ಡ್ರಗ್ಸ್: 6191ಪ್ರಕರಣ, 7882 ಮಂದಿ ಸೆರೆ
Team Udayavani, Jun 27, 2023, 12:01 PM IST
ಬೆಂಗಳೂರು: ಕಳೆದ ಒಂದೂವರೆ ವರ್ಷದಲ್ಲಿ ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡುವವರ ವಿರುದ್ಧ 6 ಸಾವಿರಕ್ಕೂ ಅಧಿಕ ಪ್ರಕರಣದಾಖಲಿಸಿದ್ದು, ಬಂಧಿತರಿಂದ 117 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ನಗರದ ಆಯುಕ್ತರ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣಿಕೆ ವಿರೋಧಿ ದಿನದ ಪ್ರಯುಕ್ತ ಸೋಮವಾರ ‘ಬಿಸಿಪಿ ಎನ್‌ಡಿಪಿಎಸ್ ಪೋರ್ಟಲ್ ‘ ಅನ್ನು ಅನಾವರಣಗೊಳಿಸಿ ಮಾತನಾಡಿದರು.
ನಗರದ ಠಾಣೆಗಳಲ್ಲಿ 2022 ಮತ್ತು 2023(ಜೂ.22ರ ವರೆಗೆ) ಮಾದಕವಸ್ತು ಸೇವನೆ ಮತ್ತು ಮಾದಕವಸ್ತುಗಳ ಮಾರಾಟ ಮಾಡುವವರ ವಿರುದ್ಧ ಒಟ್ಟು 6,191 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈ ಪೈಕಿ 7,723 ಮಂದಿ ಭಾರತೀಯರು ಮತ್ತು 159 ಮಂದಿ ವಿದೇಶಿಗರನ್ನು ಬಂಧಿಸಲಾಗಿದೆ. ಈ ಪೈಕಿ 943 ಮಂದಿ ಡ್ರಗ್ಸ್ ಪೆಡ್ಲರ್‌ಗಳು ಹಾಗೂ ಮಾದಕ ವ್ಯಸನ ಆರೋಪದ ಮೇಲೆ 5,248 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಬಂಧಿತರಿಂದ ಸುಮಾರು 117 ಕೋಟಿ ರೂ. ಮೌಲ್ಯದ 6,261 ಕೆ.ಜಿ.ಮಾದಕವಸ್ತು ಜಪ್ತಿ ಮಾಡಲಾಗಿದ್ದು, 6,074 ಕೆ.ಜಿ. ಗಾಂಜಾ, 5 ಕೆ.ಜಿ. ಗಾಂಜಾ ಆಯಿಲ್, 2 ಕೆ.ಜಿ.554 ಗ್ರಾಂ ಬ್ರೌನ್ ಶುಗರ್, 15 ಕೆ.ಜಿ.689 ಗ್ರಾಂ ಅμàಲು, 52 ಕೆ.ಜಿ. 689 ಗ್ರಾಂ ಎಂಡಿಎಂ, 109 ಕೆ.ಜಿ.914 ಗ್ರಾಂ ಸಿಂಥೆಟಿಕ್ ಡ್ರಗ್ಸ್, 3,406 ವಿವಿಧ ರೀತಿಯ ಮಾದಕ ಮಾತ್ರೆಗಳು ಹಾಗೂ 1,372 ಎಲ್ ಎಸ್‌ಡಿ ಸ್ಟ್ರಿಪ್ಸ್‌ಗಳು ಸೇರಿ ಒಟ್ಟು 6,261 ಕೆ.ಜಿ. ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದರು.
ಬಿಸಿಪಿ ಎನ್‌ಡಿಪಿಎಸ್ ಪೋರ್ಟಲ್ ಅನಾವರಣ: ಮಾದಕ ವಸ್ತು ಮಾರಾಟ, ಸೇವಿಸುವವರು ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಮಾಹಿತಿಯನ್ನು ಬಿಸಿಪಿ ಎನ್‌ಡಿಪಿಎಸ್ ಪೋರ್ಟಲ್ ತಂತ್ರಾಂಶದ ಮೂಲಕ ಸಂಗ್ರಹಿಸಿಡಲಾಗಿದೆ. 2011ರಿಂದ ಇದುವರೆಗೂ ದಾಖಲಾದ ಪ್ರಕರಣಗಳ ಸಂಖ್ಯೆ, ಆರೋಪಿಗಳ ಮಾಹಿತಿಯನ್ನು ಪಡೆಯಲಾಗಿದೆ.
ಶಾಲಾ-ಕಾಲೇಜುಗಳಲ್ಲಿ ಜಾಗೃತಿ: ಮಾದಕ ವಸ್ತು ಕುರಿತು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಎಲ್ಲಾ ದರ್ಜೆಯ 618 ಅಧಿಕಾರಿ, ಸಿಬ್ಬಂದಿ 388 ಶಾಲೆ, 253 ಕಾಲೇಜು ಮತ್ತು 51 ವೃತ್ತಿನಿರತ ಕಾಲೇಜುಗಳಿಗೆ ಭೇಟಿ ನೀಡಿ 1.95 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದಾರೆ. ಕಳೆದೊಂದು ತಿಂಗಳಿಂದ ವ್ಯಸನಿಗಳ ವಿರುದ್ಧ ಕ್ರಮ ವಹಿಸಿದ್ದು, 130 ಪೆಡ್ಲರ್‌ಗಳು ಹಾಗೂ 1,003 ವ್ಯಸನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳ ಲಾಗಿದೆ. ಇದೇ ವೇಳೆ 204 ಕೆ.ಜಿ. ಗಾಂಜಾ, 1.195 ಹೆರಾಯಿನ್, 171 ಕೋಟಾ³ ಕಾಯ್ದೆ ಯಡಿ ಪ್ರಕರಣ ದಾಖಲಿಸಲಾಗಿದೆ ಎಂದರು.
21 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ “ಡ್ರಗ್ಸ್ ಡಿನ್ಪೋಸಲ್ ಕಮಿಟಿ’ಗೆ ಬೆಂಗಳೂರು ನಗರ ಪೊಲೀಸರು ಎನ್‌ಡಿಪಿಎಸ್ ಪ್ರರಣಗಳಲ್ಲಿ ಜಪ್ತಿ ಮಾಡಿದ್ದ 2,117 ಕೆ.ಜಿ.ಮಾದಕವಸ್ತುಗಳನ್ನು ಹಸ್ತಾಂತರಿಸಿದ್ದಾರೆ. ಈ ಪೈಕಿ 2,053 ಕೆ.ಜಿ. ಗಾಂಜಾ, 1 ಕೆ.ಜಿ.392 ಗ್ರಾಂ ವೀಡ್ ಆಯಿಲ್, 9 ಕೆ.ಜಿ. ಹಾಶಿಷ್ ಆಯಿಲ್ ಸೇರಿದಂತೆ ಒಟ್ಟು 21 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳಿವೆ. ಕೋರ್ಟ್ ಅನುಮತಿ ಮೇರೆಗೆ ನಾಶಪಡಿಸಲಾಗಿದೆ. ಮಾಚ್ ìನಲ್ಲಿ ನಡೆದ ದಕ್ಷಿಣ ರಾಜ್ಯಗಳ ಮಾದಕವಸ್ತು ಕಳ್ಳ ಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತ ಸಮಾವೇಶದ ಪ್ರಯುಕ್ತ 92 ಕೋಟಿ ರೂ. ಮೌಲ್ಯದ 4,397 ಕೆ.ಜಿ.855 ಗ್ರಾಂ ತೂಕದ ಮಾದಕವಸ್ತುಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಇ-ಪ್ರತಿಜ್ಞೆ : ಮಾದಕವಸ್ತು ಮಾರಾಟ ಮತ್ತು ಕಳ್ಳ ಸಾಗಣೆ ವಿರುದ್ಧ ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸುವ ನಿಟ್ಟಿನಲ್ಲಿ “ಸೇ ಯಸ್ ಟು ಲೈಫ್, ನೋ ಟು ಡ್ರಗ್ಸ್’ ಎಂಬ ಧ್ಯೇಯವಾಕ್ಯ ದೊಂದಿಗೆ ಅಭಿಯಾನ ಆರಂಭಿಸಲಾಗಿದೆ. ಸಾರ್ವಜನಿಕರು ಅಂತರ್ಜಾಲದ ಮೂಲಕ ಜಠಿಠಿಟs://ಟlಛಿಛಜಛಿ.cyಚಿಛಿrsಚಟಜಿಛಿns.ಜಿn ನಲ್ಲಿ ನೋಂದಣಿ ಮಾಡಿಕೊಂಡು ಪ್ರಮಾಣ ಪತ್ರ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಈ ಕುರಿತು ನಗರದ ಎಲ್ಲಾ ಡಿಸಿಪಿಗಳು ತಮ್ಮ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.