ಕೋಲಾರ ಟೊಮೆಟೊಗೆ ಭಾರೀ ಬೇಡಿಕೆ: ಬಾಂಗ್ಲಾದೇಶಕ್ಕೆ ರಫ್ತು
ಒಡಿಶಾ, ಛತ್ತೀಸ್‌ಗಡ, ಕೋಲ್ಕತಾ ಸಹಿತ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಿದ ಬೇಡಿಕೆ, ಬೆಲೆ ಏರಿಕೆ
Team Udayavani, Jun 26, 2023, 6:21 AM IST
ಬೆಂಗಳೂರು: ನೆರೆಯ ಬಾಂಗ್ಲಾದೇಶ, ಒಡಿಶಾ, ಛತ್ತೀಸ್‌ಗಡ, ಕೋಲ್ಕತಾ ಸಹಿತ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಸೃಷ್ಟಿಯಾಗಿದ್ದು, ಆ ಹಿನ್ನೆಲೆಯಲ್ಲಿ ರಾಜ್ಯದ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ.
ಕೋಲಾರದ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ 15 ಕೆ.ಜಿ. ಬಾಕ್ಸ್‌ನ ಟೊಮೆಟೊ 900ರೂ.ದಿಂದ 1100 ರೂ. ವರೆಗೂ ಮಾರಾಟವಾಗುತ್ತಿದೆ. ಹೊರ ದೇಶ ಮತ್ತು ಹೊರ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟದ ಟೊಮೆಟೊಗೆ ಸಾಕಷ್ಟು ಬೇಡಿಕೆಯಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಟೊಮೆಟೊ ಮತ್ತಷ್ಟು ದುಬಾರಿಯಾಗುವ ನಿರೀಕ್ಷೆಯಿದೆ.
ಕೆ.ಆರ್.ಮಾರುಕಟ್ಟೆ ಸಹಿತ ನಗರದ ಹಲವು ಮಾರುಕಟ್ಟೆಯಲ್ಲಿ ಚೆಲ್ಲರೆ ಮಾರಾಟದಲ್ಲಿ ಪ್ರತಿ ಕೆ.ಜಿಗೆ.30 ರೂ.ಗೆ ಖರೀದಿಯಾಗುತ್ತಿದ್ದ ಟೊಮೆಟೊ ಈಗ 50ರಿಂದ 55 ರೂ.ಗೆ ಮಾರಾಟವಾಗುತ್ತಿದೆ.
ಸಕಾಲಕ್ಕೆ ಮಳೆ ಬಾರದಿರುವುದು, ಬೆಳೆಗಳಿಗೆ ನುಸಿರೋಗ ಕಾಣಿಸಿಕೊಂಡಿರುವುದು ಮತ್ತು ತಮಿಳುನಾಡು ಸಹಿತ ಕೆಲವು ರಾಜ್ಯಗಳಲ್ಲಿ ಟೊಮೆಟೊ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಈಗ ಬೇಡಿಕೆಗೆ ತಕ್ಕಷ್ಟು ಟೊಮೆಟೊ ಸಿಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ಜಾಲಹಳ್ಳಿಯ ಟೊಮೆಟೊ ವ್ಯಾಪಾರಿ ಜಯಣ್ಣ ಹೇಳುತ್ತಾರೆ.
ಬಾಂಗ್ಲಾದೇಶಕ್ಕೆ ರಫ್ತು
ತಮಿಳುನಾಡಿನಲ್ಲಿ ಹೇರಳ ಪ್ರಮಾಣದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, ಈ ಬಾರಿ ಅಲ್ಲೂ ಬೆಳೆ ನಾಶವಾಗಿದೆ. ಕೋಲ್ಕತಾ ಭಾಗದಲ್ಲಿ ಬೆಳೆಯಲಾಗುತ್ತಿದ್ದ ಟೊಮೆಟೊ ಬಾಂಗ್ಲಾದೇಶಕ್ಕೆ ರಫ್ತಾಗುತ್ತಿತ್ತು. ಆದರೆ ಈ ಬಾರಿ ಅಲ್ಲೂ ಬೆಳೆ ಕಡಿಮೆಯಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಕೋಲಾರ ಮಾರುಕಟ್ಟೆಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಹೊರ ಜಿಲ್ಲೆಗಳಿಂದ ವರ್ತಕರು ಇಲ್ಲಿಗೆ ಬಂದು ಖರೀದಿಸುತ್ತಿದ್ದಾರೆ ಎಂದು ಕೋಲಾರದ ವರ್ತಕ ಪುಟ್ಟರಾಜು ಮಾಹಿತಿ ನೀಡುತ್ತಾರೆ.
ಕೆಲವು ದಿನಗಳ ಹಿಂದೆ ಕೋಲಾರ ಮಾರುಕಟ್ಟೆಯಲ್ಲಿ 15 ಕೆ.ಜಿ. ಬಾಕ್ಸ್ ಟೊಮೆಟೊ 300-400 ರೂ.ಗೆ ಖರೀದಿಯಾಗುತ್ತಿತ್ತು. ಇತ್ತೀಚೆಗಷ್ಟೇ ಅದು 700ರಿಂದ 800 ರೂ.ಗೆ ಏರಿತ್ತು¤. ಈಗ ಅದು 900-1100 ರೂ.ಗೆ ಹೆಚ್ಚಾಗಿದೆ. ಬಾಂಗ್ಲಾದೇಶ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಟೊಮೆ ಟೊಗೆ ಬೇಡಿಕೆಯಿದ್ದು, ಬೆಲೆ ಮತ್ತಷ್ಟು ಏರಿದೆ.
ಮಹಾರಾಷ್ಟ್ರದಿಂದ ಕ್ಯಾರೆಟ್ ಪೂರೈಕೆ
ಸಿಲಿಕಾನ್ ಸಿಟಿ ಬೆಂಗಳೂರಿಗೆ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳಿಂದ ಕ್ಯಾರೆಟ್ ಪೂರೈಕೆ ಆಗುತ್ತಿತ್ತು. ಆದರೆ ಬೇಡಿಕೆಯಿರುವಷ್ಟು ಬೆಳೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಮಾರುಕಟ್ಟೆಗೆ ಮಹಾರಾಷ್ಟ್ರದಿಂದ ಕ್ಯಾರೆಟ್ ಪೂರೈಕೆ ಆಗುತ್ತಿದೆ. ಪ್ರತಿ ದಿನ 600ರಿಂದ 700 ಚೀಲ ಕ್ಯಾರೆಟ್ ಮಹಾರಾಷ್ಟ್ರದಿಂದ ರಾಜಧಾನಿಗೆ ಪೂರೈಕೆ ಆಗುತ್ತಿದೆ ಎಂದು ಕಲಾಸಿಪಾಳ್ಯದ ಹೋಲ್‌ಸೇಲ್ ವ್ಯಾಪಾರಿ ರವಿರಾಜ್ ಹೇಳುತ್ತಾರೆ. ಜತೆಗೆ ಉತ್ತಮ ಗುಣಮಟ್ಟದ ಕ್ಯಾರೆಟ್ ಊಟಿಯಿಂದಲೂ ಪ್ರತಿ ದಿನ ಪೂರೈಕೆ ಆಗುತ್ತಿದೆ. ಪ್ರತಿ ಕೆ.ಜಿ 60ರಿಂದ 70 ರೂ.ಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಖರೀದಿಯಾಗುತ್ತಿದೆ. ಮಳೆ ಕೊರತೆ, ಬೆಳೆರೋಗ, ಕೆಲವು ರಾಜ್ಯಗಳಲ್ಲಿ ಬೆಳೆ ಹಾನಿಯಾಗಿರುವುದು ತರಕಾರಿಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ.
– ಪುಟ್ಟರಾಜು, ಟೊಮೆಟೊ ವರ್ತಕರು ಕೋಲಾರ
-ದೇವೇಶ ಸೂರಗುಪ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.