Daily Horoscope;ಉದ್ಯೋಗ ವ್ಯವಹಾರಗಳಲ್ಲಿ ಯೋಜಿತ ಗುರಿ ಸಾಧನೆ
Team Udayavani, Jun 21, 2023, 7:27 AM IST
ಮೇಷ: ಜವಾಬ್ದಾರಿಯುತ ಕಾರ್ಯ ವೈಖರಿ ಯಿಂದ ಸ್ಥಾನ ಗೌರವಾದಿ ಸುಖ, ಪ್ರಶಂಸೆ, ಆರೋಗ್ಯ ವೃದ್ಧಿ, ಗೃಹೋಪಕರಣ ವಸ್ತು ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ ಸಾಂಸಾರಿಕ ಸುಖದಲ್ಲಿ ವೃದ್ಧಿ.
ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಚಟುವಟಿಕೆ.
ವೃಷಭ: ವಾಹನ, ಭೂಮಿ ಇತ್ಯಾದಿ ಆಸ್ತಿ ವಿಚಾರಗಳಲ್ಲಿಯೂ, ಉದ್ಯೋಗ, ಸರಕಾರಿ ವ್ಯವಹಾರ ಗಳಲ್ಲಿ ಹೆಚ್ಚಿದ ಚಟುವಟಿಕೆ. ಕಾರ್ಯ ಗಳಲ್ಲಿ ಮುನ್ನಡೆ ಸಾಧಿಸಿದ ತೃಪ್ತಿ. ಧನಾರ್ಜನೆಗೆ ಕೊರತೆ ಆಗದು. ಕುಟುಂಬಿಕರೊಂದಿಗೆ ಸಂತೋಷದಿಂದ ಸಮಯ ಕಳೆಯುವಿಕೆ.
ಮಿಥುನ: ಆರೋಗ್ಯದ ಬಗ್ಗೆ ಗಮನವಿರಲಿ. ಅತಿಯಾದ ಒತ್ತಡ ಎದುರಾದೀತು. ಮಾನಸಿಕವಾಗಿ ಸುದೃಢವಾಗಿದ್ದರೂ ದೈಹಿಕ ಶ್ರಮ ಅಧಿಕ ಎನಿಸೀತು. ಮಾತಿನಲ್ಲಿ ಸಹನೆ ಹಾಗೂ ಎಚ್ಚರವಿರಲಿ. ಹಣಕಾಸಿನ ಬಗ್ಗೆ ಮತ್ತೊಬ್ಬರಲ್ಲಿ ವ್ಯವಹರಿಸುವಾಗ ದಾಕ್ಷಿಣ್ಯ ಬೇಡ.
ಕರ್ಕ: ದೀರ್ಘ ಪ್ರಯಾಣಕ್ಕೆ ಅವಕಾಶ. ಉದ್ಯೋಗ ವ್ಯವಹಾರ ಗಳಲ್ಲಿ ಪ್ರಗತಿ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಶ್ರಮ, ಜವಾಬ್ದಾರಿ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಹೆಚ್ಚಿನ ಅವಕಾಶ ತೋರೀತು. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ.
ಸಿಂಹ: ದೇಹಾರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಯೋಜಿತ ಗುರಿ ಸಾಧನೆ. ಪತ್ರವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸುವುದರಿಂದಲೂ ದೃಢ ನಿರ್ಧಾರದಿಂದ ಕಾರ್ಯ ಸಫಲತೆ. ಅನ್ಯರಿಗೆ ಸಹಾಯ ಮಾಡುವಾಗ ಸ್ಪಷ್ಟತೆ ಇರಲಿ.
ಕನ್ಯಾ: ಆರೋಗ್ಯ ವೃದ್ಧಿ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಧನ ವ್ಯಯ. ಬೇರೆಯವರ ವಿಚಾರ ದಲ್ಲಿ ಜವಾಬ್ದಾರಿ ವಹಿಸುವಾಗ ಎಚ್ಚರಿಕೆಯ ನಡೆ ಅಗತ್ಯ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ. ಗೃಹೋಪ ವಸ್ತುಗಳ ಸಂಗ್ರಹ. ದಾಂಪತ್ಯ ಸುಖ ಮಧ್ಯಮ.
ತುಲಾ: ಗುರುಹಿರಿಯರ ಸಹಕಾರದಿಂದ ಸುಖ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿ. ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯವೈಖರಿ. ಪರಿಶ್ರಮಕ್ಕೆ ತಕ್ಕ ಧನಾರ್ಜನೆ ಪ್ರಾಪ್ತಿ. ಭೂಮಿ, ಆಸ್ತಿ ವಿಚಾರಗಳಲ್ಲಿ ಮುನ್ನಡೆ.
ವೃಶ್ಚಿಕ: ದೀರ್ಘ ಪ್ರಯಾಣ, ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಅಧಿಕ ಶ್ರಮದಿಂದ ದೇಹಾಯಾಸ ಸಂಭವ. ಸಹೋದ್ಯೋಗಿಗಳ ಸಹಕಾರ, ಪರಿಶ್ರಮದಿಂದ ಕಾರ್ಯ ಸಫಲತೆ. ಗೃಹೋಪಯೋಗಿ ವಸ್ತು ಸಂಗ್ರಹಕ್ಕೆ ಅಧಿಕ ಧನ ವ್ಯಯ. ವಿದ್ಯಾರ್ಥಿಗಳಿಗೆ ಶುಭ ವಾರ್ತೆ.
ಧನು: ಅನಗತ್ಯ ಒತ್ತಡದಿಂದ ದೇಹಾಯಾಸ ಸಂಭವ. ಆರೋಗ್ಯ ವಿಚಾರದಲ್ಲಿ ಉದಾಸೀನತೆ ಬೇಡ. ದೂರದ ವ್ಯವಹಾರದಿಂದ ಧನಾರ್ಜನೆ ವೃದ್ಧಿ. ತಾಳ್ಮೆ ಸಹನೆಯಿಂದ ಕಾರ್ಯಪ್ರವೃತ್ತರಾದರೆ ಅಭಿವೃದ್ಧಿ. ಮಕ್ಕಳಿಂದ ಸಂತೋಷ, ಧಾರ್ಮಿಕ ಕಾರ್ಯಗಳಿಗೆ ಧನ.
ಮಕರ: ಅತಿಯಾದ ಆತ್ಮಾಭಿ ಮಾನ ಸಲ್ಲದು. ತಾಳ್ಮೆ, ಸಹನೆ, ನಡೆಯಿಂದ ಹೆಚ್ಚಿನ ಪ್ರಗತಿ ಗೌರವ ಪ್ರಾಪ್ತಿ. ಧನಾರ್ಜನೆಗೆ ಸರಿಸಮವಾದ ಖರ್ಚು. ದಾಂಪತ್ಯದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಉದಾಸೀನತೆ ಮಾಡದೆ ಆರೋಗ್ಯ ಗಮನಿಸಿ. ಹಿರಿಯರ ಮಾರ್ಗದರ್ಶನ.
ಕುಂಭ: ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ. ಜನಮನ್ನಣೆ, ಗೌರವಾದಿ ವೃದ್ಧಿ. ಅಧಿಕ ಧನ ಸಂಚಯನ. ಸಣ್ಣ ಪ್ರಯಾಣ ಸಂಭವ. ದಾಂಪತ್ಯ ತೃಪ್ತಿದಾಯಕ. ಮಕ್ಕಳಿಂದ ಹೆಚ್ಚಿನ ಸುಖ ಸಂತೋಷ.
ಮೀನ: ಅಭಿವೃದ್ಧಿಪರ ಚಟುವಟಿಕೆಗಳು. ಆರೋಗ್ಯದಲ್ಲಿ ಸುಧಾರಣೆ. ಸಂದಭೋìಚಿತ ಕಾರ್ಯವೈಖರಿ. ಉತ್ತಮ ಧನಲಾಭ. ವಾಕ್‌ಚತುರತೆಯಿಂದ ಜನರಂಜನೆ. ಎಲ್ಲರ ಪ್ರೀತಿ ಸಂಪಾದನೆ. ಗೃಹದಲ್ಲಿ ಸಂಭ್ರಮ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.