ಅಕ್ಕಿ ಕೊಡುವುದು ಒಂದೆರಡು ತಿಂಗಳು ತಡವಾದರೆ ಆಂತದೇನ್ ಆಗಲ್ಲ: ಸತೀಶ್ ಜಾರಕಿಹೊಳಿ
Team Udayavani, Jun 23, 2023, 2:48 PM IST
ಮೈಸೂರು: ಅಕ್ಕಿ ಕೊರತೆಯನ್ನು ಸರಿದೂಗಿಸುವ ಬೇರೆ ಬೇರೆ ಆಹಾರ ಪದಾರ್ಥಗಳು ಇರುವುದಾಗಿ ಆಹಾರ ಸಚಿವರು ಹೇಳಿದ್ದಾರೆ. ಬೇರೆ ಬೇರೆ ಆಹಾರ ಪದಾರ್ಥ ಕೊಡಬಹುದು. ಒಂದು ತಿಂಗಳು, ಎರಡು ತಿಂಗಳು ತಡವಾದರೆ ಅಂತಹದ್ದೇನು ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ನಮಗೆ ಪರ್ಯಾಯ ಮಾರ್ಗಗಳು ಇವೆ. 5 ಕೆಜಿ ಈಗಾಗಲೇ ಕೊಡುತ್ತಿದ್ದೇವೆ. ಲೇಟಾದರೆ ಅಂತದೇನ್ ಸಮಸ್ಯೆ ಆಗಲ್ಲ ಎಂದರು.
ಗ್ಯಾರಂಟಿ ಯೋಜನೆಗಳು ಹಂತ ಹಂತವಾಗಿ ಜಾರಿಯಾಗುತ್ತಿವೆ. ಈಗಾಗಲೇ ವಿದ್ಯುತ್, ಶಕ್ತಿ ಯೋಜನೆ ಜಾರಿಗೆ ಬಂದಿದೆ, ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 15 ರವರೆಗೆ ಸಮಯ ಇದೆ. ಮೂರು ಪ್ರಮುಖ ಗ್ಯಾರಂಟಿಗಳು ಜಾರಿಯಾಗಿವೆ, ಆತಂಕ ಇಲ್ಲ ಎಂದರು.
ಇದನ್ನೂ ಓದಿ:Bommai ಬೆಂಗಳೂರಿಗೆ ಉತ್ತಮ ಯೋಜನೆ ಹಾಕಿಕೊಂಡಿದ್ದರು,ಆದರೆ …;ಡಿ.ಕೆ.ಶಿವಕುಮಾರ್
ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಅಪಘಾತವಾಗಿದೆ. ಸಾವು ನೋವು ಸಂಭವಿಸಿರುವುದು ದಾಖಲಾಗಿದೆ. ಹೆದ್ದಾರಿ ನಿರ್ಮಾಣದಲ್ಲಿ ತಾಂತ್ರಿಕ ದೋಷ ಆಗಿರಬಹುದು. ಇದು ನಮ್ಮ ಇಲಾಖೆಯ ಗಮನಕ್ಕೆ ಬಂದಿದೆ. ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಅವರ ಜೊತೆ ಸೇರಿಕೊಂಡು ಸರಿಪಡಿಸುತ್ತೇವೆ. ಟೋಲ್ ದರ ಕೂಡ ಜಾಸ್ತಿ ಇದೆ. ನಾವು ಎಲ್ಲವನ್ನೂ ಸರಿ ಮಾಡಲು ಬರುವುದಿಲ್ಲ. ಆದರೆ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶನ
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.