Jr NTR ಅಭಿಮಾನಿ ಆತ್ಮಹತ್ಯೆ: ಆಂಧ್ರದಲ್ಲಿ ರಾಜಕೀಯ ತಿರುವು ಪಡೆದುಕೊಂಡ ಶ್ಯಾಮ್ ಪ್ರಕರಣ
Team Udayavani, Jun 27, 2023, 4:09 PM IST
ಹೈದರಾಬಾದ್: ಟಾಲಿವುಡ್ ನಟ ಜೂ.ಎನ್‌ಟಿಆರ್ ಅವರ ಅಭಿಮಾನಿಯೊಬ್ಬನ ಆತ್ಮಹತ್ಯೆ ಪ್ರಕರಣ ಆಂಧ್ರ ಪ್ರದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ.
ಜೂ.ಎನ್‌ಟಿಆರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಶ್ಯಾಮ್ (20) ಭಾನುವಾರ ಆಂಧ್ರಪ್ರದೇಶದ ಕೋನಸೀಮಾದಲ್ಲಿನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಮತ್ತು ಕೆಲ ಟಿಡಿಪಿ ನಾಯಕರು ಶ್ಯಾಮ್ ಅವರ ಸಾವು ಆತ್ಮಹತ್ಯೆಯಿಂದ ಆದದ್ದಲ್ಲ, ಅದೊಂದು ವ್ಯವಸ್ಥಿತ ಕೊಲೆ. ಇದರಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
“ಇಜಿ ಜಿಲ್ಲೆಯ ಚಿಂತಲೂರಿನಲ್ಲಿ ಶ್ಯಾಮ್ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಸಾವಿನ ಸುತ್ತ ಹಲವು ಅನುಮಾನಗಳು ಕೇಳಿ ಬರುತ್ತಿದೆ. ಇದರಲ್ಲಿ ವೈಎಸ್‌ಆರ್‌ಸಿಪಿ ಸದಸ್ಯರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಷಯದ ಬಗ್ಗೆ ಕೂಲಂಕಷ ತನಿಖೆ ನಡೆಸಿ, ನ್ಯಾಯ ಸಿಗುವಂತೆ ಮಾಡಬೇಕೆಂದು ಆಗ್ರಹಿಸುತ್ತೇನೆ. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು” ಘಟನೆ ಬಗ್ಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮ್ಯಾಗ್‌ಜಿನ್‌ಗಾಗಿ ತಂದೆ ಜೊತೆಯೇ ಲಿಪ್ ಲಾಕ್ ಮಾಡಿದ್ದ ನಟಿ: ಪೂಜಾ ಭಟ್ ವಿವಾದಗಳೇನು?
ಆದರೆ ಪೊಲೀಸರು ಆರೋಪಗಳನ್ನು ತಳ್ಳಿ ಹಾಕಿದ್ದು, ಶ್ಯಾಮ್ ಎಂಬ 20 ವರ್ಷದ ಯುವಕ ಎರಡು ದಿನಗಳ ಹಿಂದೆ (ಜೂನ್ 25) ಬೆಳಿಗ್ಗೆ ಕೋನಸೀಮಾ ಜಿಲ್ಲೆಯ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ. ನಮ್ಮ ಪ್ರಾಥಮಿಕ ತನಿಖೆಯಲ್ಲಿಇದು ಆತ್ಮಹತ್ಯೆ ಪ್ರಕರಣವೆಂದು ಪರಿಗಣಿಸಲಾಗಿದೆ ಎಂದು ಕೋನಸೀಮಾ ಪೊಲೀಸ್ ಅಧಿಕಾರಿ ಪಿ ಶ್ರೀಧರ್ ಹೇಳಿದ್ದಾರೆ.
ಶ್ಯಾಮ್ ಮೊದಲು ಬ್ಲೇಡ್‌ನಿಂದ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದಾನೆ. ಆತನ ಜೇಬಿನಲ್ಲಿ ಬ್ಲೇಡ್ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನೇಣು ಬಿಗಿದುಕೊಂಡು ಸಾವು ಸಂಭವಿಸಿದೆ ಎಂದು ಶವಪರೀಕ್ಷೆ ವರದಿ ತೋರಿಸಿದೆ ಎಂದು ಪಿ ಶ್ರೀಧರ್ ಹೇಳಿದ್ದಾರೆ.
ಇದಲ್ಲದೇ ಶ್ಯಾಮ್ ಪ್ರೀತಿಯಲ್ಲಿದ್ದ. ಕಲಿಯುವದರಲ್ಲಿಯೂ ತುಂಬಾ ದುರ್ಬಲನಾಗಿದ್ದ. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಕ ತನಿಖೆಯಲ್ಲಿ ತಿಳಿದು ಬಂದಿದೆ. ವೈಎಸ್‌ಆರ್‌ಸಿಪಿ ಸದಸ್ಯರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಅವರು ಹೇಳಿದ್ದಾರೆ.
ಸದ್ಯ ಶ್ಯಾಮ್ ಅವರಿಗೆ ನ್ಯಾಯ ಸಿಗಬೇಕೆಂದು ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಜೂ.ಎನ್ ಟಿಆರ್ ಅಬಿಮಾನಿಗಳ ಶ್ಯಾಮ್ ಅವರು ತನ್ನ ನೆಚ್ಚಿನ ನಟನನ್ನು ಭೇಟಿಯಾದ ಪೋಟೋವನ್ನು ಹಾಕಿ ಆಗ್ರಹಿಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.