ಟರ್ಕಿ, ಅರೇಬಿಕ್, ಪಾಕಿಸ್ತಾನದ ಉಪಕರಣಗಳೊಂದಿಗೆ ‘ಬ್ಲಿಂಕ್’ ರೇ-ರೆಕಾರ್ಡಿಂಗ್
Team Udayavani, Jun 25, 2023, 6:37 PM IST
ಜನನಿ ಪಿಕ್ಚರ್ಸ್ ಅಡಿಯಲ್ಲಿ ರವಿಚಂದ್ರ ಎ.ಜೆ ನಿರ್ಮಾಣದಲ್ಲಿ ತಯಾರಾಗುತ್ತಿರುವ ಬ್ಲಿಂಕ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಆರ್ಕೆಸ್ಟ್ರಾ ಸೆಷನ್ ಭಾಗದ ರೀ-ರೆಕಾರ್ಡಿಂಗ್ ಕೊಚ್ಚಿ ಸ್ಟುಡಿಯೋದಲ್ಲಿ ಪೂರ್ಣಗೊಂಡಿದೆ.
ಟರ್ಕಿ, ಅರೇಬಿಕ್, ಪಾಕಿಸ್ತಾನದ ರಬಾಬ್ ಸಂಗೀತ ಉಪಕರಣಗಳನ್ನು ಬಳಸಿ ರೀ-ರೆಕಾರ್ಡಿಂಗ್ ಮಾಡಿರೋದು ವಿಶೇಷ. ನೋಡುಗರಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ಬ್ಲಿಂಕ್ ಸಿನಿಮಾ ಬಳಗ ಕಂಸಾಳೆ, ಜನಪದ ಗೀತೆ ಕಂಪನ್ನು ಸಿನಿಮಾದಲ್ಲಿ ಅಳವಡಿಸಿದೆ. ಇದು ಪ್ರೇಕ್ಷಕರಿಗೆ ಹೊಸ ಫ್ಲೇವರ್ ಕೊಡಲಿದೆ ಅನ್ನೋದು ಚಿತ್ರತಂಡ ಮಾತು.
ಶ್ರೀನಿಧಿ ಬೆಂಗಳೂರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ಬ್ಲಿಂಕ್. ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಹೇಗೆ ಆವನ ಸುತ್ತ- ಮುತ್ತಲಿನ ವಾತಾವರಣ ಬದಲಿಸುತ್ತದೆ ಎಂಬುದು ಈ ಕಥೆಯ ಸಾರಾಂಶ.
ಸೈ-ಫೈ ಶೈಲಿಯಲ್ಲಿ ಮೂಡಿಬರುತ್ತಿರುವ ಬ್ಲಿಂಕ್ ಚಿತ್ರಕ್ಕೆ ನಾಯಕ ನಟರಾಗಿ ದಿಯಾ ಹಾಗೂ ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ನಾಯಕಿಯಾರಾಗಿ ಮಂದಾರ ಬಟ್ಟಲಹಳ್ಳಿ ಹಾಗೂ ಚೈತ್ರ ಜೆ ಆಚಾರ್ ನಟಿಸುತ್ತಿದ್ದು ಮುಖ್ಯಪಾತ್ರಗಳಲ್ಲಿ ವಜ್ರಧೀರ್ ಜೈನ್ , ಗೋಪಾಲಕೃಷ್ಣ ದೇಶಪಾಂಡೆ, ಸುರೇಶ್ ಅನಗಳ್ಳಿ ಕಾಣಿಸಿಕೊಂಡಿದ್ದಾರೆ.
ಅವಿನಾಶ್ ಶಾಸ್ತ್ರೀ ಛಾಯಾಗ್ರಹಣ, ಪ್ರಸನ್ನ ಕುರ್ಮಾ ಸಂಗೀತ, ಸಂಜೀವ್ ಜಗೀದಾರì ಸಂಕಲನ ಚಿತ್ರಕ್ಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಬ್ಲಿಂಕ್ ಸಿನಿಮಾವನ್ನು ಆಗಸ್ಟ್ ತಿಂಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಶೀಘ್ರದಲ್ಲಿಯೇ ವಿಶೇಷ ಹಾಡು ಬಿಡುಗಡೆ ಮಾಡಲು ಪ್ಲಾನ್ ಹಾಕಿಕೊಂಡಿದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.