ನಮ್ಮ ಸರ್ಕಾರದ ಬಗ್ಗೆ ಮಾತಾಡಲು ಬಿಜೆಪಿಗೆ ಯೋಗ್ಯತೆ ಇಲ್ಲ: ಸಚಿವ ಆರ್.ಬಿ.ತಿಮ್ಮಾಪುರ
Team Udayavani, Jun 22, 2023, 2:56 PM IST
ಚಿತ್ರದುರ್ಗ: 600 ಭರವಸೆ ನೀಡಿ 50 ಭರವಸೆಗಳನ್ನೂ ಪೂರೈಸದ ಅಯೋಗ್ಯ ಪಕ್ಷ ಬಿಜೆಪಿ. ನಾವು ಅಧಿಕಾರಕ್ಕೆ ಬಂದ ತಿಂಗಳಲ್ಲೇ ಯೋಜನೆ ತರುತ್ತಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ಮಾತಾಡಲು ಬಿಜೆಪಿಗೆ ಯೋಗ್ಯತೆ ಇಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಘೋಷಣೆಗೂ ಮುನ್ನ ಮೆದುಳು ಇರಲಿಲ್ವಾ ಎಂದ ಕೇಂದ್ರ ಸಚಿವ ಶೋಭಾ ಕರಂದ್ಲಾಗೆ ಟಾಂಗ್ ನೀಡಿ, ಕಾಂಗ್ರೆಸ್ ನವರಿಗೆ ಅಲ್ಲ, ಈ ಹೇಳಿಕೆ ನೀಡಿದವರಿಗೆ ಮೆದುಳಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಹಿಟ್ಲರ್ ಧೋರಣೆ ಎಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಟಾಂಗ್ ನೀಡಿದ ಸಚಿವರು, ಕೇಂದ್ರ ಮಂತ್ರಿಗಳಿಗೆ ಅವರ ಖಾತೆಯಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿಲ್ಲ. ಚಹಾ ಕುಡಿಯಲು ಮಾತ್ರ ಕೇಂದ್ರ ಮಂತ್ರಿಗಳು ಹೋಗುತ್ತಾರೆ. ಮೋದಿಯವರ ಹಿಟ್ಲರ್ ಧೋರಣೆ ಸರಿ ಮಾಡಿ ನಮ್ಮ ಬಗ್ಗೆ ಮಾತಾಡಲಿ ಎಂದರು.
ಇದನ್ನೂ ಓದಿ:ಮಾಹಿತಿ ನೀಡಲು ನಿರ್ಲಕ್ಷ್ಯ: ನೆಲಮಂಗಲ ತಹಶೀಲ್ದಾರ್‌ಗೆ 10ಸಾವಿರ ರೂ. ದಂಡ
ಕಾಂಗ್ರೆಸ್ ಸ್ಕ್ಯಾಮ್ ಗಳ ಸರ್ಕಾರ ಎಂದ ಸಿ.ಟಿ.ರವಿಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ.ರವಿಗೆ ಏನು ಗೊತ್ತಿದೆ. ಸ್ಕ್ಯಾಮ್ ಗಳು ಬಿಜೆಪಿಯಲ್ಲಿದೆ, ಸ್ಕೀಮ್ ಗಳು ಕಾಂಗ್ರೆಸ್ ನಲ್ಲಿದೆ ಎಂದರು.
ಕೇಂದ್ರದ ವಿರುದ್ಧ ಪ್ರತಿಭಟಿಸಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಪಾಪ ಕುಮಾರಸ್ವಾಮಿಗೆ ಬಡವರ ಬಗ್ಗೆ ಗೊತ್ತಿಲ್ಲ. ಮಾತಾಡಬೇಕೆಂದು ಅವರೆಲ್ಲಾ ಮಾತಾಡುತ್ತಿದ್ದಾರೆ. ಅವರಿಗೆ ಈ ಎಲ್ಲಾ ಗ್ಯಾರಂಟಿಗಳಿಂದ ಏನಾಗುತ್ತೇನೋ ಎಂಬಂತಾಗಿದೆ. ಜನ ನಮ್ಮನ್ನು ಓಡಿಸುತ್ತಾರೇನೋ ಎಂಬ ಭೀತಿ ಅವರಲ್ಲಿ ಮೂಡಿದೆ ಎಂದು ಟೀಕಿಸಿದರು.
ಅಕ್ಕಿ ಕೊಡದ ಬಿಜೆಪಿಯನ್ನು ಜನ ಸುಮ್ಮನೆ ಬಿಡುವುದಿಲ್ಲ. ಅಮಿತ್ ಶಾ ಅವರನ್ನು ಸಿಎಂ ಸಿದ್ಧರಾಮಯ್ಯ ಭೇಟಿ ಆಗಿದ್ದಾರೆ. ಅಮಿತ್ ಶಾ ಭೇಟಿಯ ಫಲಿತಾಂಶ ಇನ್ನೂ ನಮಗೆ ಗೊತ್ತಾಗಿಲ್ಲ. ಕೇಂದ್ರ ಸರ್ಕಾರದ ನೀತಿಯಿಂದ ಅನ್ನಭಾಗ್ಯ ತಡವಾಗಿದೆ. ನಾವು ಸಮ್ಮನಿರಲ್ಲ, ಎಲ್ಲಿಂದಾದರೂ ಅಕ್ಕಿ ತಂದು ಕೊಡುತ್ತೇವೆ ಎಂದರು.
ಮದ್ಯ ದರ ಏರಿಕೆಯಿಲ್ಲ: ಸದ್ಯಕ್ಕೆ ಮದ್ಯದ ದರ ಏರಿಕೆ ಇಲ್ಲ, ಏರಿಕೆ ಮಾಡಿದರೆ ತಿಳಿಸುವೆ. ಸರ್ಕಾರಗಳು ಆರ್ಥಿಕತೆ ನಿಭಾಯಿಸುವ ಬಗ್ಗೆ ಚರ್ಚಿಸಿ ದರ ನಿಗದಿ ಕ್ರಮ. ಅಬಕಾರಿ ಇಲಾಖೆಯಲ್ಲಿ ಈವರೆಗೆ ಯಾವೊಂದು ವರ್ಗಾವಣೆ ಆಗಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.