ಬೇಡಿಕೆ ಇಲ್ಲದೆ ಸೊರಗಿದ ಕೊಡೆ, ರೈನ್‌ಕೋಟ್ ವ್ಯಾಪಾರ
ಕೈಕೊಟ್ಟ ಮುಂಗಾರು
Team Udayavani, Jun 21, 2023, 2:50 PM IST
ಉಡುಪಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ವ್ಯಾಪಾರ ವಲಯದಲ್ಲಿಯೂ ನಿರಾಸೆ ಮೂಡಿದೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕೊಡೆ, ರೈನ್‌ಕೋಟ್‌ಗಳಿಗೆ ವ್ಯಾಪಾರ ಇಲ್ಲದಂತಾಗಿದೆ. ಮಳೆಗೆ ಸಂಬಂಧಿಸಿ ಕೊಡೆ, ರೈನ್‌ಕೋಟ್ ಸಹಿತ ವಿವಿಧ ವಸ್ತುಗಳ ಬೇಡಿಕೆಯಲ್ಲಿಯೂ ತೀವ್ರ ಕುಸಿತ ಕಂಡಿದೆ.
ಪ್ರತೀ ವರ್ಷದಂತೆ ವ್ಯಾಪಾರಿಗಳು ಮಳೆಗಾಲಕ್ಕೆ ತಿಂಗಳ ಮುಂಚಿತವಾಗಿಯೇ ಮಳೆಯಿಂದ ರಕ್ಷಣೆ ಪಡೆಯುವಂತಹ ವಸ್ತುಗಳನ್ನು ತರಿಸಿಕೊಂಡು ವ್ಯಾಪಾರಕ್ಕೆ ಸಿದ್ಧರಾಗಿದ್ದರು. ಬೀದಿ ಬದಿಯಲ್ಲೂ ರೈನ್ ಕೋಟ್, ಕೊಡೆಗಳನ್ನು ಮಾರಾಟ ಮಾಡುವವರು ಜೂನ್ ತಿಂಗಳ ಆರಂಭದಿಂದಲೇ ಅಲ್ಲಲ್ಲಿ ವ್ಯಾಪಾರ ಆರಂಭಿಸಿದ್ದರು. ಶಾಲಾ ಆರಂಭದ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯಾಪಾರ ಇತ್ತು. ಆದರೆ ಬಳಿಕ ಬೇಡಿಕೆ ಇಲ್ಲವಾಗಿದೆ. ಒಮ್ಮೆ ಮಳೆ ಚುರುಕು ಪಡೆಯುವ ಲಕ್ಷಣ ಕಾಣಿಸಿಕೊಂಡಿತಾದರೂ, ಮತ್ತೆ ಮಳೆ ಕ್ಷೀಣಿಸಿದೆ. ಮಥ ತಿಂಗಳ ಅಂತ್ಯದಲ್ಲಿ ಸ್ವಲ್ಪ ವ್ಯಾಪಾರ ಆಯಿತು. ಅನಂತರ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಗಿದೆ. ಜತೆಗೆ ಬಿಸಿಲೂ ಇರುವುದರಿಂದ ಜನರೂ ಮಳೆ ಆರಂಭವಾಗಲಿ ಮತ್ತೆ ನೋಡುವ ಎನ್ನುವ ಯೋಚನೆಯಲ್ಲಿದ್ದಾರೆ.
ಹುಬ್ಬಳ್ಳಿ-ಬೆಂಗಳೂರಿನಿಂದ ಪೂರೈಕೆ
ಉಡುಪಿ ಜಿಲ್ಲೆಯ ಮಾರುಕಟ್ಟೆಗಳಿಗೆ ಹುಬ್ಬಳ್ಳಿ, ಬೆಂಗಳೂರು, ಮುಂಬಯಿ ಭಾಗದಿಂದ ರೈನ್ ಕೋಟ್, ಕೊಡೆಗಳು ಪೂರೈಕೆಯಾಗುತ್ತದೆ. ಈಗಾಗಲೇ ಎಲ್ಲ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಆರ್ಡರ್ ಕೊಟ್ಟು ದಾಸ್ತಾನು ಇರಿಸಿದ್ದಾರೆ. ಉಡುಪಿಯಲ್ಲಿ ಹೋಲ್‌ಸೇಲ್ ಡಿಸ್ಟ್ರಿಬ್ಯೂಟರ್‌ಗಳಿದ್ದು, ಇಲ್ಲಿಂದ ಗ್ರಾಮಾಂತರ, ಸಣ್ಣ ಪೇಟೆಗಳಿಗೆ ಪೂರೈಕೆಯಾಗುತ್ತದೆ. ಕಳೆದ ವರ್ಷ ಮೇ ತಿಂಗಳ ಮಧ್ಯಭಾಗದಿಂದಲೇ ವ್ಯಾಪಾರ ನಡೆದಿದೆ. ಜೂನ್ ತಿಂಗಳ ಅಂತ್ಯದ ವೇಳೆಗೆ ತರಿಸಿಕೊಂಡಿದ್ದ ವಸ್ತುಗಳು ಬಹುತೇಕ ಮಾರಾಟ ಆಗಿತ್ತು. ಆದರೆ ಈ ಬಾರಿ ಕೆಲವು ಬಾಕ್ಸ್‌ಗಳನ್ನು ಇನ್ನಷ್ಟೇ ತೆರೆಯಬೇಕಿದೆ. ಗೋಡೌನ್‌ಗಳಲ್ಲಿ ಇರಿಸಿದ್ದು ಅಲ್ಲಿಯೇ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಎಲ್ಲೆಲ್ಲೂ ಕೊಡೆಗಳ ರಂಗು
ನಗರದ ಕೆಎಂ ಮಾರ್ಗ, ಮಣಿಪಾಲ ಸಿಂಡಿಕೇಟ್ ಸರ್ಕಲ್, ಬನ್ನಂಜೆ ಮೊದಲಾದ ಕಡೆಗಳಲ್ಲಿ ರಸ್ತೆ ಮೇಲೆ ಮಾರಾಟಗಾರರು ಕೊಡೆ, ರೈನ್‌ಕೋಟ್ ಮಾರುತ್ತಿದ್ದಾರೆ. ಮೈಸೂರು, ಮಂಡ್ಯ ಭಾಗದಿಂದ ವ್ಯಾಪಾರಿಗಳು ನಗರಕ್ಕೆ ಬಂದಿದ್ದು, ಮಳೆ ಆರಂಭವಾದರೆ ಒಮ್ಮೆಲೇ ಬೇಡಿಕೆ ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ವ್ಯಾಪಾರಿಗಳದ್ದು. ನಗರದ ಅಂಗಡಿಗಳಲ್ಲಿ ಕೊಡೆ, ರೈನ್‌ಕೋಟ್‌ಗಳು ರಾರಾಜಿಸುತ್ತಿದೆ.
ಮಳೆ ಇಲ್ಲದೆ ವ್ಯಾಪಾರ ಸಂಪೂರ್ಣ ಸೊರಗಿದ್ದು, ಕೊಡೆ, ರೈನ್‌ಕೋಟ್, ಟಾರ್ಪಾಲು ಸಹಿತ ಇನ್ನಿತರ ವಸ್ತುಗಳಿಗೆ ಬೇಡಿಕೆ ಇಲ್ಲ. ಆರಂಭದಲ್ಲಿ ಸ್ವಲ್ಪ ವ್ಯಾಪಾರ ನಡೆಯಿತು. ಕಳೆದ 20 ದಿನಗಳಿಂದ ಬೇಡಿಕೆ ಸಂಪೂರ್ಣ ಕುಸಿತವಾಗಿದೆ.
– ಐರೋಡಿ ಸಹನಶೀಲ ಪೈ, ಅಧ್ಯಕ್ಷ, ಉಡುಪಿ ಜಿಲ್ಲಾ ವರ್ತಕರ ಸಂಘ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.