![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 23, 2023, 6:59 AM IST
ಮಂಗಳೂರು: ಕರಾವಳಿಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಬೇಕಾಗಿದ್ದ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಕರ್ನಾಟಕ ಯೋಜನೆಯಡಿ ಹೊಸ ಕಾರ್ಡ್ ನೋಂದಣಿ ಶೇ. 50ರಷ್ಟೂ ಪ್ರಗತಿ ಕಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 29.7 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 39.7ರಷ್ಟು ಮಾತ್ರ ನೋಂದಣಿಯಾಗಿದೆ.
ಈ ಹಿಂದೆ ಆಯುಷ್ಮಾನ್ ಭಾರತ್ ಕಾರ್ಡನ್ನು ರಾಜ್ಯ ಸರಕಾರ ವಿತರಣೆ ಮಾಡುತ್ತಿತ್ತು. ಆದರೆ ಸೆಪ್ಟಂಬರ್‌ನಲ್ಲಿ ಇವು ಅಮಾನ್ಯಗೊಂಡಿದ್ದು, ಕೇಂದ್ರ ಸರಕಾರ ಹೊಸದಾಗಿ ವಿತರಿಸಲು ಮುಂದಾಗಿದೆ. ಅದರಂತೆ ದ.ಕ. ಜಿಲ್ಲೆಯಲ್ಲಿ 8 ತಿಂಗಳು ಗಳಿನಿಂದ ನೋಂದಣಿ ನಡೆಯುತ್ತಿದೆ. ಕೇಂದ್ರದಿಂದ ನೀಡಿದ ಗುರಿಯಂತೆ ಡಿಸೆಂಬರ್ ಅಂತ್ಯಕ್ಕೆ ಉಭಯ ಜಿಲ್ಲೆಗಳಲ್ಲಿ ಗುರಿ ಮುಟ್ಟಬೇಕಿತ್ತು.
ಆದರೆ ಸರ್ವರ್ ಸಮಸ್ಯೆ, ಸಾರ್ವ ಜನಿಕರ ಸಹಭಾಗಿತ್ವದ ಕೊರತೆಯಿಂದ ಎರಡೂ ಜಿಲ್ಲೆಗಳು ಹಿಂದೆ ಬಿದ್ದಿವೆ.
ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ 3 ತಿಂಗಳು ನೋಂದಣಿ ಸ್ಥಗಿತಗೊಂಡಿತ್ತು. ಈಗ ಎಲ್ಲ ಗ್ರಾಮ ಒನ್ ಕೇಂದ್ರಗಳಲ್ಲಿ ಮತ್ತು ಅಲ್ಲಲ್ಲಿ ಕ್ಯಾಂಪ್ ಆಯೋಜಿಸಿ ನೋಂದಣಿ ಮಾಡಲಾಗುತ್ತಿದೆ. ಧರ್ಮಸ್ಥಳ ಸಂಘದಿಂದಲೂ ನೋಂದಣಿ ಪ್ರಕ್ರಿಯೆ ಸಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಆಶಾ ಕಾರ್ಯಕರ್ತೆಯರ ಮೂಲಕವೂ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ದ.ಕ., ಉಡುಪಿ ಜಿಲ್ಲೆಗಳಲ್ಲಿ 30 ಲಕ್ಷ ನೋಂದಣಿ ಗುರಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೆಪ್ಟಂಬರ್‌ನಲ್ಲೇ ಹೊಸ ಕಾರ್ಡ್ ನೋಂದಣಿ ಆರಂಭಗೊಂ ಡಿತ್ತು. ರಾಜ್ಯ ಸರಕಾರ ನೀಡಿರುವ ಗುರಿಯಂತೆ ದ.ಕ. ಜಿಲ್ಲೆಗೆ 10,99,064 ಬಿಪಿಎಲ್ ಮತ್ತು 6,41,175 ಎಪಿಎಲ್ ಕಾರ್ಡ್
ದಾರರು ಸೇರಿದಂತೆ ಒಟ್ಟು 17,40,239 ಗುರಿ ನೀಡಲಾಗಿದೆ. ಉಡುಪಿ ಜಿಲ್ಲೆಗೆ 7,94,264 ಬಿಪಿಎಲ್ ಕಾರ್ಡ್ ಮತ್ತು 4,72,174 ಎಪಿಎಲ್ ಕಾರ್ಡ್ ಸೇರಿದಂತೆ ಒಟ್ಟು 12,66,438 ಗುರಿ ಇದೆ.
ಚುನಾವಣೆ ನೀತಿ
ಸಂಹಿತೆ ಹಿನ್ನೆಲೆಯಲ್ಲಿ ಆಯುಷ್ಮಾನ್ ಹೊಸ ಕಾರ್ಡ್ ನೋಂದಣಿ ಸ್ಥಗಿತಗೊಂಡಿತ್ತು. ಪ್ರಸ್ತುತ ಪ್ರಗತಿಯಲ್ಲಿದ್ದು, ವೇಗ ನೀಡಲಾಗಿದೆ. ಗ್ರಾಮ ಒನ್, ಧರ್ಮಸ್ಥಳ ಸಂಘಗಳ ಮೂಲಕ ನೋಂದಣಿ ನಡೆಯುತ್ತಿದೆ. ಸಾರ್ವಜನಿಕರಿಗೆ ಅರಿವು ಮೂಡಿ ಸುವ ಕಾರ್ಯವೂ ಸಾಗುತ್ತಿದೆ.
-ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
17 ಲಕ್ಷ ಕಾರ್ಡ್ ಅಮಾನ್ಯ
ದೇಶದ ಎಲ್ಲ ರಾಜ್ಯಗಳಿಗೂ ಒಂದೇ ರೀತಿಯ ಕಾರ್ಡ್ ಎಂಬಂತೆ ಹೊಸ ಕಾರ್ಡ್ ನೋಂದಣಿಗೆ ಕೇಂದ್ರ ಸೂಚನೆ ನೀಡಿರುವುದರಿಂದ ರಾಜ್ಯ ಸರಕಾರ ಈ ಹಿಂದೆ ನೀಡಿದ್ದ ಕಾರ್ಡ್‌ಗಳೆಲ್ಲ ರದ್ದಾಗಿವೆ. ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ 8.88 ಲಕ್ಷ ಮತ್ತು ದ.ಕ. ಜಿಲ್ಲೆಯಲ್ಲಿ 8.98 ಲಕ್ಷ ಒಳಗೊಂಡಂತೆ ಸುಮಾರು 17 ಲಕ್ಷ ಕಾರ್ಡ್‌ಗಳು ಸೇರಿವೆ. ಸದ್ಯ ಹಳೆ ಕಾರ್ಡ್‌ದಾರರಿಗೆ ಈ ಹಿಂದಿನಂತೆಯೇ ಆರೋಗ್ಯ ಸೇವೆ ಸಿಗುತ್ತಿದೆ. ಮುಂದೆ ಹೊಸ ಕಾರ್ಡ್ ಮೂಲಕವೇ ಈ ಸೌಲಭ್ಯ ಪಡೆಯಬೇಕಿದೆ.
~ ನವೀನ್ ಭಟ್ ಇಳಂತಿಲ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.