ಸಕಲೇಶಪುರದಲ್ಲಿ ಪತ್ತೆಯಾದ ಯುವಕ ಅಪಘಾತದಿಂದಲೇ ಸಾವು
ಹಲವು ಸಂಶಯಗಳು ಇನ್ನೂ ಜೀವಂತ!
Team Udayavani, Jun 24, 2023, 6:12 AM IST
ಕಡಬ: ಇಲ್ಲಿನ ಕೋಡಿಂಬಾಳ ಗ್ರಾಮದ ವಿದ್ಯಾನಗರ ನಿವಾಸಿ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್ ಅವರ ಮೃತದೇಹವು ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪುಹೊಳೆ ಬಳಿ ಜೂ. 22 ರಂದು ಬೈಕ್ ಅಪಘಾತದಲ್ಲಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಅನುಮಾನಗಳಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪೊಲೀಸ್ ಮೂಲಗಳು ಅಪಘಾತದಿಂದಾಗಿಯೇ ನಾಗಪ್ರಸಾದ್ ಅವರ ಸಾವು ಸಂಭವಿಸಿದೆ ಎಂದು ಸ್ಪಷ್ಟಪಡಿಸಿವೆ.
ಜೂ. 22ರಂದು ಮರ್ದಾಳದಲ್ಲಿ ತನ್ನ ಮಾಲಕತ್ವದ ಚಿನ್ನದಂಗಡಿಯ ಉದ್ಘಾಟನೆಯ ಸಿದ್ಧತೆಯಲ್ಲಿದ್ದ ನಾಗಪ್ರಸಾದ್ ಅದೇ ದಿನ ಮುಂಜಾನೆ ಕೆಂಪುಹೊಳೆ ಬಳಿ ಶವವಾಗಿ ಪತ್ತೆಯಾಗಿದ್ದರು. ಘಟನೆಯ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಊಹಾಪೋಹಗಳು ಕೇಳಿಬಂದಿದ್ದವು. ಜಖಂಗೊಂಡಿರುವ ಬೈಕ್ ಹಾಗೂ ಮೃತದೇಹ ಪತ್ತೆಯಾಗಿರುವ ಜಾಗದಲ್ಲಿನ ರಸ್ತೆಯ ಪಕ್ಕದ ಕಾಂಕ್ರೀಟ್ ಕಟ್ಟೆಗೆ ಬೈಕ್ ಢಿಕ್ಕಿ ಹೊಡೆದು ಬಳಿಕ ಚರಂಡಿಗೆ ಉರುಳಿ ಬಿದ್ದ ರೀತಿಯಲ್ಲಿ ಕುರುಹುಗಳು ಕಂಡುಬಂದಿರುವುದು ಮತ್ತು ಮರಣೋತ್ತರ ಪರೀಕ್ಷೆಯ ವರದಿಯಲ್ಲಿಯೂ ಅಪಘಾತದಿಂದಾಗಿಯೇ ಮರಣ ಸಂಭವಿಸಿದೆ ಎಂದು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಅಪಘಾತದಿಂದಾಗಿಯೇ ನಾಗಪ್ರಸಾದ್ ಅವರ ಸಾವು ಸಂಭವಿಸಿದೆ ಎಂದು ಖಚಿತಗೊಂಡಿದೆ.
ಯಾವುದೋ ವಾಹನವನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಂಗಡಿ ಉದ್ಘಾಟನೆಯ ಆಮಂತ್ರಣ ವಿತರಿಸುವ ಸಲುವಾಗಿ ಹಿಂದಿನ ದಿನ (ಜೂ. 21) ಬೆಳಗ್ಗೆ 2 ಹೆಲ್ಮೆಟ್‌ಗಳ ಜತೆ ಒಬ್ಬರೇ ತನ್ನ ಬೈಕ್‌ನಲ್ಲಿ ಹೋಗಿರುವುದು ಸ್ಪಷ್ಟವಾಗಿದೆ. ಅಪಘಾತದ ಸ್ಥಳದಲ್ಲಿಯೂ 2 ಹೆಲ್ಮೆಟ್‌ಗಳು ಪತ್ತೆಯಾಗಿತ್ತು.
ಹಲವು ಸಂಶಯಗಳು ಇನ್ನೂ ಜೀವಂತ!
ಆಮಂತ್ರಣ ನೀಡಲು ಇಚ್ಲಂಪಾಡಿಗೆ ತೆರಳಿದ್ದ ನಾಗಪ್ರಸಾದ್ ಅಲ್ಲಿಂದ ಬೆಳ್ತಂಗಡಿಗೆ ಹೋಗಲಿರುವುದಾಗಿ ಹೇಳಿ ಸಕಲೇಶಪುರದತ್ತ ಹೋಗಿರುವುದು ಯಾಕೆ ಎನ್ನುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹಾಗೆಯೇ 2 ಹೆಲ್ಮೆಟ್ ಕೊಂಡೊಯ್ದಿದ್ದೇಕೆ? ಅವರ ಮೊಬೈಲ್ ಫೋನ್ ಅಪಘಾತ ಸ್ಥಳದಿಂದ ನಾಪತ್ತೆಯಾಗಿದ್ಹೇಗೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಮೊಬೈಲ್ ಫೋನ್‌ನ ಕಾಲ್‌ಲಿಸ್ಟ್ ಮಾಹಿತಿ ಲಭಿಸಿದ ಮೇಲಷ್ಟೇ ಪ್ರಕರಣಕ್ಕೆ ಸಂಬಂಧಿಸಿದ ಸಂಶಯಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.