ಬೆಂಗಳೂರು: ಪಿಯು ದಂಡರಹಿತ ದಾಖಲಾತಿ ಅವಧಿ ವಿಸ್ತರಣೆ
Team Udayavani, Jun 22, 2023, 8:10 AM IST
ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ದಂಡರಹಿತ ದಾಖಲಾತಿ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿಂಧೂ ಬಿ. ರೂಪೇಶ್ ಸುತ್ತೋಲೆ ಹೊರಡಿಸಿದ್ದಾರೆ.
ಜುಲೈ 10 ರವರೆಗೆ 670 ರೂ.ಗಳ ದಂಡ ಶುಲ್ಕದೊಂದಿಗೆ ವಿಳಂಬ ದಾಖಲಾತಿ ಮತ್ತು ಜುಲೈ 20ರವರೆಗೆ ವಿಶೇಷ ದಂಡ ಶುಲ್ಕ 2,890 ರೂಗಳನ್ನು ವಿಧಿಸಿ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಆದರೆ ಕನಿಷ್ಟ ಹಾಜರಾತಿಯ ಇರುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಜುಲೈ 20ರ ನಂತರ ಯಾವುದೇ ಕಾರಣಕ್ಕೂ ದಾಖಲಾತಿ ದಿನಾಂಕ ವಿಸ್ತರಿಸುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.