ಶೇ.6.7ರ ದರದಲ್ಲಿ ಆರ್ಥಿಕ ಪ್ರಗತಿ: ಎಸ್ ಆ್ಯಂಡ್ ಪಿ ಭವಿಷ್ಯ
ಮುಂದಿನ 3 ವರ್ಷಗಳಲ್ಲಿ ಇದೇ ರೀತಿ ಬೆಳವಣಿಗೆ
Team Udayavani, Jun 28, 2023, 7:45 AM IST
ನವದೆಹಲಿ: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡು, ಮುಂದಿನ ಮೂರು ವರ್ಷಗಳಲ್ಲಿ ಭಾರತವು ಸರಾಸರಿ ಶೇ.6.7ರ ದರದಲ್ಲಿ ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಎಸ್ ಆ್ಯಂಡ್ ಪಿ ಜಾಗತಿಕ ರೇಟಿಂಗ್ ಸಂಸ್ಥೆ ಭವಿಷ್ಯ ನುಡಿದಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪ್ರಗತಿ ದರದ ನಿರೀಕ್ಷೆಯನ್ನು ಶೇ.6ರಲ್ಲೇ ಅಂದರೆ ಯಥಾಸ್ಥಿತಿಯಲ್ಲೇ ಮುಂದುವರಿಸಿದ್ದು, 2025-26ರಲ್ಲಿ ಆರ್ಥಿಕ ಅಭಿವೃದ್ಧಿಯ ದರವು ಶೇ.6.9ಕ್ಕೇರಲಿದೆ ಎಂದು ಅಂದಾಜಿಸಿದೆ. ಪ್ರಸ್ತುತ ನಾವು ಭಾರತ, ವಿಯೆಟ್ನಾಂ ಮತ್ತು ಫಿಲಿಪ್ಪೀನ್ಸ್ನಲ್ಲಿ ಅತ್ಯಂತ ವೇಗದ ಅಂದರೆ ಸುಮಾರು ಶೇ.6ರ ದರದಲ್ಲಿ ಪ್ರಗತಿ ಕಾಣುತ್ತಿದ್ದೇವೆ ಎಂದೂ ರೇಟಿಂಗ್ ಸಂಸ್ಥೆ ಹೇಳಿದೆ. ಜತೆಗೆ, ಆರ್ಬಿಐ 2024ರ ಆರಂಭದಲ್ಲೇ ಸಾಲದ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡುವುದು ಸೂಕ್ತ ಎಂದೂ ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ಎಸ್ ಆ್ಯಂಡ್ ಪಿ ರೇಟಿಂಗ್ ಸಂಸ್ಥೆ ಚೀನಾದ ಜಿಡಿಪಿ ಪ್ರಗತಿ ದರದ ಅಂದಾಜನ್ನು ಮತ್ತಷ್ಟು ಇಳಿಸಿದೆ. ಈ ಹಿಂದೆ ಇದನ್ನು ಶೇ.5.5 ಎಂದು ಅಂದಾಜಿಸಿದ್ದ ಸಂಸ್ಥೆ, ಈಗ ಅದನ್ನು ಶೇ.5.2ಕ್ಕೆ ಇಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.