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದು ಬಾಂಬೆ ಐಐಟಿ ಡೈರೆಕ್ಟರ್, ಪ್ರೊ.ಚೌಧುರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.