ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್
Team Udayavani, Jun 24, 2023, 2:09 PM IST
ವಾಷಿಂಗ್ಟನ್: ಪ್ರಧಾನಮಂತ್ರಿಯವರ ಅಮೇರಿಕ ಪ್ರವಾಸದ ಸಮಾರೋಪ ಸಮಾರಂಭದಲ್ಲಿ ಭಾರತದ ರಾಷ್ಟ್ರಗೀತೆ ‘ಜನಗಣ ಮನ’ವನ್ನು ಹಾಡಿದ ಅಮೇರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು.
38 ವರ್ಷದ ಶ್ರೀಮತಿ ಮಿಲ್ಬೆನ್ ಅವರು ವಾಷಿಂಗ್ಟನ್ ಡಿಸಿ ಯ ರೊನಾಲ್ಡ್ ರೀಗನ್ ಬಿಲ್ಡಿಂಗ್ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಡಿಯನ್ ಕಮ್ಯುನಿಟಿ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಹಾಡಿದರು.
ಆಫ್ರಿಕನ್ – ಅಮೇರಿಕನ್ ಹಾಲಿವುಡ್ ನಟಿ ಮತ್ತು ಗಾಯಕಿ, ಮೇರಿ ಮಿಲ್ಬೆನ್ ಅವರು ರಾಷ್ಟ್ರೀಯ ಗೀತೆ ಜನಗಣ ಮನ ಮತ್ತು ಓಂ ಜೈ ಜಗದೀಶ್ ಹರೇ… ಹಾಡುವುದಕ್ಕಾಗಿ ಭಾರತದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ.
ಪ್ರಧಾನಿ ಮೋದಿ ಅವರಿಗಾಗಿ ಭಾರತದ ರಾಷ್ಟ್ರಗೀತೆಯನ್ನು ನಾನು ಹಾಡಿರುವುದಕ್ಕೆ ನನಗೆ ಗೌರವವಿದೆ… “ಅಮೆರಿಕನ್ ಮತ್ತು ಭಾರತೀಯ ಗೀತೆಗಳು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಆದರ್ಶಗಳನ್ನು ಹೇಳುತ್ತವೆ ಮತ್ತು ಇದು ಯುಎಸ್-ಭಾರತದ ಸಂಬಂಧದ ನಿಜವಾದ ಸಾರವಾಗಿದೆ. ಸ್ವತಂತ್ರ ರಾಷ್ಟ್ರವನ್ನು ಸ್ವತಂತ್ರ ಜನರಿಂದ ಮಾತ್ರ ವ್ಯಾಖ್ಯಾನಿಸಲಾಗುತ್ತದೆ” ಎಂದು ಅವರು ಹೇಳಿದರು.
American Singer @MaryMillben after singing India’s National Anthem is seen touching Prime Minister @narendramodi’s feet in respect as per Indian traditions amid chants of Bharat Mata Ki Jai (Long Live Mother India). 🇮🇳 pic.twitter.com/fHmStUbCdz
— Aditya Raj Kaul (@AdityaRajKaul) June 24, 2023
VIDEO | “To sing the Indian National Anthem in the presence of the Prime Minister was a great honour,” says Mary Millben, who performed the Indian National Anthem at the Ronald Reagan Centre, Washington ahead of PM Modi’s address.#PMModiUSVisit pic.twitter.com/FzecYpzNZc
— Press Trust of India (@PTI_News) June 24, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.