ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳನ್ನು ಬಿಡುಗಡೆ ಮಾಡಿದ ಸ್ನ್ಯಾಪ್ ಚಾಟ್!

ಮಚ್ಚ, ಚಿನ್ನು, ಅನು, ಅಮ್ಮು ಮತ್ತು ಮಗಾ: ಇವು ಬೆಂಗಳೂರಿನ ಅತ್ಯಂತ ಜನಪ್ರಿಯ ಅಡ್ಡ ಹೆಸರುಗಳು!

Team Udayavani, Jun 21, 2023, 1:38 PM IST

ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳನ್ನು ಬಿಡುಗಡೆ ಮಾಡಿದ ಸ್ನ್ಯಾಪ್ ಚಾಟ್!

ಬೆಂಗಳೂರು: ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆಂದು ಇರುವ ವಿಶ್ಯುವಲ್ ಮೆಸೇಜಿಂಗ್ ಆ್ಯಪ್ ಆಗಿರುವ ಸ್ನ್ಯಾಪ್ ಚಾಟ್ ಇಂದು YouGov ನ ಸಹಭಾಗಿತ್ವದಲ್ಲಿ ಭಾರತೀಯ ಅಡ್ಡಹೆಸರಿನ ಸಂಸ್ಕೃತಿಯನ್ನು ಅನಾವರಣ ಮಾಡಿದೆ. ಸ್ನ್ಯಾಪ್ ಚಾಟ್ ಮತ್ತು YouGov ಸಹಭಾಗಿತ್ವದಲ್ಲಿ ಈ ಅಡ್ಡ ಹೆಸರಿನ ಸಂಶೋಧನೆ ನಡೆದಿದ್ದು, ದೇಶಾದ್ಯಂತ ಇರುವ ವಿಭಿನ್ನ ಬಗೆಯ ಅಡ್ಡ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ.

ದೇಶಾದ್ಯಂತ ಸೋನು, ಬಾಬು, ಮಚ್ಚ, ಶೋನಾ ಮತ್ತು ಪಿಂಕಿ ಎಂಬ ಅಡ್ಡ ಹೆಸರುಗಳು ಅತ್ಯಂತ ಜನಪ್ರಿಯವಾಗಿವೆ. ಈ ಅಡ್ಡ ಹೆಸರಿನ ಬಗ್ಗೆ ಸ್ನ್ಯಾಪ್ ಚಾಟ್ ಅಧ್ಯಯನವನ್ನೇ ನಡೆಸಿದೆ. ಸ್ನ್ಯಾಪ್ ಚಾಟ್ ನ ಲೆನ್ಸ್ ನಲ್ಲಿ ಆಗ್ಮೆಂಟೆಡ್ ರಿಯಾಲಿಟಿಯಲ್ಲಿ(AR) ಭಾರತದ ಟಾಪ್ ಅಡ್ಡ ಹೆಸರುಗಳು ಮತ್ತು ನನ್ನ ಅಡ್ಡಹೆಸರು ಎಂಬ ಎರಡು ಬಗೆಯ ಅಡ್ಡ ಹೆಸರುಗಳ ಬಗ್ಗೆ ಅಧ್ಯಯನ ನಡೆಸಿದೆ.

ಮೊದಲ ಇಂಟರ್ ಆ್ಯಕ್ಟೀವ್ ಎಆರ್ ಲೆನ್ಸ್ ಗೆ ‘India’s Top Nicknames’ ಎಂದು ಕರೆಯಲಾಗಿತ್ತು. ಇದರಲ್ಲಿ ಭಾರತದ ಐದು ಅತ್ಯಂತ ಜನಪ್ರಿಯ ಅಡ್ಡ ಹೆಸರುಗಳನ್ನು ಆಯ್ಕೆ ಮಾಡಲಾಯಿತು. ಕೇವಲ ಇದಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಭಾರತೀಯರಿಗೆ `ನನ್ನ ಅಡ್ಡ ಹೆಸರು’ ಅನ್ನು ತಮ್ಮದೇ ಆದ ಅಡ್ಡ ಹೆಸರನ್ನು ಸೃಷ್ಟಿಸಲು ಅವಕಾಶ ನೀಡಲಾಗಿತ್ತು. ಗುಡ್ಡು, ಸನ್ನಿ ಮತ್ತು ಟಿಂಕು ಎಂಬ ಹೆಸರಿನಿಂದ ಏಂಜಲ್ ಮತ್ತು ಬೇಬಿವರೆಗೆ ಹೊಸ ಕಸ್ಟಮ್ ನಿಕ್ ನೇಮ್ ಗಳು ಬಂದವು.

ಭಾರತೀಯ Gen Z ಮತ್ತು ಯುವ ಮಿಲೇನಿಯಲ್ ಗಳು ಆನ್ಲೈನ್ ನಲ್ಲಿ ತಮ್ಮ ಅಡ್ಡ ಹೆಸೆರುಗಳನ್ನು ಬಳಸುವುದನ್ನು ಇಷ್ಟಪಡುತ್ತಾರೆ ಎಂಬುದನ್ನು ಸಮೀಕ್ಷೆ ಬಹಿರಂಗಪಡಿಸಿದೆ. ಇದಕ್ಕೆ ಪ್ರಮುಖ ಕಾರಣ ಅವರ ಹೆಸರುಗಳನ್ನು ಸ್ನ್ಯಾಪಿಯಾಗಿ, ಕೂಲ್ ಆಗಿ ಕಾಣುವಂತೆ ಮತ್ತು ತಮ್ಮ ಖಾಸಗಿತನವನ್ನು ರಕ್ಷಣೆ ಮಾಡಿಕೊಳ್ಳುವುದಾಗಿದೆ. ಇದಲ್ಲದೇ, ಅಡ್ಡಹೆಸರುಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದಾಗಿದೆ. ವಿಶೇಷವೆಂದರೆ ಶೇ.96 ರಷ್ಟು ಜನರು ತಮ್ಮ ಜೀವನದ ಒಂದಲ್ಲಾ ಒಂದು ಹಂತದಲ್ಲಿ ತಮ್ಮ ಅಡ್ಡ ಹೆಸರನ್ನು ಬಳಸುತ್ತಿದ್ದಾರೆ ಎಂಬುದನ್ನು ಅಂಕಿಅಂಶಗಳು ದೃಢಪಡಿಸಿವೆ.

ಅಡ್ಡಹೆಸರು- ಭಾರತೀಯ ಗುರುತಿನ ಸಂಕೇತ
ಭಾರತದಲ್ಲಿ, ಅಡ್ಡಹೆಸರುಗಳು ಕೇವಲ ಲೇಬಲ್ ಗಳಾಗಿಲ್ಲ. ಇವುಗಳು ಒಬ್ಬ ವ್ಯಕ್ತಿಯ ವೈಯಕ್ತಿಕ ಗುರುತುಗಳನ್ನು ಹೇಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಾಮಾನ್ಯವಾಗಿ ಸಾಕುಪ್ರಾಣಿಗಳ ಹೆಸರುಗಳು, ಮನೆಯ ಹೆಸರು ಅಥವಾ ‘ದಾಕ್ ನಾಮ್’ ಎಂದು ಕರೆಯಲಾಗುತ್ತದೆ. ಈ ಅಡ್ಡಹೆಸರುಗಳು ನಮ್ಮ ಸಂಸ್ಕೃತಿಯಲ್ಲೇ ಸಮ್ಮಿಳಿತವಾಗಿಬಿಟ್ಟಿವೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ಮಟ್ಟಿಗೆ ಹೇಳುವುದಾದರೆ, ಇಲ್ಲಿ ಹತ್ತು ಹಲವಾರು ಅಡ್ಡ ಹೆಸರುಗಳು ಕಂಡುಬರುತ್ತವೆ. ಅವುಗಳಲ್ಲಿ ಸಮೀಕ್ಷೆಯಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಅಡ್ಡ ಹೆಸರುಗಳೆಂದರೆ ಮಚ್ಚಾ, ಚಿನ್ನು, ಅನು, ಅಮ್ಮು ಮತ್ತು ಮಗಾ  ಆದರೆ, ಈ ಜನಪ್ರಿಯತೆಯನ್ನು ಬದಿಗಿಟ್ಟು ನೋಡಿದರೆ, ಈ ಪ್ರೀತಿಯ ಅಡ್ಡಹೆಸರುಗಳು ಭಾರತೀಯರು ತಮ್ಮನ್ನು ತಾವು ಗ್ರಹಿಸಿಕೊಳ್ಳುವ ಮತ್ತು ಇತರೊಂದಿಗೆ ಸಂವಹನ ನಡೆಸುವ ವಿಧಾನದ ಮೇಲೆ ಹೇಗೆ ಮಹತ್ವದ ಪ್ರಭಾವ ಬೀರಿದ್ದಾರೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಡ್ಡ ಹೆಸರುಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಜನಪ್ರಿಯತೆಯ ಜತೆಯಲ್ಲಿ ಅಡ್ಡಹೆಸರುಗಳು ಹೆಮ್ಮೆಯ ವಿಚಾರವಾಗಿವೆ. ಅಡ್ಡ ಹೆಸರುಗಳ ಬಗ್ಗೆ ಬಹುತೇಕ ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಂದೆಡೆ ಕೇವಲ ಶೇ.15 ರಷ್ಟು ಜನರು ತಮ್ಮ ಅಡ್ಡ ಹೆಸರುಗಳನ್ನು ಸಾರ್ವಜನಿಕವಾಗಿ ಬಳಸಲು ಮುಜುಗರವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ!

ಟಾಪ್ ನ್ಯೂಸ್

Aravind-Bellad

Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್‌ ಭವಿಷ್ಯ

modi (4)

PM Modi ಯಿಂದ ನೆತನ್ಯಾಹುಗೆ ಕರೆ:ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ..

1-asas

Belagavi; ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡುವಂತೆ ಬೃಹತ್ ಪ್ರತಿಭಟನೆ

1-qwewqe

Varanasi; ಇದೇನಾ ‘ಸ್ವಚ್ಛ ಭಾರತ’?: ಫೋಟೋ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ ಅಖಿಲೇಶ್

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

MG Motor: ನೂತನ ಇವಿ ಕಾರು ಸಿಯುವಿ ಝಿಎಸ್‌ ವಿಂಡ್ಸರ್‌ ಮಾರುಕಟ್ಟೆಗೆ

MG Motor: ನೂತನ ಇವಿ ಕಾರು ಸಿಯುವಿ ಝಿಎಸ್‌ ವಿಂಡ್ಸರ್‌ ಮಾರುಕಟ್ಟೆಗೆ

7

Ranveer Allahbadia: ಖ್ಯಾತ ಯೂಟ್ಯೂಬರ್‌ ರಣವೀರ್ ಅಲ್ಲಾಬಾಡಿಯಾ ಯೂಟ್ಯೂಬ್‌ ಖಾತೆ ಹ್ಯಾಕ್

Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್

Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Aravind-Bellad

Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್‌ ಭವಿಷ್ಯ

modi (4)

PM Modi ಯಿಂದ ನೆತನ್ಯಾಹುಗೆ ಕರೆ:ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ..

arre

Kumble: ಮಾವನ ಕೊಲೆಗೆ ಯತ್ನ: ಆರೋಪಿ ಬಂಧನ

1-asas

Belagavi; ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡುವಂತೆ ಬೃಹತ್ ಪ್ರತಿಭಟನೆ

5

Malpe: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.