ಸಿದ್ದು ಸೀಟು ಅಲ್ಲಾಡ್ಸು… ಅಲ್ಲಾಡ್ಸು… ಹಾಡಿನಂತಾಗಿದೆ: ಬೊಮ್ಮಾಯಿ ಟೀಕೆ
ಕಾಂಗ್ರೆಸ್‌ನಿಂದ ಸೇಡಿನ ರಾಜಕಾರಣ
Team Udayavani, Jun 26, 2023, 7:43 PM IST
ಬಾಗಲಕೋಟೆ : ಕೈಲಾಗದ ಸುಳ್ಳು ಗ್ಯಾರಂಟಿಗಳನ್ನು ಜನತೆಗೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ನ ವಾರಂಟಿಯೇ ಮುಗಿಯುತ್ತಿದೆ. ರಾಜ್ಯದಲ್ಲಿ ಸೇಡಿನ ರಾಜಕಾರಣ ಶುರು ಮಾಡಿದೆ. ಅಧಿಕಾರಕ್ಕೆ ಬಂದರೆ ಏನು ಬೇಕಾದರೂ ಮಾಡಬಹುದೆಂಬ ಕಾಂಗ್ರೆಸ್‌ನ ದುರಾಲೋಚನೆ ನಡೆಯಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮಾತ್ರಕ್ಕೆ ಏನೆಲ್ಲ ಮಾಡಲು ಆಗಲ್ಲ. ಅಧಿಕಾರದಲ್ಲಿ ಇರುವ ಪಕ್ಷದ ನಿರ್ದೇಶನದಂತೆ ಪೊಲೀಸರು ನಡೆದುಕೊಳ್ಳಬಹುದು. ಆದರೆ, ಅವರಿಗೆ ಕಾನೂನು-ಸಂವಿಧಾನವೇ ತಂದೆ-ತಾಯಿ ಇದ್ದಂತೆ. ಅದನ್ನು ಬಿಟ್ಟು ಪೊಲೀಸರು ಏನೂ ಮಾಡಲು ಆಗಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಗಲಾಟೆ ಮಾಡುವ ಪರಿಪಾಠ ನಡೆದಿದೆ. ನಾವು ಕಾರ್ಯಕರ್ತರ ಜತೆಗೆ ಇರುತ್ತೇವೆ. ಯಾರೂ ಎದೆಗುಂದಬೇಕಿಲ್ಲ ಎಂದರು.
ನಾಯಕರ ಭವಿಷ್ಯ ಬದಲಾಗಲ್ಲ :
ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಗೆದ್ದಾಗ ದೊಡ್ಡ ಮನುಷ್ಯ ಇರಬೇಕು. ಸೋತಾಗ ಗಟ್ಟಿ ಮನುಷ್ಯ ಇರಬೇಕೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ನಮ್ಮ ಕಾರ್ಯಕರ್ತರು ಯಾರೂ ಎದೆಗುಂದಬೇಕಿಲ್ಲ. ಒಂದು ಚುನಾವಣೆಯಲ್ಲಿ ಸೋತರೆ, ಯಾವುದೇ ನಾಯಕರ ಭವಿಷ್ಯ ಅಥವಾ ಹಣೆಬರಹ ಬದಲಾಗಲ್ಲ. ಇಂದಿನ ಸೋಲೇ, ನಾಳೆಯ ಯಶಸ್ಸಿನ ಮೆಟ್ಟಿಲು ಎಂದು ಎಲ್ಲರೂ ಭಾವಿಸೋಣ ಎಂದು ಹೇಳಿದರು.
ರಾಜಕಾರಣಿಗಳು, ಕೇವಲ ಅಧಿಕಾರಕ್ಕಾಗಿ ಮಾತ್ರ ರಾಜಕೀಯ ಮಾಡಬಾರದು. ರಾಜಕಾರಣದಲ್ಲಿ ಎರಡು ರೀತಿ ಇದೆ. ಒಂದು ಅಧಿಕಾರಕ್ಕಾಗಿ, ಇನ್ನೊಂದು ಜನರಿಗಾಗಿ. ಅಧಿಕಾರಕ್ಕಾಗಿ ರಾಜಕೀಯ ಮಾಡಿದರೆ, ನಾನು ಏನು ಮಾಡಿದೆ, ನೀನು ಏನು ಮಾಡಿದೆ ಎಂಬ ಪ್ರತಿಷ್ಠೆ ಬರುತ್ತವೆ. ಅದೇ ಜನರಿಗಾಗಿ ರಾಜಕೀಯ ಮಾಡಿದರೆ, ಸೇವೆ ಒಂದೇ ಮುಖ್ಯವಾಗುತ್ತದೆ. ಬಾಗಲಕೋಟೆ, ಸಕ್ಕರೆ ನಾಡು. ಇಲ್ಲಿನ ಜನರು ಸಿಹಿ ರಸಕೊಡುವ ಕಬ್ಬಿನಂತೆ. ಆಂತಿಕರ ಸಮಸ್ಯೆ ಇರುತ್ತವೆ. ಅವುಗಳನ್ನು ಬದಿಗಿಟ್ಟು ಮುನ್ನಡೆಯೋಣ. ಯಾರೂ ಸೋಲಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ಸಿದ್ದು ಸೀಟು-ಅಲ್ಲಾಡ್ಸು ಹಾಡಿನಂತೆ :
ರಾಜ್ಯದ ಜನರಿಗೆ ಐದು ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಒಂದು ಗ್ಯಾರಂಟಿ ಕೂಡ ಸರಿಯಾಗಿ ಈಡೇರಿಸಲು ಆಗಿಲ್ಲ. ಸಿದ್ದರಾಮಯ್ಯ ಸಿಎಂ ಆದ ತಕ್ಷಣ ವಿಜಯಪುರದ ಸಚಿವರೊಬ್ಬರು, ಸಿದ್ದು ಐದು ವರ್ಷ ಸಿಎಂ ಎಂದು ಹೇಳಿದರು, ಹಾಗೆಯೆ ಮೈಸೂರು ಭಾಗದ ಸಚಿವರೊಬ್ಬರು ಹೇಳಿದರು. ಐದು ಸಿದ್ದು ಸಿಎಂ ಆಗಿರೋದು ಅವರ ಸಚಿವ – ಶಾಸಕರಲ್ಲೇ ಸಂಶಯ ಬಂದಿದೆ. ಹೀಗಾಗಿ ಇದು 6ನೇ ಗ್ಯಾಂಟಿಯಾಗಿ ಸಿದ್ದು ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳುತ್ತ ಹೊರಟಿದ್ದಾರೆ. ಅಲ್ಲಾಡ್ಸು ಅಲ್ಲಾಡ್ಸು ಎಂಬ ಸಿನೆಮಾ ಹಾಡಿನಂತೆ, ಸಿದ್ದರಾಮಯ್ಯ ಅವರ ಸಿಎಂ ಖುರ್ಚಿ ಪರಿಸ್ಥಿತಿ ಆಗಿದೆ ಎಂದು ಟೀಕಿಸಿದರು.
ಸಂತ್ರಸ್ತರಿಗೆ ಏಕರೂಪ ದರ ಕೊಡದಿದ್ದರೆ ಹೋರಾಟ :
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರು, ಏಕರೂಪದ ದರ ಕೊಡಿ ಎಂದು 2013ರಿಂದ 2018ರ ವರೆಗೆ ಹೋರಾಟ ಮಾಡಿದರೂ ಕಾಂಗ್ರೆಸ್‌ನವರು ಸ್ಪಂದಿಸಲಿಲ್ಲ. ಕೃಷ್ಣೆಯ ಕಡೆಗೆ ನಡಿಗೆ ಮಾಡಿ, ಅಧಿಕಾರ ಅನುಭವಿ ಓಡಿ ಹೋದರು. ಒಂದು ಸಭೆಯನ್ನೂ ಸಂತ್ರಸ್ತರೊಂದಿಗೆ ಮಾಡಲಿಲ್ಲ. ನಾನು ಸಿಎಂ ಆದ ಬಳಿಕ ಮೂರು ಸಭೆ ನಡೆಸಿ, ಸಂತ್ರಸ್ತರಿಗೆ ಏಕರೂಪದ ದರ ಘೋಷಣೆ ಮಾಡಿ, ಪರಿಹಾರ ನೀಡಲು 5 ಸಾವಿರ ಕೋಟಿ ಮೀಸಲಿಟ್ಟಿದ್ದೇವು. ಈಗಿನ ಕಾಂಗ್ರೆಸ್ ಸರ್ಕಾರ, ಸಂತ್ರಸ್ತರಿಗೆ ಏಕರೂಪದ ದರ ಕೊಡಲೇಬೇಕು. ಅದು 25ರಿಂದ 35 ಸಾವಿರ ಕೋಟಿಯಾದರೂ ಸಂತ್ರಸ್ತರಿಗೆ ಕೊಡಬೇಕು. ಇಲ್ಲದಿದ್ದರೆ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ ಸಂತ್ರಸ್ತರೊಂದಿಗೆ ನಾವು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಒಂದು ಚುನಾವಣೆಯಲ್ಲಿ ಸೋತರೆ ನಾಯಕರ ಭವಿಷ್ಯ-ಹಣೆಬರಹ ಬದಲಾಗಲ್ಲ. ಇಂದಿನ ಬಾಗಲಕೋಟೆಯ ಸಭೆಯಲ್ಲಿ ಕಾರ್ಯಕರ್ತರು, ತಮ್ಮ ನಾಯಕರ ಬಗ್ಗೆ ನಿಷ್ಠೆ-ಅಭಿಮಾನದ ನಿಲುವು ತೋರಿಸಿದ್ದಾರೆ. ಸೋಗಾತ ಸ್ವಲ್ಪ ಆವೇಶ ಸಹಜ. ಎಲ್ಲವನ್ನೂ ಸರಿದೂಗಿಸಿ, ಆಂತರಿಕ ಸಮಸ್ಯೆ ಬದಿಗಿಟ್ಟು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಪುಟಿದೇಳುತ್ತೇವೆ.
-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ಇದನ್ನೂ ಓದಿ: Vijayapura: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಯತ್ನಾಳ್ -ಜಿಗಜಿಣಗಿ ಬೆಂಬಲಿಗರ ಮಧ್ಯ ಗಲಾಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.