ಬಲಿದಾನ ಹಬ್ಬ ಬಕ್ರೀದ್‌ಗೆ ಸಕಲ ಸಿದ್ಧತೆ 


Team Udayavani, Jun 27, 2023, 1:00 PM IST

ಬಲಿದಾನ ಹಬ್ಬ ಬಕ್ರೀದ್‌ಗೆ ಸಕಲ ಸಿದ್ಧತೆ 

ದೇವನಹಳ್ಳಿ: ತ್ಯಾಗ ಬಲಿದಾನಗಳ ಸಂಕೇತವಾಗಿ ಆಚರಿಸುವಂತಹ ಮುಸ್ಲಿಂರ ಬಕ್ರೀದ್‌ಗೆ ದಿನಗಣನೆ ಪ್ರಾರಂ ಭವಾಗಿದೆ. ಬಕ್ರೀದ್‌ ಹಿನ್ನೆಲೆಯಲ್ಲಿ ಕುರಿ ಮತ್ತು ಮೇಕೆಗಳಿಗೆ ಬೇಡಿಕೆ ಹೆಚ್ಚಿದೆ. ಸಾಮಾನ್ಯವಾಗಿ 7 ರಿಂದ 8 ಸಾವಿರಕ್ಕೆ ಮಾರಾಟವಾಗುತ್ತಿದ್ದ ಕುರಿಗಳಿಗೆ ಭಾ ರಿ ಬೆಲೆ ಬಂದಿದ್ದು, ಜೋಡಿ ಕುರಿಗೆ ಸುಮಾರು 50 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಈ ಬಾರಿ ಭರ್ಜರಿಯಾಗಿ ಬಕ್ರೀದ್‌ ಅಚರಣೆ ಮಾಡುವ ಹಿನ್ನೆಲೆಯಲ್ಲಿ ಕುರಿ ಮತ್ತು ಮೇಕೆಗಳನ್ನು ಖರೀದಿಸಲು ಮುಂದಾಗಿದ್ದಾರೆ.

ಜೂನ್‌ 29ರಂದು ಬಕ್ರೀದ್‌ ಹಬ್ಬವನ್ನು ಮುಸಲ್ಮಾನರು ಆಚರಿಸಲಿದ್ದಾರೆ. ಈಗಾಗಲೇ ಹೊಸಕೋಟೆ ತಾಲೂಕಿನ ಹಿಂಡಿಗನಾಳ ಸಂತೆಯಲ್ಲಿ ಪ್ರತಿ ವರ್ಷವೂ ಕುರಿಗಳ ವ್ಯಾಪಾರ ಜೋರಾಗಿ ನಡೆಯಲಿದೆ.

ಮನೆ ಮನೆಗೂ ಹೋಗಿ ಕುರಿ ವ್ಯಾಪಾರ: ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ಕುರಿಗಳನ್ನು ಬಲಿ ಕೊಡುತ್ತಾರೆ. ಹೀಗಾಗಿ ಮೂರು ಮಾರುಕಟ್ಟೆಯಲ್ಲಿ ಸಹಜವಾಗಿಯೇ ಕುರಿ ಬೆಲೆ ಗಗನಕ್ಕೇರಿರುತ್ತದೆ. ಈ ಪ್ರದೇಶದಲ್ಲಿ ಮುಸ್ಲಿಂರು ಕುರಿ ಗಳನ್ನು ಸಾಕಾಣಿಕೆ ಮಾಡುವವರ ಮನೆಗೆ ಹೋಗಿ ವ್ಯಾಪಾರ ಕುದುರಿಸಿಕೊಂಡು ಹೋಗುತ್ತಾರೆ. ಕೊಂಡುಕೊಳ್ಳು ವವರು ಉಂಡೆ ಕುರಿಯನ್ನೇ ತೂಕಕ್ಕೆ ಹಾಕಿ ಕಿಲೋಗೆ ಸಾವಿರದಂತೆ ನಿಗದಿ ಮಾಡಿ ಮಾರಾಟ ಮಾಡಿಕೊಳ್ಳುತ್ತಾರೆ.

ಅಂಗಾಂಗ ವೈಫ‌ಲ್ಯ ಕುರಿ ಬಲಿಗೆ ನಿಷೇಧ: ಗಾಯವಾದ ಕುರಿ ಬಲಿ ನೀಡಲಾಗುವುದಿಲ್ಲ, ಯಾವುದಾದರೂ ಅಂಗ ಊನವಾದರೆ ಬಲಿಗೆ ಅನ ರ್ಹವಾಗಿ ರುತ್ತದೆ. ಇದಕ್ಕೆ ಇಸ್ಲಾಂನಲ್ಲಿ ಆದ್ಯತೆ ಇಲ್ಲ. ಅಲ್ಲದೆ ರೋಗಗ್ರಸ್ಥವಾಗಿರುವ ಕುರಿಯನ್ನು ಬಲಿ ನೀ ಡುವುದಿಲ್ಲ, ಕುರಿಯ ಕೊಂಬು ಮುರಿದಿದ್ದರೂ ಸಹ ಬಲಿ ನೀಡಲು ಅನರ್ಹ ವಾಗಿರುತ್ತದೆ. ಈ ಸಮಯದಲ್ಲಿ ಗಾಳಿ ಮಳೆವಾಗಿದ್ದು, ಇದನ್ನು ಶೀತದಿಂದ ಸಂರಕ್ಷಿಸು ವುದು, ಅಂಗಗಳಿಗೆ ಗಾಯವಾಗದಂತೆ ನೋಡಿ ಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ ಎಂದು ಮುಸ್ಲಿಂ ಮುಖಂಡ ಫ‌ಸಲ್‌ ಪಾಶ ಹೇಳುತ್ತಾರೆ.

ಕುರಿ ಮಾಂಸದ ದರ 400 ರಿಂದ 500 ರೂ.: ಒಂದು ಕುರಿ ತೂಕಕ್ಕೆ ತಕ್ಕಂತೆ 10ರಿಂದ 25 ಸಾ ವಿರ¨ ‌ ವರೆಗೂ ಮಾರಾಟವಾಗುತ್ತದೆ. ಪ್ರಸ್ತುತ ಮಾರುಕ ಟ್ಟೆ ಯಲ್ಲಿ ಕುರಿ ಮಾಂಸದ ದರ 400 ರಿಂದ 500 ರೂ. ವರೆಗೆ ಇದೆ. ಕೊಂಡುಕೊಳ್ಳುವವರು ಉಂಡೆ ಕುರಿಯ ನ್ನೇ ತೂಕಕ್ಕೆ ಹಾಕಿ ಕಿಲೋಗೆ ಸಾವಿರದಂತೆ ನಿಗದಿ ಮಾಡಿ ಮಾರಾಟ ಮಾಡಿ ಕೊಳ್ಳುತ್ತಾರೆ. ಮಾರಾಟ ಮಾಡಲು ಹಲವು ತಿಂಗಳಿ ನಿಂದ ಕುರಿಗಳನ್ನು ತಯಾರು ಮಾಡಲಾ ಗುತ್ತದೆ. ಕೊಬ್ಬಿದ್ದ, ಹೆಚ್ಚು ತೂಕವುಳ್ಳ, ಕೊಬ್ಬಿ ರುವ ಕುರಿಗಳಿಗೆ ಬೇಡಿಕೆ ಇರುವ ಕಾರಣ ನಾವು ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಬಕ್ರೀದ್‌ ಹಬ್ಬ ಇನ್ನೇನು ಒಂದು ತಿಂಗ‌ಳು ಇದ್ದಂತೆ ಕುರಿಗೆ ಹೆಚ್ಚು ಆರೈಕೆ ಮಾಡಲಾಗುತ್ತದೆ. ಪೌಷ್ಠಿಕ ಆಹಾರ, ತಾಜ ಸೊಪ್ಪು ಹೀಗೆ ಹತ್ತು ಹಲವಾರು ರೀತಿಯಲ್ಲಿ ಕುರಿಯನ್ನು ನೋಡಿಕೊಳ್ಳಲಾಗುತ್ತದೆ. ಮಗುವಿನಂತೆ ಪೋಷಿಸುವುದು ಮುಖ್ಯ ವಾಗಿರುತ್ತದೆ ಅಂತಹ ಕುರಿಯನ್ನು ಬಕ್ರೀದ್‌ ಹಬ್ಬದಲ್ಲಿ ಅಲ್ಲಹನಿಗೆ ಬಲಿ ನೀಡಲಾಗುತ್ತದೆ ಎಂದು ಜಾಮೀಯ ಮಸೀದಿಯ ಹೈದರ್‌ ಸಾಬ್‌ ಹೇಳುತ್ತಾರೆ.

ಬಕ್ರೀದ್‌ ಹಬ್ಬ ಮಾಡುವ ವಿಶೇಷತೆ : ಪ್ರವಾದಿಗಳಲ್ಲಿ ಒಬ್ಬರಾದ ಪ್ರವಾದಿ ಇಬ್ರಾಹಿಂ ತಮ್ಮ ಮಗ ಇಸ್ಮಾಯಿಲ್‌ನನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್‌-ಉಲ್‌-ಅದಾ (ಬಕ್ರೀದ್‌) ಎನ್ನಲಾಗುತ್ತದೆ. ತನ್ನ ಮಗನನ್ನು ಬಲಿ ಕೊಡುವಾಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಿಸ್ಮಿಲ್ಲಾ ಎಂದು ಹೇಳಿ ಮಗನ ಕತ್ತಿನ ಮೇಲೆ ಹಲವಾರು ಬಾರಿ ಕತ್ತಿ ಹರಿಸಿದರೂ ಕತ್ತು ಕುಯ್ಯುವುದಿಲ್ಲ. ಆ ವೇಳೆಯಲ್ಲಿ ದೇವದೂತ ಜಿಬ್ರಾಯಿಲ್‌ ಪ್ರತ್ಯಕ್ಷರಾಗಿ ಒಂದು ದುಂಬಿ (ದಷ್ಟಪುಷ್ಟ ಕುರಿ)ಯನ್ನು ಆ ಜಾಗದಲ್ಲಿ ಇಡುತ್ತಾರೆ. ಆಗ ಸತ್ಯ ನಿಷ್ಠೆಯಿಂದ ಆ ಕುರಿಯನ್ನು ಬಲಿ ನೀಡುವ ಮೂಲಕ ಇಸ್ಲಾಂ ಧರ್ಮದಲ್ಲಿ ಇದೊಂದು ಸುವರ್ಣ ದಿನವಾಗಿ ಬಿಡುತ್ತದೆ.

ಬಲಿಕೊಟ್ಟ ಪ್ರಾಣಿಯ ಮಾಂಸ ಮೂರು ಭಾಗ: ಬಕ್ರೀದ್‌ ಹಬ್ಬದಲ್ಲಿ ಬಲಿ ನೀಡಿದ ಪ್ರಾಣಿಯ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ಸಂಬಂಧಿಕರಿಗೆ, ಎರಡನೇ ಭಾಗವನ್ನು ಬಡವರಿಗೆ ಹಂಚುತ್ತಾರೆ. ಮೂರನೇ ಭಾಗವನ್ನು ಮನೆಯವರಿಗಾಗಿ ಉಳಿಸಿಕೊಳ್ಳುವ ಸಂಪ್ರದಾಯವಿದೆ. ಪ್ರವಾದಿ ಇಬ್ರಾಹಿಂನ ದೈವಾಜ್ಞೆ ಪಾಲನೆಯ ನೆನಪನ್ನು ಬಲಿದಿನದಂದು ಪುನರಾವರ್ತನೆಗೆ ಒಳಪಡಿಸುವುದು ವಿಶೇಷ.

ಬಕ್ರೀದ್‌ ಹಬ್ಬದಲ್ಲಿ ಕುರಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ನಮ್ಮ ಮನೆಯಲ್ಲಿ 10-15 ಕುರಿಗಳನ್ನು ಸಾಕಲಾಗಿದೆ. ಮೂರು ಕುರಿಗಳನ್ನು ಈಗಾಗಲೇ ಮಾರಿದ್ದೇವೆ. ಇನ್ನುಳಿದ ಕುರಿಗಳನ್ನು ಹಾಗೇಯೆ ಉಳಿಸಿಕೊಂಡು ಸಾಕಾಣಿಕೆ ಮಾಡಲಾಗುತ್ತಿದೆ. ಮುಸಲ್ಮಾನರು ಮನೆಯ ಹತ್ತಿರವೇ ಬಂದು ಖರೀದಿ ಸುವುದರಿಂದ ಮನೆ ಬಾಗಿಲಿಗೆ ಹಣ ಬರುವಂತೆ ಆಗಿದೆ. ತಾಲೂಕಿನಲ್ಲಿ ಕುರಿ ಸಾಕಾಣಿಕೆ ಹೆಚ್ಚು ಮಾಡುವುದರಿಂದ ಒಂದು ಕುರಿ ಮತ್ತು ಉಣ್ಣೆ ನಿಗಮವನ್ನು ಸ್ಥಾಪಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ – ರಮೇಶ್‌, ಕುರಿ ಸಾಕಾಣಿಕೆ ಬೈಚಾಪುರ

ಟಾಪ್ ನ್ಯೂಸ್

Electricity

Adani;ಬಿಲ್‌ ಕೊಡದ್ದಕ್ಕೆ ಬಾಂಗ್ಲಾಕ್ಕೆ ಆಂಶಿಕ ವಿದ್ಯುತ್‌

1-adsadsa

Pakistan;ಬಾಂಬ್‌ ದಾಳಿಗೆ 5 ಮಕ್ಕಳು ಸೇರಿ 9 ಜನ ಸಾ*ವು

1-a-chenab

China ಚಿತಾವಣೆ ಹಿನ್ನೆಲೆ: ಚೆನಾಬ್‌ ಬ್ರಿಡ್ಜ್ ಮಾಹಿತಿ ಸಂಗ್ರಹಿಸುತ್ತಿರುವ ಪಾಕ್‌

yogi-2

UP; ‘ಜುಡೇಂಗೆ ಜೀತೇಂಗೆ’: ಸಿಎಂ ಯೋಗಿ ಹೇಳಿಕೆಗೆ ಎಸ್‌ಪಿ ತಿರುಗೇಟು!

GST

GST; ಅಕ್ಟೋಬರಲ್ಲಿ 1.87 ಲಕ್ಷ ಕೋಟಿ ಸಂಗ್ರಹ: 2ನೇ ಗರಿಷ್ಠ!

1-a-rb

Rohit Bal; ಖ್ಯಾತ ಫ್ಯಾಷನ್‌ ಡಿಸೈನರ್‌ ರೋಹಿತ್‌ ಬಲ್‌ ನಿಧನ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

puttige-2

Udupi; ಗೀತಾರ್ಥ ಚಿಂತನೆ 82: ಮೊದಲು ವಿಷಾದ ಯೋಗ, ಕೊನೆಗೆ ಅಮೃತ ಯೋಗ!

congress

Goa; 8 ಶಾಸಕರ ಅನರ್ಹಕ್ಕೆ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿ ವಜಾ

Suresh Gopi

AMMA; ಶೀಘ್ರದಲ್ಲೇ ನೂತನ ಸಮಿತಿ: ಸುರೇಶ್‌ ಗೋಪಿ

Electricity

Adani;ಬಿಲ್‌ ಕೊಡದ್ದಕ್ಕೆ ಬಾಂಗ್ಲಾಕ್ಕೆ ಆಂಶಿಕ ವಿದ್ಯುತ್‌

sens-2

Deepavali; ಮುಹೂರ್ತ ಟ್ರೇಡಿಂಗ್‌ನಲ್ಲಿ 448 ಅಂಕ ಏರಿದ ಸೆನ್ಸೆಕ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.