ಟೈಟಾನಿಕ್‌ ಅವಶೇಷ ನೋಡಲು ಹೋದವರು ಜಲಸಮಾಧಿ?

ಜಲಾಂತರ್ಗಾಮಿಯಲ್ಲಿ ಆಮ್ಲಜನಕ ಮುಗಿದಿರುವ ಶಂಕೆ

Team Udayavani, Jun 23, 2023, 7:40 AM IST

SUBMARINE

ವಾಷಿಂಗ್ಟನ್‌: ಮುಳುಗಿರುವ ಟೈಟಾನಿಕ್‌ ನೋಡಲು ಹೋಗಿ, ಮುಳುಗಿ ಹೋದವರ ಕಥೆ ಇದು…! ಬರೋಬ್ಬರಿ ನೂರ ಹನ್ನೊಂದು ವರ್ಷಗಳ ಹಿಂದೆ (1912 ಏ.15) ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್‌ ಹಡಗಿನ ಅವಶೇಷಗಳ ವೀಕ್ಷಣೆಗೆಂದು ತೆರಳಿ ನಾಪತ್ತೆಯಾಗಿದ್ದ ಸಬ್‌ಮರ್ಸಿಬಲ್‌ (ಜಲಾಂತರ್ಗಾಮಿ) ಇನ್ನೂ ಪತ್ತೆಯಾಗಿಲ್ಲ. ಓಷನ್‌ಗೇಟ್‌ ಕಂಪನಿಯ ಮೂಲಗಳೇ ಹೇಳುವಂತೆ ಅದರಲ್ಲಿದ್ದ ಆಮ್ಲಜನಕ ಖಾಲಿಯಾಗಿದ್ದು, ಐವರೂ ಪ್ರವಾಸಿಗರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆಯಾಗಿದೆ.

ಇದೇ ವೇಳೆ, ಟೈಟಾನಿಕ್‌ ಹಡಗಿನ ಅವಶೇಷಗಳ ಸಮೀಪದಲ್ಲೇ ಗುರುವಾರ ರಾತ್ರಿ ನೌಕೆಯೊಂದರ ಅವಶೇಷವನ್ನು ರೊಬೊಟ್‌ವೊಂದು ಪತ್ತೆಹಚ್ಚಿದೆ. ಆದರೆ, ಇದು ಜಲಾಂತರ್ಗಾಮಿಯ ಅವಶೇಷವೇ ಎಂಬುದು ದೃಢಪಟ್ಟಿಲ್ಲ.

4 ದಿನಗಳ ಹಿಂದೆ ಸಾಹಸಯಾತ್ರೆಯ ಅಂಗವಾಗಿ ಫ್ರಾನ್ಸ್‌ನ ನಿವೃತ್ತ ನೌಕಾಪಡೆ ಅಧಿಕಾರಿ ಪೌಲ್‌ ಹೆನ್ರಿ ನಾರ್ಗೊಲೆಟ್‌, ಬ್ರಿಟನ್‌ನ ಸಿರಿವಂತ ಉದ್ಯಮಿ ಹಮೀಶ್‌ ಹಾರ್ಡಿಂಗ್‌, ಪಾಕ್‌ ಉದ್ಯಮಿ ಶೆಹಜಾದಾ ದಾವೂದ್‌ ಮತ್ತು ಅವರ ಪುತ್ರ ಸುಲೇ ಮಾನ್‌ ಮತ್ತು ಓಷನ್‌ಗೆàಟ್‌ ಕಂಪನಿಯ ಸಿಇಒ ಸ್ಟಾಕ್‌ಟನ್‌ ರಶ್‌ ಜಲಾಂತರ್ಗಾಮಿಯಲ್ಲಿ ತೆರಳಿದ್ದರು. ಅಂದೇ ನಾಪತ್ತೆಯಾಗಿದ್ದ ಈ ನೌಕೆಗಾಗಿ ಸತತ ಶೋಧ ಕಾರ್ಯ ನಡೆಯುತ್ತಲೇ ಇದೆ. ಇದುವರೆಗೂ ಈ ಜಲಾಂತರ್ಗಾಮಿ ಪತ್ತೆಯಾಗಿಲ್ಲ. ಅಲ್ಲದೆ, 92 ಗಂಟೆಗಳ ಕಾಲ ಆಗುವಷ್ಟಿದ್ದ ಆಮ್ಲಜನಕವೂ ಬುಧವಾರ ರಾತ್ರಿ 7.30ರ ವೇಳೆಗೆ ಮುಗಿದಿದೆ. ಹೀಗಾಗಿ ಅದರಲ್ಲಿರುವವರು ಸಾವನ್ನಪ್ಪಿರುವ ಸಾಧ್ಯತೆಗಳು ದಟ್ಟವಾಗಿವೆ ಎಂದೇ ಹೇಳಲಾಗುತ್ತಿದೆ.

ಮೂರು ದಿನಗಳಿಂದ ಆ ಸಬ್‌ಮರ್ಸಿಬಲ್‌ನಲ್ಲಿ ಇದ್ದವರು ಅನುಭವಿಸಿರಬಹುದಾದ ಕಣ್ಣೆದುರಿಗಿನ ಮರಣ ಆಹ್ವಾನದ ಭೀತಿಯನ್ನು ಊಹಿಸಿಯೇ ಜಗತ್ತು ಮರುಗುತ್ತಿದೆ.

ಹೇಗಿದೆ ಜಲಾಂತರ್ಗಾಮಿ?: 9 ಅಡಿ ಅಗಲ, 8 ಅಡಿ ಎತ್ತರವಿರುವ ಸಬ್‌ಮರ್ಸಿಬಲ್‌ನಲ್ಲಿ  ಪ್ರಯಾ­ಣಿಕರು ಓಡಾಡುವುದಿರಲಿ, ಆರಾಮವಾಗಿ ಕೂರುವುದಕ್ಕೂ ಜಾಗವಿಲ್ಲ. ಇದರ ಪ್ರಯಾಣ ವೆಚ್ಚ ಒಬ್ಬರಿಗೆ ಬರೋಬ್ಬರಿಗೆ 2 ಕೋಟಿ ರೂ.ಗಳು. ಸೀಟ್‌ಗಳು ಇಲ್ಲದೆ ಕಾಲು ಮಡಚಿಯೇ ಕೂರಬೇಕು. ಇಡೀ ಜಲಾಂತರ್ಗಾಮಿಗೆ ಒಂದೇ ಕಿಟಕಿಯಿದ್ದು, ಆ ಮೂಲಕವೇ ಟೈಟಾನಿಕ ಅವಶೇಷಗಳನ್ನು ನೋಡಲು ವ್ಯವಸ್ಥೆ ಮಾಡಲಾಗಿತ್ತು. ಇನ್ನು ಜಲಾಂತರ್ಗಾಮಿಯಲ್ಲಿ ಒಂದೇ ಒಂದು ಶೌಚಾಲಯವಿದೆ. ಊಟ, ನೀರು ಇಲ್ಲದೇ 3 ದಿನಗಳಿಂದ ಕಂಗೆಟ್ಟು, ಈಗ ಉಸಿರಾಟಕ್ಕೆ ಆಮ್ಲಜನಕವೂ ಸಿಗದೇ ಒದ್ದಾಡುವ ಪರಿಸ್ಥಿತಿಯನ್ನು ನೆನೆದೇ ಜಗತ್ತು ಕಣ್ಣೀರಾಗುತ್ತಿದೆ. ಆತಂಕದ ನಡುವೆಯೇ ನೌಕ್ತೆಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಟೈಟಾನಿಕ್‌ ದುರಂತದ ಕುಟುಂಬಸ್ಥನೇ ಪೈಲಟ್‌!

ಸ್ಟಾಕ್‌ಟನ್‌ ರಶ್‌ಎಂಬವರು ನಾಪತ್ತೆಯಾಗಿ­ರುವ ಜಲಾಂತರ್ಗಾಮಿಯ ಪೈಲಟ್‌.. ವಿಪರ್ಯಾಸವೆಂದರೆ ಟೈಟಾನಿಕ್‌ ಹಡಗಿನ ಅವಶೇಷಗಳನ್ನು ತೋರಿಸಲು ರಶ್‌ ಹೋಗಿದ್ದರೋ, ಅದೇ ಹಡಗಿನಲ್ಲಿ ಮುಳುಗಿ ಸತ್ತಂತ ಶ್ರೀಮಂತ ಕುಟುಂಬದವರೇ ರಶ್‌ ಪತ್ನಿ ವೆಂಡಿ ರಶ್‌.. ದುರಾದೃಷ್ಟವೆಂಬಂತೆ ಟೈಟಾನಿಕ್‌ ದುರಂತದಲ್ಲಿ ವೆಂಡಿ, ತಮ್ಮ ಪೂರ್ವಜರನ್ನ ಕಳೆದುಕೊಂಡಿದ್ದರು. ಈಗ ಅದರ ಅವಶೇಷಗಳನ್ನು ತೋರಿಸಲು ಹೋಗಿದ್ದ ಅವರ ಪತಿಯೂ ಅಪಾಯದಲ್ಲಿ ಸಿಲುಕುವಂತಾಗಿದೆ.

 

ಟಾಪ್ ನ್ಯೂಸ್

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

iran

Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.