Pawan Kalyan: ಪ್ರಭಾಸ್, ಮಹೇಶ್ ಬಾಬು ನನಗಿಂತ ಹೆಚ್ಚು ದುಡಿಯುತ್ತಾರೆ: ಪವನ್ ಕಲ್ಯಾಣ್
ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಗ್ಲೋಬಲ್ ಸ್ಟಾರ್ ಗಳಾಗಿದ್ದಾರೆ
Team Udayavani, Jun 22, 2023, 11:21 AM IST
ಹೈದರಾಬಾದ್: ಟಾಲಿವುಡ್ ಪವರ್ ಸ್ಟಾರ್, ನಟ ಪವನ್ ಕಲ್ಯಾಣ್ ಸದ್ಯ ಆಂಧ್ರ ಪ್ರದೇಶದ ಚುನಾವಣೆಯ ಅಂಗವಾಗಿ ʼ ವಾರಾಹಿ ವಿಜಯ ಯಾತ್ರೆʼಯನ್ನು ನಡೆಸುತ್ತಿದ್ದಾರೆ. ಆಂಧ್ರದ ನಾನಾ ಕಡೆ ಬಸ್ಸಿನಲ್ಲಿ ತಿರುಗಾಟ ನಡೆಸಿ ಜನರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಇದೇ ವೇಳೆ ಅವರು ತನ್ನ ಸಿನಿಮಾರಂಗದ ನಟರ ಬಗ್ಗೆ ಮಾತನಾಡಿರುವ ವಿಡಿಯೋ ಕ್ಲಿಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ.
ಜೂ.21 ರಂದು ಮುಮ್ಮಿಡಿವರಂಗೆ ಭೇಟಿ ನೀಡಿದ ಸಂದರ್ಭದಲ್ಲಿ ನಟರಾದ ಮಹೇಶ್ ಬಾಬು, ಪ್ರಭಾಸ್, ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಚಿರಂಜೀವಿ, ಅಲ್ಲು ಅರ್ಜುನ್ ಮತ್ತು ಬಾಲಕೃಷ್ಣ ಅವರ ಬಗ್ಗೆ ಮಾತನಾಡಿದ್ದಾರೆ.
ರಾಜಕೀಯ ಸಮಾವೇಶದಲ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿದ ಅವರು, “ಜನರು ಯಾವುದೇ ನಾಯಕನನ್ನು ಮೆಚ್ಚಬಹುದು. ರಾಜಕೀಯಕ್ಕೆ ಬಂದಾಗ ಅಂಥ ನಾಯಕನನ್ನು ನಂಬಬೇಕು. ಮಹೇಶ್ ಬಾಬು, ಪ್ರಭಾಸ್, ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಚಿರಂಜೀವಿ, ಅಲ್ಲು ಅರ್ಜುನ್ ಮತ್ತು ಬಾಲಕೃಷ್ಣ ಅವರ ಹೆಸರನ್ನು ಹೇಳಿದ ಅವರು, ಮಹೇಶ್ ಬಾಬು ಹಾಗೂ ಪ್ರಭಾಸ್ ನನಗಿಂತ ಹೆಚ್ಚು ದೊಡ್ಡ ಸ್ಟಾರ್ ಗಳು. ಅವರ ಸ್ಟಾರ್‌ಡಮ್ ನೋಡಿ ನನಗೆ ಅಹಂ ಇಲ್ಲ. ಅವರು ನನ್ನಗಿಂತ ಜಾಸ್ತಿ ಸಂಪಾದನೆ ಮಾಡುತ್ತಾರೆ. ಅವರು ಪ್ಯಾನ್ ಇಂಡಿಯಾ ಸ್ಟಾರ್ ಗಳು. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಗ್ಲೋಬಲ್ ಸ್ಟಾರ್ ಗಳಾಗಿದ್ದಾರೆ. ನನ್ನ ಪರಿಚಯ ಬೇರೆ ರಾಜ್ಯ ಅಥವಾ ದೇಶಗಳಿಗಿಲ್ಲ. ಆದರೆ ಅವರ ಪರಿಚಯವಿದೆ. ಅವರನ್ನು ನೋಡಿದರೆ ನನಗೆ ಅಹಂವಿಲ್ಲ.ಎಲ್ಲರೂ ಒಳ್ಳೆಯದನ್ನು ಮಾಡಬೇಕೆಂದು ನಾನು ಬಯಸುತ್ತೇನೆ.”
ಇದನ್ನೂ ಓದಿ: ರಕ್ತಸಿಕ್ತ ಸುತ್ತಿಗೆ ಹಿಡಿದ ದಳಪತಿ: ಬರ್ತ್ ಡೇಗೆ ಮಾಸ್ ʼಲಿಯೋʼ ಫಸ್ಟ್ ಲುಕ್ ಗಿಫ್ಟ್
ಪವನ್ ಕಲ್ಯಾಣ್ ಸದ್ಯ ಸಿನಿಮಾ ಮತ್ತು ರಾಜಕೀಯದ ನಡುವೆ ಬ್ಯುಸಿಯಾಗಿದ್ದಾರೆ. ಸಾಯಿಧರಮ್ ತೇಜ್ ರೊಂದಿಗೆ ನಟಿಸಿರುವ ಸಮುದ್ರಕನಿ ನಿರ್ದೇಶನದ ʼಬ್ರೋʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. “ಹರಿ ಹರ ವೀರ ಮಲ್ಲು”, “ಉಸ್ತಾದ್ ಭಗತ್ ಸಿಂಗ್” ಸಿನಿಮಾವೂ ನಿರ್ಮಾಣದ ಹಂತದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.