ಕ್ಯಾನ್ಸರ್ ಚಿಕಿತ್ಸೆಗೆ “ಲಸಿಕೆ’ಯ ರಾಮಬಾಣ! ಮುಂದಿನ 5 ವರ್ಷಗಳಲ್ಲಿ ಸಾಧ್ಯ
Team Udayavani, Jun 27, 2023, 7:30 AM IST
ಸೀಟಲ್: ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಹೊಸ ಹೊಸ ಚಿಕಿತ್ಸಾ ವಿಧಾನಗಳು ಆವಿಷ್ಕಾರಗೊಳ್ಳುತ್ತಲೇ ಇವೆ. ಇದಕ್ಕೆ ಈಗ ಹೊಸ ಸೇರ್ಪಡೆಯೇ “ಕ್ಯಾನ್ಸರ್ ಲಸಿಕೆ’. ಹಲವು ದಶಕಗಳ ಪರಿಶ್ರಮದ ಬಳಿಕ ಈಗ ವಿಜ್ಞಾನಿಗಳು ಕ್ಯಾನ್ಸರ್ ಚಿಕಿತ್ಸೆಗೆ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದ್ದು, ಮುಂದಿನ 5 ವರ್ಷಗಳಲ್ಲಿ ಇಂತಹ ಹೆಚ್ಚು ಹೆಚ್ಚು ಲಸಿಕೆಗಳನ್ನು ಪರಿಚಯಿಸಲಾಗುತ್ತದೆ ಎಂದಿದ್ದಾರೆ.
ಇದು ಅರ್ಬುದ ರೋಗ ಬರದಂತೆ ತಡೆಯುವಂಥ ಸಾಂಪ್ರದಾಯಿಕ ಲಸಿಕೆಯಲ್ಲ. ಬದಲಾಗಿ, ಕ್ಯಾನ್ಸರ್ ಗಡ್ಡೆ (ಟ್ಯೂಮರ್) ಗಳನ್ನು ಸಂಕುಚಿತಗೊಳಿಸುವ ಮೂಲಕ ಅದು ಮತ್ತೆ ಬಾರದಂತೆ ತಡೆಯುವ ಲಸಿಕೆಯಾಗಿದೆ. ಸ್ತನ ಮತ್ತು ಶ್ವಾಸಕೋಶ ಕ್ಯಾನ್ಸರ್, ಮಾರಣಾಂತಿಕ ಚರ್ಮದ ಕ್ಯಾನ್ಸರ್ ಮೆಲನೋಮಾ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಅನ್ನು ಗುರಿಯಾಗಿಸಿಕೊಂಡು ಈ ಲಸಿಕೆಯ ಪ್ರಯೋಗ ನಡೆದಿದೆ.
ಸಾಮಾನ್ಯವಾಗಿ ಕ್ಯಾನ್ಸರ್ ಎನ್ನುವುದು ಶರೀರದ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಂಡಿರುತ್ತದೆ. ಆದರೆ, ಈಗ ಅಭಿವೃದ್ಧಿಪಡಿಸಲಾಗುತ್ತಿರುವ ಕ್ಯಾನ್ಸರ್ ಲಸಿಕೆಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಿ ನಾಶ ಮಾಡುತ್ತದೆ ಎಂದು ಸೀಟಲ್‌ನ ಯುಡಬ್ಲ್ಯು ಮೆಡಿಸಿನ್‌ನ ಕ್ಯಾನ್ಸರ್ ವ್ಯಾಕ್ಸಿನ್ ಇನ್‌ಸ್ಟಿಟ್ಯೂಟ್‌ನ ಡಾ. ನೋರಾ ಡಿಸಿಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Result: ಜಾರ್ಜಿಯಾ, ಉ.ಕೆರೋಲಿನಾದಲ್ಲಿ ಟ್ರಂಪ್ ಕಮಾಲ್, ಹ್ಯಾರಿಸ್ ಗೆ ತೀವ್ರ ಹಿನ್ನಡೆ
Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
MUST WATCH
ಹೊಸ ಸೇರ್ಪಡೆ
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Punjalkatte: ಗುಂಡಿಗಳು ಸಾರ್ ಗುಂಡಿಗಳು
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Ramayana: ಎರಡು ಭಾಗಗಳಾಗಿ ಬರಲಿದೆ ಬಿಗ್ ಬಜೆಟ್ ʼರಾಮಾಯಣʼ; ರಿಲೀಸ್ ಡೇಟ್ ಅನೌನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.