ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಪುರುಷನಾಗಲು ನಿರ್ಧರಿಸಿದ ಮಾಜಿ ಸಿಎಂ ಪುತ್ರಿ
Team Udayavani, Jun 21, 2023, 6:14 PM IST
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ ಅವರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಪುರುಷನಾಗಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಎಲ್ಜಿಬಿಟಿಕ್ಯೂ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸುಚೇತನಾ ತಾನು ಪುರುಷ ಎಂದು ಗುರುತಿಸಿಕೊಂಡಿದ್ದೇನೆ ಮತ್ತು ದೈಹಿಕವಾಗಿಯೂ ಪುರುಷನಾಗಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ “ಇಂಡಿಯಾ ಟುಡೇ” ಮಾತನಾಡಿರುವ ಅವರು, “ ನನಗೆ ನನ್ನ ಪೋಷಕರ ಗುರುತು ಅಥವಾ ಕುಟುಂಬದ ಗುರುತು ದೊಡ್ಡ ವಿಷಯವಲ್ಲ. ನನ್ನ ಎಲ್ಜಿಬಿಟಿಕ್ಯೂ( LGBTQ) ಚಳುವಳಿಯ ಭಾಗವಾಗಿ ನಾನು ಇದನ್ನು ಮಾಡುತ್ತಿದ್ದೇನೆ. ಟ್ರಾನ್ಸ್ ಮ್ಯಾನ್ ಆಗಿ ನಾನು ಪ್ರತಿದಿನ ಎದುರಿಸುತ್ತಿರುವ ಸಾಮಾಜಿಕ ಕಿರುಕುಳವನ್ನು ನಿಲ್ಲಿಸಲು ನಾನು ಬಯಸಿದ್ದೇನೆ. ನಾನು ವಯಸ್ಕನಾಗಿದ್ದೇನೆ. ನನಗೆ ಈಗ 41 ವರ್ಷ ಆಗಿದೆ ನನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬಹುದು. ಅದೇ ರೀತಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಪೋಷಕರನ್ನು ಇದಕ್ಕೆ ಎಳೆಯಬೇಡಿ. ಮಾನಸಿಕವಾಗಿ ತನ್ನನ್ನು ತಾನು ಪುರುಷನೆಂದು ಪರಿಗಣಿಸುವವನು ಸಹ ಮನುಷ್ಯನೇ, ನಾನು ಮಾನಸಿಕವಾಗಿ ಪುರುಷ ಎಂದು ಪರಿಗಣಿಸಿದ್ದೇನೆ. ಅದು ಈಗ ದೈಹಿಕವಾಗಿರಬೇಕೆಂದು ನಾನು ಬಯಸಿದ್ದೇನೆ” ಎಂದಿದ್ದಾರೆ.
“ನನ್ನ ಈ ನಿರ್ಧಾರದ ವಿರುದ್ಧ ಏನೇ ಬಂದರೂ ನಾನು ಹೋರಾಡುತ್ತೇನೆ. ಯಾರು ಏನೇ ಹೇಳಿದರೂ ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ದ. ದಯವಿಟ್ಟು ಮಾಧ್ಯಮಗಳು ಈ ಸುದ್ದಿಯನ್ನು ತಿರುಚಿಕೊಂಡು ಹಾಕಬೇಡಿ”ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನನ್ನನು ಬಾಲ್ಯದಿಂದಲೂ ಅರ್ಥ ಮಾಡಿಕೊಂಡ ನನ್ನ ಪೋಷಕರು ನನ್ನ ನಿರ್ಧಾರವನ್ನು ಬೆಂಬಲಿಸಬಹುದು ಎಂದು ಅವರು ಹೇಳಿದ್ದಾರೆ.
ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ʼಸುಚೇತನಾʼ ದಿಂದ ‘ಸುಚೇತನ್’ ಆಗಲು ಬಯಸಿದ್ದೇನೆ. ಈ ಸಂಬಂಧ ಕಾನೂನು ಸಲಹೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇನೆ ಮತ್ತು ಕಾರ್ಯವಿಧಾನಕ್ಕೆ ಅಗತ್ಯವಿರುವ ಎಲ್ಲಾ ಪ್ರಮಾಣಪತ್ರಗಳಿಗಾಗಿ ಮನೋವೈದ್ಯರನ್ನು ಸಂಪರ್ಕಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.