ಶರಣಾದ ನಕ್ಸಲರಿಗೆ ಸಿನಿಮಾ ನಟನೆಯ ಅವಕಾಶ: ತರಬೇತಿ ನೀಡಿದ ಖ್ಯಾತ ನಟಿ
Team Udayavani, Jun 25, 2023, 10:56 AM IST
ಮಹಾರಾಷ್ಟ್ರ: ನಕ್ಸಲ್ ಚಟುವಟಿಕೆಯಿಂದ ಹೊರಬಂದು ಪೊಲೀಸರಿಗೆ ಶರಣಾದವರು ಸಿನಿಮಾವೊಂದರ ಪಾತ್ರಗಳಿಗಾಗಿ ಆಡಿಷನ್ ನೀಡಿದ್ದಾರೆ.
ರಾಜ್ಯ ಪೊಲೀಸರ ನೇತೃತ್ವದಲ್ಲಿ ಮರಾಠಿ ನಟಿ ತೃಪ್ತಿ ಭೋರ್ ಮತ್ತು ಚಲನಚಿತ್ರ ನಿರ್ಮಾಪಕ ವಿಶಾಲ್ ಕಪೂರ್ ಅವರು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಸಿನಿಮಾದ ಆಡಿಷನ್ ನ್ನು ನಡೆಸಿದ್ದಾರೆ.
ಮರಾಠಿ ನಟಿ ತೃಪ್ತಿ ಭೋರ್ ಮತ್ತು ಚಲನಚಿತ್ರ ನಿರ್ಮಾಪಕ ವಿಶಾಲ್ ಕಪೂರ್ ಗಡ್ಚಿರೋಲಿಯ ಬುಡಕಟ್ಟು ಜನಾಂಗದ ಸಂಪ್ರದಾಯವನ್ನು ಆಧರಿಸಿದ ಚಲನಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಬುಡಕಟ್ಟು ಪ್ರಾಬಲ್ಯದ ಜಿಲ್ಲೆಯಾದ ಗಡ್ಚಿರೋಲಿಯು ಪುರಾತನವಾದ ಸಂಪ್ರದಾಯವೊಂದಿದೆ. ಮುಟ್ಟಿನ ವೇಳೆ ಮಹಿಳೆ ತನ್ನ ಮನೆಯ ಹೊರಗೆ ನಿರ್ಮಿಸಲಾದ ʼಕೂರ್ಮಘರ್ʼ ಎಂದು ಕರೆಯಲ್ಪಡುವ ಗುಡಿಸಲಿನಲ್ಲಿ ಉಳಿಯಬೇಕು. ಇದೇ ಸಂಪ್ರದಾಯವನ್ನು ಅನುಸರಿಸಿ ಸಿನಿಮಾ ತೆರೆಗೆ ಬರುತ್ತಿದೆ.
ಗಡ್ಚಿರೋಲಿ ಪೊಲೀಸ್ ಹೆಡ್ ಕ್ವಾರ್ಟರ್ಸ್ ಬಳಿಯ ನವಜೀವನ್ ಕಾಲೋನಿಯಲ್ಲ ನಡೆದ ಆಡಿಷನ್‌ನಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಹಾಜರಿದ್ದವರಿಗೆ ತೃಪ್ತಿ ಭೋರ್ ಮತ್ತು ವಿಶಾಲ್ ಕಪೂರ್ ಅವರಿಂದ ವಾಯ್ಸ್ ಮಾಡ್ಯುಲೇಶನ್ ಮತ್ತು ನಟನೆಯ ತರಬೇತಿಯನ್ನು ನೀಡಲಾಗಿದೆ.
“ಶರಣಾಗತರಾದ ನಕ್ಸಲರು ಭವಿಷ್ಯದಲ್ಲಿ ಚಲನಚಿತ್ರಗಳಲ್ಲಿ ನಟಿಸಲು ಮತ್ತು ನಟನೆಯಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ಅವಕಾಶವನ್ನು ಪಡೆದುಕೊಳ್ಳುಬೇಕೆನ್ನುವ ಆಶಯದೊಂದಿಗೆ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಅವರು ಹೊಸ ಗುರುತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ”. ಎಂದು ಗಡ್ಚಿರೋಲಿ ಪೊಲೀಸ್ ಅಧೀಕ್ಷಕ ನೀಲೋತ್ಪಾಲ್ ಹೇಳಿದರು.
ತೃಪ್ತಿ ಭೋರ್ ಮತ್ತು ವಿಶಾಲ್ ಕಪೂರ್ ಅವರು ʼಅಗ್ದ್ಬಾಮ್ʼ, ʼತುಜ್ಯಾ ಮಾಜ್ಯಾ ಸಂಸಾರಲಾʼ, ʼಕಯೆ ಹ್ಯಾವ್ʼ ಮತ್ತು ʼಟೂರಿಂಗ್ ಟಾಕೀಸ್ʼನಂತಹ ಮರಾಠಿ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.