Famous YouTuber ದೇವರಾಜ್ ಪಟೇಲ್ ರಸ್ತೆ ಅಪಘಾತದಲ್ಲಿ ಮೃತ್ಯು
Team Udayavani, Jun 26, 2023, 9:07 PM IST
ರಾಯ್ಪುರ: ಖ್ಯಾತ ಯೂಟ್ಯೂಬರ್ ದೇವರಾಜ್ ಪಟೇಲ್ ಅವರು ರಸ್ತೆ ಅವಘಡದಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ಟ್ರಕ್ ಢಿಕ್ಕಿ ಹೊಡೆದ ನಂತರ ಬೈಕ್ ನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ 22 ವರ್ಷ ಪ್ರಾಯವಾಗಿತ್ತು.
ಮಧ್ಯಾಹ್ನ 3.30 ರ ಸುಮಾರಿಗೆ ಅಪಘಾತ ಸಂಭವಿಸಿದಾಗ ಪಟೇಲ್ ಹಿಂಬದಿ ಸವಾರನಾಗಿದ್ದರು. ಅವರು ವಿಡಿಯೋ ಚಿತ್ರೀಕರಣ ಮುಗಿಸಿ ನವಾ ರಾಯ್ಪುರದಿಂದ ಹಿಂತಿರುಗುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಟೇಲ್ ಅವರ ಚಾನೆಲ್ ‘ದಿಲ್ ಸೆ ಬುರಾ ಲಗ್ತಾ ಹೈ’ 4 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ ಮತ್ತು 8.80 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಅವರು ತಮ್ಮ ಹಾಸ್ಯ ಮತ್ತು ತಮಾಷೆಯ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದರು.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘಟನೆಗೆ ಸಂತಾಪ ಸೂಚಿಸಿದ್ದು, ಎಲ್ಲರನ್ನೂ ನಗಿಸಿದ ದೇವರಾಜ್ ಪಟೇಲ್ ನಮ್ಮನ್ನು ಅಗಲಿದ್ದಾರೆ ಎಂದು ಸಂತಾಪ ಸೂಚಿಸಿದ್ದಾರೆ.
ಟೆಲಿಬಂದ ಪೊಲೀಸ್ ಠಾಣೆ ವ್ಯಾಪ್ತಿಯ ಲಾಭಂಡಿ ಪ್ರದೇಶದ ಬಳಿ ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಟ್ರಕ್ಗೆ ಮೋಟಾರ್ಸೈಕಲ್ನ ಹ್ಯಾಂಡಲ್ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ ಮತ್ತು ಪಿಲಿಯನ್ ಸವಾರಿ ಮಾಡುತ್ತಿದ್ದ ಪಟೇಲ್ ಭಾರೀ ವಾಹನದ ಹಿಂಬದಿಯ ಚಕ್ರಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ
Satyendar Jain: 7 ಕೋಟಿ ರೂ. ಲಂಚ ಆರೋಪ: ಆಪ್ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ತನಿಖೆ
Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…
Kuno National Park: ಕುನೋದಲ್ಲಿ ಮಳೆ ವೇಳೆ ಚೀತಾ ಮರಿಗಳ ಆಟದ ವಿಡಿಯೋ ವೈರಲ್
Kulgam; ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರ ಹತ್ಯೆ: ಯೋಧ ಹುತಾತ್ಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.