ಚೀನೀ ವಂಚಕರಿಂದ ನಾಲ್ಕೇ ದಿನಗಳಲ್ಲಿ 2000 ಡೊಮೈನ್ ಖರೀದಿ!
Team Udayavani, Jun 23, 2023, 7:20 AM IST
ನವದೆಹಲಿ: ಚೀನಾದ ಆ್ಯಪ್ಗ್ಳನ್ನು, ವೆಬ್ಸೈಟ್ಗಳನ್ನು ಕೇಂದ್ರ ಸರ್ಕಾರ ವಿವಿಧ ರೂಪಗಳಲ್ಲಿ ನಿಷೇಧಿಸಿದೆ. ಹಾಗಂತ ಚೀನಾದವರ ಮೋಸಗಳೇನು ನಿಂತಿಲ್ಲ. ರಾಷ್ಟ್ರೀಯ ಸೈಬರ್ ಕ್ರೈಮ್ ಅಪಾಯಗಳ ವಿಶ್ಲೇಷಣಾ ಸಂಸ್ಥೆ ನೀಡಿದ ಮಾಹಿತಿ ದಿಗಿಲು ಹುಟ್ಟಿಸುವಂತಿದೆ.
ಮೇ ತಿಂಗಳ ನಾಲ್ಕೇ ದಿನಗಳಲ್ಲಿ 2000ಕ್ಕೂ ಅಧಿಕ ಡೊಮೈನ್ಗಳನ್ನು ಚೀನೀಯರು ಖರೀದಿ ಮಾಡಿದ್ದಾರೆ. ಡಾಟ್ ಇನ್ (.ಇನ್) ಮೂಲಕ ಖರೀದಿ ಮಾಡಲಾದ ಈ ಡೊಮೈನ್ಗಳಲ್ಲಿ ಅಶ್ಲೀಲ, ದುರುದ್ದೇಶವುಳ್ಳ ವಿಷಯಗಳೇ ಇವೆ. ಇವನ್ನೆಲ್ಲ ಭಾರತೀಯರ ಮಾಹಿತಿಗಳನ್ನು ಕದ್ದು, ವಂಚಿಸುವ ಉದ್ದೇಶದಿಂದಲೇ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.
ಡೊಮೈನ್ಸ್ಗಳನ್ನು ಖರೀದಿ ಮಾಡಿ, ಅದರ ಮೂಲಕ ಭಾರತೀಯರನ್ನು ಆಕರ್ಷಿಸಿ, ಅಲ್ಲಿಗೆ ಮಾಲ್ವೇರ್ಗಳನ್ನು ಹಾಕಿ, ಭಾರತೀಯರ ಮಾಹಿತಿಗಳನ್ನು ಕದಿಯುವುದು ಇಲ್ಲಿನ ಉದ್ದೇಶ. ಈ ವೆಬ್ಸೈಟ್ಗಳ ಹೋಸ್ಟಿಂಗ್ (ಸರ್ವರ್ ಸೇವಾ) ಭಾಷೆ ಚೀನಾದ ಮ್ಯಾಂಡರಿನ್ ಲಿಪಿಯಲ್ಲಿದೆ. ಆ್ಯಂಡ್ರಾಯ್ಡ, ಐಒಎಸ್ಗೆ ತಕ್ಕಂತೆ ಇವು ಬೇರೆ ಬೇರೆ ರೀತಿಯಲ್ಲಿ ವರ್ತಿಸುವುದು ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.