ಇನ್ನಷ್ಟು ವಿಶ್ವವ್ಯಾಪಿಯಾಗಲಿ ಯೋಗ ಪರಂಪರೆ


Team Udayavani, Jun 21, 2023, 6:04 AM IST

YOGA

ಜಾಗತಿಕವಾಗಿ ಇಂದು ಯೋಗಕ್ಕೆ ಭಾರೀ ಮನ್ನಣೆ ಸಿಕ್ಕಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವಲ್ಲಿ ಯೋಗದ ಪಾತ್ರ ಹಿರಿದಾಗಿದ್ದು, ಪ್ರಪಂಚದ ಸುಮಾರು 30 ಕೋಟಿಗೂ ಹೆಚ್ಚು ಮಂದಿ ಯೋಗ ಮಾಡುತ್ತಿದ್ದಾರೆ ಎಂದರೆ ಅಚ್ಚರಿ ಎನಿಸದೇ ಇರದು. ಇಂದು ಯೋಗ ಧರ್ಮ, ದೇಶ, ಸಂಪ್ರದಾಯಗಳನ್ನು ಮೀರಿ ಬೆಳೆದು ನಿಂತಿದೆ. ಅಷ್ಟೇ ಅಲ್ಲ, ಯೋಗಕ್ಕೆ ಸಂಬಂಧಿಸಿದ ಪೂರಕ ಉದ್ಯಮವೂ ಬೆಳೆದು ನಿಂತಿದೆ.

2015ರ ಜೂ.21ರಂದು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಧಿಕೃತವಾಗಿ ಆರಂಭಿಸಿತು. ಪ್ರಧಾನಿ ನರೇಂದ್ರ ಮೋದಿಯವರ ಶ್ರಮದಿಂದಾಗಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಣೆ ಶುರು ಮಾಡಿತು. ಇಂದು ಅಮೆರಿಕ, ಚೀನಾ, ಇಂಗ್ಲೆಂಡ್‌, ಆಸ್ಟ್ರೇಲಿಯ, ಕೆನಡಾ ಆದಿಯಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ ಶೇ.90ರಷ್ಟು ದೇಶಗಳು ಯೋಗದಿನ ಆಚರಿಸುತ್ತಿವೆ. ಅಷ್ಟೇ ಅಲ್ಲ, ಯೋಗವನ್ನು ಜೀವನದ ಒಂದು ಭಾಗವಾಗಿ ಅನುಸರಿಸುತ್ತಿವೆ.

ಯೋಗದ ಮೂಲ ಭಾರತ. ಸುಮಾರು 5 ಸಾವಿರ ವರ್ಷಗಳ ಹಿಂದೆ ಆರಂಭವಾದ ಈ ಯೋಗ, ಭಾರತದಲ್ಲೇ ಹೆಚ್ಚು ಪ್ರಸಿದ್ಧಿಯಾಗಿತ್ತು. ಇದನ್ನು ಜಾಗತಿಕ ಮಟ್ಟಕ್ಕೆ ಪಸರಿಸಿದ ಮೊದಲಿಗರು ಸ್ವಾಮಿ ವಿವೇಕಾನಂದರು. 1883ರಲ್ಲಿ ಚಿಕಾಗೋದಲ್ಲಿ ಹಿಂದೂ ಧರ್ಮದ ಬಗ್ಗೆ ಭಾಷಣ ಮಾಡಿದ್ದ ಸ್ವಾಮಿ ವಿವೇಕಾನಂದ ಅವರು, ಯೋಗದ ಮಹಿಮೆಯನ್ನು ಸಾರಿದ್ದರು. ಇಂಥ ಯೋಗ ಇಂದು ಅಮೆರಿಕದುದ್ದಕ್ಕೂ ಪಸರಿಸಿದೆ. ಅಲ್ಲಿ ಸದ್ಯ 3.6 ಕೋಟಿ ಮಂದಿ ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಜಾಗತಿಕವಾಗಿ 30 ಕೋಟಿ ಮಂದಿ ಯೋಗಾಭ್ಯಾಸ ನಡೆಸುತ್ತಿದ್ದಾರೆ.

ಯೋಗದಿಂದ ಆರೋಗ್ಯದ ಮೇಲಾಗುವ ಉಪಯೋಗಗಳು ಹೆಚ್ಚು. ಇದು ಹೃದಯ ಸಂಬಂಧಿ ರೋಗಗಳು, ಮಾನಸಿಕ ಆರೋಗ್ಯ ಸುಧಾರಣೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ ನಿಯಂತ್ರಣ, ದೇಹದ ತೂಕ ಕಡಿಮೆ ಮಾಡುತ್ತದೆ. ಅಲ್ಲದೆ, ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವುದರಿಂದ ವೈದ್ಯರೂ, ಯೋಗಾಭ್ಯಾಸ ನಡೆಸುವಂತೆ ಸಲಹೆ ನೀಡುತ್ತಿರುತ್ತಾರೆ.

ಯೋಗದಿಂದ ಕೇವಲ ಆರೋಗ್ಯದ ಸುಧಾರಣೆ ಮಾತ್ರವಲ್ಲ, ಆರ್ಥಿಕವಾಗಿ ಮತ್ತು ಔದ್ಯಮಿಕವಾಗಿಯೂ ಲಾಭ ತರುವಂಥದ್ದಾಗಿದೆ. ಇಂದು ಲಕ್ಷಾಂತರ ಮಂದಿ ಯೋಗದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಯೋಗ ಹೇಳಿಕೊಡುತ್ತಲೇ ಉತ್ತಮ ಜೀವನವನ್ನೂ ಕಂಡುಕೊಂಡಿದ್ದಾರೆ.

ಆರೋಗ್ಯ ಮತ್ತು ಆರ್ಥಿಕವಾಗಿಯೂ ಲಾಭ ತರುವಂಥ ಯೋಗ ಇನ್ನಷ್ಟು ಪಸರಿಸಬೇಕಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರೂ ಯೋಗ ಮಾಡುವುದನ್ನು ಕಲಿತರೆ ತಪ್ಪೇನಿಲ್ಲ. ವಿಚಿತ್ರವೆಂದರೆ ವಿದೇಶಗಳಲ್ಲಿ ಯೋಗಕ್ಕಿರುವ ಮನ್ನಣೆ, ಕೆಲವೊಮ್ಮೆ ಭಾರತದಲ್ಲಿಯೂ ಸಿಗುವುದಿಲ್ಲ. ಇದರ ಆರೋಗ್ಯದ ಗುಟ್ಟು ಇಲ್ಲೇ ಬಹುತೇಕರಿಗೆ ತಿಳಿದಿಲ್ಲ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಪ್ರತಿ ದಿನವೂ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು.

ಅದೇ ರೀತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ವಿಸ್ತರಣೆಯಾಗುವಂತೆ ಕೇಂದ್ರ ಸರ್ಕಾರ ಶ್ರಮ ಹಾಕಬೇಕು. ಈ ನಿಟ್ಟಿನಲ್ಲಿ ಬುಧವಾರ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಅಂಗಳದಲ್ಲೇ ಯೋಗಾಭ್ಯಾಸ ನಡೆಸುತ್ತಿರುವುದು ಸ್ವಾಗತಾರ್ಹ. ಈ ಮೂಲಕವಾದರೂ, ಯೋಗ ಇನ್ನಷ್ಟು ಪಸರಿಸಲಿ ಎಂಬುದು ಎಲ್ಲರ ಆಶಯ.

ಟಾಪ್ ನ್ಯೂಸ್

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

10

Panaji: ಮಲ್ಪೆಯ 2 ಮೀನುಗಾರಿಕಾ ಬೋಟ್‌ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trucking: ರಾಜ್ಯದಲ್ಲಿ ಚಾರಣಕ್ಕೆ ಕಡಿವಾಣ ಸ್ತುತ್ಯರ್ಹ

TREKKING: ರಾಜ್ಯದಲ್ಲಿ ಚಾರಣಕ್ಕೆ ಕಡಿವಾಣ ಸ್ತುತ್ಯರ್ಹ

India Market: ಚೀನ ಬೆಳ್ಳುಳ್ಳಿ ಮೇಲಿನ ನಿಷೇಧ ಕಟ್ಟುನಿಟ್ಟಾಗಿ ಕಾರ್ಯಗತಗೊಳ್ಳಲಿ

India Market: ಚೀನ ಬೆಳ್ಳುಳ್ಳಿ ಮೇಲಿನ ನಿಷೇಧ ಕಟ್ಟುನಿಟ್ಟಾಗಿ ಕಾರ್ಯಗತಗೊಳ್ಳಲಿ

supreme-Court

Encroachment: ಅಕ್ರಮ ನಿರ್ಮಾಣಗಳ ತೆರವು: ಸುಪ್ರೀಂಕೋರ್ಟ್‌ ನಿಲುವು ಸ್ವಾಗತಾರ್ಹ

immifra

Illegal immigrants: ಅಕ್ರಮ ವಲಸಿಗರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

Fake-Medicine

Medicines: ನಶೆಭರಿತ ಔಷಧಗಳಿಗೆ ಲಗಾಮು ಕಾಳಸಂತೆಯತ್ತಲೂ ಇರಲಿ ನಿಗಾ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

10

Panaji: ಮಲ್ಪೆಯ 2 ಮೀನುಗಾರಿಕಾ ಬೋಟ್‌ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.