ಆನೆಗೊಂದಿ ಪ್ರವಾಸೋದ್ಯಮಕ್ಕೆ ಪ್ರಾಧಿಕಾರದ ನಿಯಮಗಳು ಮಾರಕ: ಶಾಸಕ ರೆಡ್ಡಿ
ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗಕ್ಕೆ ಪ್ರತೇಕಗೊಳಿಸುವಂತೆ ಮನವಿ
Team Udayavani, Jun 26, 2023, 5:31 PM IST
ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಆನೆಗೊಂದಿ ಭಾಗವನ್ನು ಸೇರ್ಪಡೆ ಮಾಡಲಾಗಿದ್ದು ಪ್ರಾಧಿಕಾರದ ವ್ಯಾಪ್ತಿಯಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೈ ಬಿಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ತಿಳಿಸಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆನೆಗೊಂದಿ, ಸಾಣಾಪೂರ ಮತ್ತು ಹನುಮನಹಳ್ಳಿ ಸುತ್ತಲಿನ ಜನ ಹಲವು ದಶಕಗಳಿಂದ ಆನೆಗೊಂದಿ ಭಾಗದ ಪ್ರಕೃತಿ ಸೌಂದರ್ಯ ಮತ್ತು ದೇವಾಲಯಗಳನ್ನು ಸಂರಕ್ಷಣೆ ಮಾಡಿದ್ದಾರೆ. ಅವೈಜ್ಞಾನಿಕವಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಹೊಸಪೇಟೆಯ ಕೆಲವರ ಲಾಭಿಗೆ ಮಣಿದು ಸೇರ್ಪಡೆ ಮಾಡಲಾಗಿದೆ.ಇದರಿಂದ ಸಣ್ಣಪುಟ್ಟ ಹೊಟೇಲ್ ರೆಸಾರ್ಟ್ ಮಾಡಿಕೊಂಡು ಸ್ವಾಭಿಮಾನದ ಜೀವನ ನಡೆಸಲು ನಿರುದ್ಯೋಗಿ ಯುವಕರಿಗೆ ಆಗುತ್ತಿಲ್ಲ. ಪದೇ ಪದೇ ಕೆಲವರು ಕೋರ್ಟ್ ಮೆಟ್ಟಿಲು ಹತ್ತಿ ಅನಧಿಕೃತ ಹೆಸರಿನಲ್ಲಿ ತೆರವು ಕಾರ್ಯ ನಡೆಸಲಾಗುತ್ತಿದೆ.
ಈ ಭಾಗದಲ್ಲಿ ಪ್ರಕೃತಿ ಸೌಂದರ್ಯ ಹಾಗೂ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶ ವೀಕ್ಷಣೆಗೆ ನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು ಇವರಿಗೆ ಊಟ ವಸತಿ ಕಲ್ಪಿಸಿದರೆ ಅದು ಪ್ರಾಧಿಕಾರದವರಿಗೆ ಅವ್ಯವಹಾರವಾಗಿ ಕಾಣುತ್ತಿದೆ. ಕರಾವಳಿ, ಮಡಿಕೇರಿ ಸೇರಿ ರಾಜ್ಯದ ವಿವಿಢೆದೆ ಹೋಂ ಸ್ಟೇಗಳಿಗೆ ಪ್ರವಾಸೋದ್ಯಮ ಇಲಾಖೆ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಆನೆಗೊಂದಿ ಭಾಗದಲ್ಲಿಯೂ ರೈತರ ಭೂಮಿಯಲ್ಲಿ ಶೇ.5 ರಷ್ಟು ಪ್ರದೇಶದಲ್ಲಿ ಫಾರ್ಮ್ ಸ್ಟೇ ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದೆ.
ಬಜೆಟ್ ಅಧಿವೇಶನದಲ್ಲಿ ಸರಕಾರದದ ಗಮನಕ್ಕೆ ತರಲು ವಿಷಯವನ್ನು ಸದನದಲ್ಲಿ ಮಂಡಿಸಲಾಗುತ್ತದೆ. ಇದರೆ ಜತೆಗೆ ಆನೆಗೊಂದಿ ಭಾಗಕ್ಕೆ ಪ್ರತೇಕ ಪ್ರಾಧಿಕಾರ ರಚಿಸಿ ಪ್ರವಾಸೋದ್ಯಮ ಬೆಳವಣಿಗೆ ಮಾಡಬೇಕೆಂದು ಮನವಿ ಮಾಡಲಾಗುತ್ತದೆ. ಅಕ್ರಮ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರತೇಕ ಪೊಲೀಸ್ ವ್ಯವಸ್ಥೆ ಮಾಡಬೇಕು. ತಾವು ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲ ಹೋಂಗಾರ್ಡ್ಗಳನ್ನು ಪ್ರವಾಸಿ ಮಿತ್ರ ಯೋಜನೆಯಡಿ ಪ್ರವಾಸಿತಾಣಗಳಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ಅದರಂತೆ ಆನೆಗೊಂದಿ ಸೇರಿ ರಾಜ್ಯದ ಪ್ರವಾಸಿತಾಣಗಳ ಕರ್ತವ್ಯಕ್ಕೆ ಪ್ರತೇಕ ಭದ್ರತಾ ಪಡೆ ರಚಿಸಿ ನಿಯೋಜನೆ ಮಾಡಬೇಕು.
ಆನೆಗೊಂದಿ ಭಾಗದಲ್ಲಿ ಅನಧಿಕೃತ ರೆಸಾರ್ಟ್ ನೆಪದಲ್ಲಿ ಅಧಿಕಾರಿಗಳು ಹೊಟೇಲ್‌ಗಳನ್ನು ತೆರವು ಮಾಡಿದ್ದು ಇಲ್ಲಿ ನೇರ ಮತ್ತು ಪರೋಕ್ಷವಾಗಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದವರಿಗೆ ಬಹಳ ತೊಂದರೆಯಾಗಿದೆ. ತಾವು ಸದಾ ನಿರಾಶ್ರಿತರ ಪರವಾಗಿದ್ದು ಅವರಿಗೆ ನ್ಯಾಯ ಕೊಡಿಸಲಾಗುತ್ತದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.