Malabar ಗೋಲ್ಡ್ ಆ್ಯಂಡ್ ಡೈಮಂಡ್ಸ್‌ಗೆ ಜೂ| ಎನ್‌ಟಿಆರ್ ರಾಯಭಾರಿ
Team Udayavani, Jun 23, 2023, 6:33 AM IST
ಬೆಂಗಳೂರು: ಹನ್ನೊಂದು ದೇಶಗಳಲ್ಲಿ 320ಕ್ಕಿಂತ ಹೆಚ್ಚಿನ ಶೋರೂಂಗಳೊಂದಿಗೆ ಜಾಗತಿಕವಾಗಿ 6ನೇ ಅತಿದೊಡ್ಡ ಆಭರಣ ರಿಟೇಲರ್ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ಗೆ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಜೂನಿಯರ್ ನಂದಮೂರಿ ತಾರಕ ರಾಮರಾವ್ ಅವರು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಮುಂದಿನ ಎಲ್ಲ ಗ್ರಾಹಕ ಪ್ರಚಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಮಧುರ ಹಾಗೂ ಸ್ಥಿರ ವ್ಯಕ್ತಿತ್ವದೊಂದಿಗೆ ಗ್ರೂಪ್‌ನ ಮೌಲ್ಯಗಳಾದ ವಿಶ್ವಾಸ, ಪಾರದರ್ಶಕತೆ ಹಾಗೂ ಉತ್ಕೃಷ್ಟತೆ ಪ್ರತಿಫಲಿಸಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಮಾತ್ರವಲ್ಲದೆ ದೇಶಾದ್ಯಂತ ಹಾಗೂ ಜಗತ್ತಿನೆಲ್ಲೆಡೆ ಪ್ರಬಲವಾದ ಗ್ರಾಹಕರ ಸಂಪರ್ಕ ನಿರ್ಮಾಣ ಮಾಡಬೇಕೆನ್ನುವ ಗ್ರೂಪ್‌ನ ಗುರಿಗೆ ಅನುಗುಣವಾಗಿದ್ದು, ಜಾಗತಿಕವಾಗಿ ನಂ.1 ಆಭರಣ ರಿಟೇಲರ್ ಆಗಬೇಕೆನ್ನುವ ಧ್ಯೇಯಕ್ಕೂ ಸಹಕಾರಿಯಾಗಲಿದೆ. ಜತೆಗೆ ತನ್ನ 30ನೇ ವಾರ್ಷಿಕೋತ್ಸವಕ್ಕೆ ಮತ್ತಷ್ಟು ಮೆರುಗು ತರಲಿದೆ ಎಂದು ಮಲಬಾರ್ ಗ್ರೂಪ್‌ನ ಚೇರ್ಮನ್ ಎಂ.ಪಿ. ಅಹಮ್ಮದ್ ಸಂತಸ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಜೂ| ಎನ್‌ಟಿಆರ್, ಮಲಬಾರ್ ಗೋಲ್ಡ್ – ಡೈಮಂಡ್ಸ್‌ನೊಂದಿಗೆ ಮತ್ತೂಮ್ಮೆ ಸಹಯೋಗ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇದು ಕೇವಲ ಅತ್ಯಂತ ವಿಶ್ವಸನೀಯ ಆಭರಣ ಬ್ರ್ಯಾಂಡ್‌ಗಳ ಪೈಕಿ ಒಂದಾಗಿರುವುದು ಮಾತ್ರವಲ್ಲದೆ, ಭಾರತೀಯ ವಿನ್ಯಾಸ, ಕಲೆ ಮತ್ತು ಸಂಸ್ಕೃತಿಯನ್ನು ಜಾಗತಿಕ ರಂಗದಲ್ಲಿ ಸಕ್ರಿಯವಾಗಿರಿಸುತ್ತಲೇ ಇರುವಂತಹ ಸಂಸ್ಥೆ. ಇವರ ಗ್ರಾಹಕ ಕೇಂದ್ರಿತ ಭರವಸೆಗಳು ಮತ್ತು ಇಎಸ್‌ಜಿ ಉಪಕ್ರಮಗಳು ಅವರನ್ನು ಉದ್ಯಮದಲ್ಲಿ ನಾಯಕತ್ವ ಸ್ಥಾನದಲ್ಲಿರಿಸಿದೆ. ನಾನು ನಂಬುವ ಹಾಗೂ ಬ್ರ್ಯಾಂಡ್ ಹೊಂದಿರುವ ಮೌಲ್ಯಗಳ ನಡುವೆ ಅಪಾರ ಸಾಮ್ಯತೆ ಇರುವುದು ಕಂಡುಬರುತ್ತಿದೆ ಎಂದು ತಿಳಿಸಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ http://www.malabargoldanddiamonds.com ಆನ್‌ಲೈನ್ ಮಳಿಗೆಯ ವ್ಯವಸ್ಥೆಯನ್ನೂ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.