26/11 ಆರೋಪಿ ಸಾಜಿದ್ ಮಿರ್ನನ್ನು ʻಜಾಗತಿಕ ಭಯೋತ್ಪಾದಕʼ ಘೋಷಣೆ ಪ್ರಸ್ತಾಪಕ್ಕೆ ಚೀನಾ ತಡೆ
Team Udayavani, Jun 20, 2023, 8:43 PM IST
ವಾಷಿಂಗ್ಟನ್: 26/11 ರ ಮುಂಬೈ ದಾಳಿಯ ಆರೋಪಿಯಾಗಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗೆ ಸೇರಿದ್ದ ಸಾಜಿದ್ ಮಿರ್ನನ್ನು ʻಜಾಗತಿಕ ಭಯೋತ್ಪಾದಕʼ ಎಂದು ಘೋಷಿಸಬೇಕು ಎಂದು ಅಮೆರಿಕ ಮತ್ತು ಭಾರತ ನೀಡಿದ್ದ ಪ್ರಸ್ತಾಪಕ್ಕೆ ಚೀನಾ ಮಂಗಳವಾರ ತಡೆ ನೀಡಿದೆ.
ಸಾಜಿದ್ ಮಿರ್ನನ್ನು ʻಜಾಗತಿಕ ಭಯೋತ್ಪಾದಕʼ ಎಂದು ಘೋಷಿಸಬೇಕು ಎಂದು ಅಮೆರಿಕ ಮುಂದಿಟ್ಟಿದ್ದ ಪ್ರಸ್ತಾಪಕ್ಕೆ ಭಾರತ ಬೆಂಬಲ ನೀಡಿತ್ತು.
ಕಳೆದ ಸೆಪ್ಟೆಂಬರ್ನಲ್ಲೇ ಬೀಜಿಂಗ್ ಈ ಪ್ರಸ್ತಾಪವನ್ನು ತಡೆ ಹಿಡಿದಿತ್ತು. ಇದೀಗ ಸಾಜಿದ್ ಮಿರ್ನನ್ನು ʻಜಾಗತಿಕ ಭಯೋತ್ಪಾದಕʼ ಎಂದು ಘೋಷಿಸುವ ಪ್ರಸ್ತಾಪಕ್ಕೆ ಬೀಜಿಂಗ್ ತಡೆ ನೀಡಿದೆ.
2008 ರ ಮುಂಬೈ ದಾಳಿಯ ಪ್ರಮುಖ ಆರೋಪಿಯಾಗಿರುವ ಸಾಜಿದ್ ಮಿರ್ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿರುವ ಭಯೋತ್ಪಾದಕ. ಮುಂಬೈ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಆತನ ತಲೆಗೆ 5 ಯು.ಎಸ್ ಡಾಲರ್ ಬಹುಮಾನವನ್ನೂ ಘೋಷಿಸಿತ್ತು.
ಕಳೆದ ಜೂನ್ನಲ್ಲಿ ಉಗ್ರ ಕೃತ್ಯಗಳಿಗೆ ಆರ್ಥಿಕ ಸಹಾಯ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಸಾಜಿದ್ ಮಿರ್ಗೆ ಪಾಕಿಸ್ತಾನ ಕೋರ್ಟ್ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಇವು ವಿಶ್ವದ ಅತ್ಯಂತ ದುಬಾರಿ ನಗರಗಳು; ಇಲ್ಲಿದೆ ಪಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.