ನಾಗನ ಹೊಟ್ಟೆಯಲ್ಲಿ ಸುಣ್ಣದ ಡಬ್ಬ!
ಗಾಯಗೊಂಡ ಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
Team Udayavani, Jun 23, 2023, 7:49 AM IST
ಬಂಟ್ವಾಳ: ವಗ್ಗ ಸಮೀಪದ ಅಲಂಪುರಿ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪ ಪತ್ತೆಯಾಗಿದ್ದ ಗಾಯಗೊಂಡ ನಾಗರ ಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಸಂಪೂರ್ಣ ಚೇತರಿಸಿಕೊಂಡ ಬಳಿಕ ಕಾಡಿಗೆ ಬಿಡಲಾಗಿದೆ.
ಅಲಂಪುರಿಯ ವಸಂತಿ ಅವರು ಮನೆ ಸಮೀಪದ ಬಿಲದಲ್ಲಿ ಜೂ. 6ರಂದು ಹಾವೊಂದು ಹೊರಗೆ ಬರಲಾಗದೆ ಒದ್ದಾಡುತ್ತಿರುವುದನ್ನು ಗಮನಿಸಿದ್ದು, ತತ್ಕ್ಷಣ ಉರಗ ಪ್ರೇಮಿ ಸ್ನೇಕ್ ಕಿರಣ್ಗೆ ತಿಳಿಸಿದರು. ಅವರು ಹಾವನ್ನು ಬಿಲದಿಂದ ಹೊರಗೆ ತೆಗೆದು ಪರಿಶೀಲಿಸಿದಾಗ ಹೊಟ್ಟೆ ಹಾಗೂ ಕುತ್ತಿಗೆಯಲ್ಲಿ ಗಾಯ ಕಾಣಿಸಿತು. ಹಾವನ್ನು ಮಂಗಳೂರಿಗೆ ಕೊಂಡು ಹೋಗಿ ಪಶುವೈದ್ಯ ಡಾ| ಯಶಸ್ವಿ ನಾರಾವಿ ಅವರಿಗೆ ತೋರಿಸಿದರು. ವೈದ್ಯರು ಮೊದಲು ಹರಿದ ಚರ್ಮಕ್ಕೆ ಹೊಲಿಗೆ ಹಾಕಿದರಾದರೂ ಹಾವಿನ ಹೊಟ್ಟೆಯಲ್ಲಿ ಏನೋ ಇದೆ ಎಂದು ಸಂಶಯಗೊಂಡು ಶಸ್ತ್ರಚಿಕಿತ್ಸೆ ನಡೆಸಿದರು. ಸುಣ್ಣ ತುಂಬುವ ಪ್ಲಾಸ್ಟಿಕ್ ಡಬ್ಬವೊಂದು ಪತ್ತೆಯಾಗಿದ್ದು, ಯಶಸ್ವಿಯಾಗಿ ಹೊರಗೆ ತೆಗೆದರು.
15 ದಿನ ಆಸ್ಪತ್ರೆಯಲ್ಲಿ, ಮೂರು ದಿನ ಮನೆಯಲ್ಲಿ
ವೈದ್ಯರು ಹಾವನ್ನು 15 ದಿನಗಳ ಕಾಲ ತಮ್ಮಲ್ಲೇ ಇರಿಸಿಕೊಂಡು ಪರಿಶೀಲನೆಯ ಬಳಿಕ ಮರಳಿಸಿದರು. ಸ್ನೇಕ್ ಕಿರಣ್ ಮತ್ತೆ 3 ದಿನ ಮನೆಯಲ್ಲಿರಿಸಿಕೊಂಡು ಬಳಿಕ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಹಾಗೂ ರಕ್ಷಕ ಮನೋಜ್ ಅವರ ನೆರವಿನಿಂದ ರಕ್ಷಿತಾರಣ್ಯಕ್ಕೆ ಬಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್.ರಾಜಣ್ಣ
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.