‘90 ಬಿಡಿ ಮನೀಗ್ ನಡಿ’ ಟ್ರೇಲರ್ ಗೆ ಮೆಚ್ಚುಗೆ
Team Udayavani, Jun 26, 2023, 5:24 PM IST
ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ, ಪೋಷಕ ನಟನಾಗಿ ಗುರುತಿಸಿ ಕೊಂಡಿರುವ ನಟ ವೈಜನಾಥ ಬಿರಾದಾರ್ ಈಗ ಪೂರ್ಣ ಪ್ರಮಾಣದಲ್ಲಿ ನಾಯಕ ನಟರಾಗಿ ತೆರೆಗೆ ಬರುವ ತಯಾರಿಯಲ್ಲಿದ್ದಾರೆ.
ಹೌದು, ವೈಜನಾಥ್ ಬಿರಾದಾರ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಹೊಸ ಸಿನಿಮಾದ ಹೆಸರು “90 ಬಿಡಿ ಮನೀಗ್ ನಡಿ’. ಅಂದಹಾಗೆ, ಇದು ಬಿರಾದಾರ್ ಅಭಿನಯದ 500ನೇ ಸಿನಿಮಾ ಎಂಬುದು ವಿಶೇಷ.
ರತ್ನಮಾಲಾ ಬಾದರದಿನ್ನಿ ನಿರ್ಮಿಸಿರುವ “90 ಬಿಡಿ ಮನೀಗ್ ನಡಿ…’ ಸಿನಿಮಾವನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರ ಜೂನ್ 29ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಟ್ರೇಲರ್ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗುಮೂಡಿದೆ.
ಚಿತ್ರದಲ್ಲಿ ವೈಜನಾಥ್ ಬಿರಾದಾರ್ ಅವರೊಂದಿಗೆ ಕರಿಸುಬ್ಬು, ನೀತಾ, ಪ್ರೀತು ಪೂಜಾ, ಧರ್ಮ, ಪ್ರಶಾಂತ್ ಸಿದ್ಧಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ, “ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ ಸಿನಿಮಾ. ಇಡೀ ಸಿನಿಮಾದ ಶೇಕಡಾ 80ರಷ್ಟು ಭಾಗ ಉತ್ತರ ಕರ್ನಾಟಕದ ಸೊಗಡಿನಲ್ಲಿ ನಡೆಯುತ್ತದೆ. ಇಂಥದ್ದೊಂದು ಪಾತ್ರವನ್ನು ಉತ್ತರ ಕರ್ನಾಟಕದ ಮೂಲದ ಕಲಾವಿದರು ಮಾಡಿದರೆ ಹೆಚ್ಚು ಪರಿಣಾಮ ಕಾರಿಯಾಗಿರುತ್ತದೆ ಎಂಬ ಯೋಚನೆ ನಮ್ಮಲ್ಲಿತ್ತು. ಕೊನೆಗೆ ಈ ಕಥೆಗೆ ಮತ್ತು ಪಾತ್ರಕ್ಕೆ ಬಿರಾದಾರ್ ಅವರೇ ಸೂಕ್ತ ಎನಿಸಿ, ಅವರನ್ನೇ ಹೀರೋ ಆಗಿ ಆಯ್ಕೆ ಮಾಡಿಕೊಂಡೆವು. ಸಂಪೂರ್ಣ ಹಾಸ್ಯಭರಿತವಾಗಿರುವ ಜೊತೆಗೆ ಸಸ್ಪೆನ್ಸ್ ಇರುವಂಥ ಸಿನಿಮಾ ಇದು’ ಎಂದು ಸಿನಿಮಾದ ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು.
ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬಂದಿರುವ ಈ ಹಾಡಿಗೆ ಶಿವು ಬೆರಗಿ ಸಾಹಿತ್ಯ-ಸಂಗೀತವಿದ್ದು, ರವೀಂದ್ರ ಸುರಗಾವಿ ಮತ್ತು ಶಮಿತಾ ಮಲ್ನಾಡ್ ಹಾಡಿಗೆ ಧ್ವನಿಯಾಗಿದ್ದಾರೆ. ಭೂಷಣ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದು, ನಟ ಬಿರಾದಾರ್ ಹಾಡಿಗೆ ಮಸ್ತ್ ಸೆಪ್ಟ್ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.