UP: ನವ ದಂಪತಿ ಸೇರಿ ಕುಟುಂಬದ ಐವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
Team Udayavani, Jun 24, 2023, 10:26 AM IST
ಲಕ್ನೋ: ವ್ಯಕ್ತಿಯೊಬ್ಬ ಐವರನ್ನು ಕೊಂದು ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ನಡೆದಿರುವುದಾಗಿ ಶನಿವಾರ ಬೆಳಗ್ಗೆ (ಜೂ.24 ರಂದು) ಪೊಲೀಸರು ಹೇಳಿದ್ದಾರೆ.
ಆರೋಪಿ ಶಿವವೀರ್ ಯಾದವ್ (28) ಎಂಬಾತ ತನ್ನ ಇಬ್ಬರು ಸಹೋದರರು, ಅತ್ತಿಗೆ, ಸೋದರ ಮಾವ ಮತ್ತು ಸ್ನೇಹಿತನನ್ನು ಕೊಂದಿದ್ದಾನೆ. ಬಳಿಕ ತಾನೂ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೈನ್ಪುರಿ ಜಿಲ್ಲೆಯ ಕಿಶ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಿವವೀರ್ ನೋಯ್ಡಾದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಿರಿಯ ಸಹೋದರ ಸೋನು ಅವರ ಮದುವೆಗಾಗಿ ಮನೆಗೆ ಬಂದಿದ್ದರು.
ಶುಕ್ರವಾರ ರಾತ್ರಿ ಶಿವವೀರ್ ಯಾದವ್ ಕಿರಿಯ ಸಹೋದರರಾದ ಭುಲ್ಲನ್ (25), ಸೋನು (21), ಸೋನು ಅವರ ಪತ್ನಿ ಸೋನಿ (20), ಸೋದರ ಮಾವ ಸೌರಭ್ (23) ಮತ್ತು ಸ್ನೇಹಿತ ದೀಪಕ್ (20) ಅವರನ್ನು ಹತ್ಯೆಗೈದಿದ್ದಾನೆ. ಈ ವೇಳೆ ಶಿವವೀರ್ ಯಾದವ್ ತನ್ನ ಪತ್ನಿ ಡಾಲಿ (24) ಮತ್ತು ಸಂಬಂಧಿ ಸುಷ್ಮಾ (35) ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಬಳಿಕ ತಾನು ಬಂದೂಕಿನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಡಾಲಿ ,ಸುಷ್ಮಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣವೇನು ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇಟಾವಾದಲ್ಲಿ ಶಿವವೀರ್ ಯಾದವ್ ಅವರ ಕಿರಿಯ ಸಹೋದರ ತನ್ನ ಮದುವೆಯ ನಂತರ ಮನೆಗೆ ಹಿಂದಿರುಗಿದ ದಿನವೇ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.